'ಲಿಪ್ ಸ್ಟಿಕ್ ಅಂಡರ್...' ಸಿನೆಮಾ ಪ್ರಮಾಣಪತ್ರ ವಿವಾದ ನಾಚಿಕೆಗೇಡು: ಅಪರ್ಣ ಸೇನ್

ಭಾರತದಲ್ಲಿ ಬಿಡುಗಡೆಗೆ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಸಿನೆಮಾಗೆ ಪ್ರಮಾಣ ಪತ್ರ ನೀಡಲು ಸಿನೆಮಾ ಪ್ರಾಮಾಣಪತ್ರ ಕೇಂದ್ರ ಮಂಡಳಿ (ಸಿ ಎಫ್ ಬಿ ಸಿ) ನಿರಾಕರಿಸಿರುವ ನಡೆಯನ್ನು
ಖ್ಯಾತ ನಿರ್ದೇಶಕಿ ಅಪರ್ಣಾ ಸೇನ್
ಖ್ಯಾತ ನಿರ್ದೇಶಕಿ ಅಪರ್ಣಾ ಸೇನ್
ಕೋಲ್ಕತ್ತಾ: ಭಾರತದಲ್ಲಿ ಬಿಡುಗಡೆಗೆ  'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಸಿನೆಮಾಗೆ ಪ್ರಮಾಣ ಪತ್ರ ನೀಡಲು ಸಿನೆಮಾ ಪ್ರಾಮಾಣಪತ್ರ ಕೇಂದ್ರ ಮಂಡಳಿ (ಸಿ ಎಫ್ ಬಿ ಸಿ) ನಿರಾಕರಿಸಿರುವ ನಡೆಯನ್ನು ನಾಚಿಕೆಗೇಡು ಎಂದು ಖ್ಯಾತ ನಿರ್ದೇಶಕಿ ಅಪರ್ಣಾ ಸೇನ್ ಖಂಡಿಸಿದ್ದಾರೆ. 
ಅಲಂಕೃತ ಶ್ರೀವಾಸ್ತವ ನಿರ್ದೇಶನದ ಈ ಸಿನೆಮಾದಲ್ಲಿ ಅಪರ್ಣ ಅವರ ಪುತ್ರಿ ನಟಿ ಕೊಂಕಣ ಸೇನ್ ಶರ್ಮ ನಟಿಸಿದ್ದಾರೆ. 
"ಇದು ನಾಚಿಕೆಗೇಡು. ನಾವು ಪ್ರಮಾಣಪತ್ರ ನೀಡಲಿದ್ದೇವೆ ಎಂಬ ಒಳ್ಳೆಯ ಬುದ್ಧಿ ಸೆನ್ಸಾರ್ ಮಂಡಳಿಗೆ ಬರಲಿದೆ ಎಂದು ನಂಬುತ್ತೇನೆ. ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತಂದಿರುವ ಪ್ರಕರಣ ಇದು" ಎಂದು ಅವರ ನಿರ್ದೇಶನದ ಮುಂದಿನ ಚಿತ್ರ 'ಸೋನಾಟಾ' ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದಾರೆ. 
ಮಹಿಳಾ ಕೇಂದ್ರಿತ ಚಿತ್ರ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಈಗಾಗಲೇ ಕೆಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿ ಮನ್ನಣೆ ಪಡೆದಿದೆ. ಆದರೆ ಸೆನ್ಸಾರ್ ಮಂಡಳಿಯ ಪ್ರಕಾರ ಇದರಲ್ಲಿ ಯಥೇಚ್ಛ ಲೈಂಗಿಕ ದೃಶ್ಯಗಳಿದ್ದು, ನಿಂದನೀಯ ಮಾತುಗಳನ್ನು ಒಳಗೊಂಡಿದೆ ಎಂದು ಪ್ರಮಾಣಪತ್ರ ನೀಡಲು ನಿರಾಕರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com