'ರಾಜಕುಮಾರ'ನ ಬೊಂಬೆ ಬಂದದ್ದು ತಂಜಾವೂರಿನಿಂದ!

ಪುನೀತ್ ರಾಜಕುಮಾರ್ ಅಭಿನಯದ 'ರಾಜಕುಮಾರ' ಸಿನೆಮಾದ ಟ್ರೇಲರ್ ಮತ್ತು ಹಾಡುಗಳು ದಾಖಲೆ ಬಾರಿ ವೀಕ್ಷಿಸಲಾಗಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ದಟ್ಟವಾಗಿದ್ದು, ಬೊಂಬೆ ಹಾಡು
'ರಾಜಕುಮಾರ'ದಲ್ಲಿ ಪುನೀತ್
'ರಾಜಕುಮಾರ'ದಲ್ಲಿ ಪುನೀತ್
ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ 'ರಾಜಕುಮಾರ' ಸಿನೆಮಾದ ಟ್ರೇಲರ್ ಮತ್ತು ಹಾಡುಗಳು ದಾಖಲೆ ಬಾರಿ ವೀಕ್ಷಿಸಲಾಗಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ದಟ್ಟವಾಗಿದ್ದು, ಬೊಂಬೆ ಹಾಡು ಸಿನೆಮಾದ ಮುಖ್ಯ ಅಂಶಗಳಲ್ಲಿ ಒಂದಾಗಿದೆ. 'ಕಸ್ತೂರಿ ನಿವಾಸ'ದ 'ಆಡಿಸಿ ನೋಡಿ ಬೀಳಿಸಿ ನೋಡು' ಹಾಡಿನಿಂದ ಸ್ಫೂರ್ತಿ ಪಡೆದಿರುವ ಈ ಹೊಸ ಹಾಡಿನಲ್ಲಿ ಅಂತಹುದೇ ಒಂದು ಬೊಂಬೆ ಕೂಡ ಕಾಣಿಸಿಕೊಂಡಿರುವುದು ವಿಶೇಷ. 
'ಬೊಂಬೆ ಹೇಳುತೈತೆ' ಹಾಡಿನಲ್ಲಿ ಕಾಣಿಸಿಕೊಂಡಿರುವ ಈ ಬೊಂಬೆ ತಂಜಾವೂರಿನಿಂದ ಬಂದದ್ದಂತೆ. "ಕರ್ನಾಟಕದ ವಿವಿಧ ಕಡೆ ಇಂತಹ ಬೊಂಬೆಗಾಗಿ ಹುಡುಕಿದೆವು, ಆದರೆ ಸಿಗಲಿಲ್ಲ. ಕೊನೆಗೆ ನಮ್ಮ ಕಲಾನಿರ್ದೇಶಕ ಶಿವಕುಮಾರ್ ಆ ಬೊಂಬೆಗಳನ್ನು ತಂಜಾವೂರಿನಲ್ಲಿ ಕಂಡು ಕೊಂಡು ತಂದರು" ಎಂದು ತಿಳಿಸುತ್ತಾರೆ ನಿರ್ದೇಶಕ ಸಂತೋಷ್ ಆನಂದರಾಮ್. 
ಮೊದಲಿಗೆ ಈ ಬೊಂಬೆಯನ್ನು ಬಳಸುವ ಯೋಜನೆಯಿರಲಿಲ್ಲ ಆದರೆ ಚಿತ್ರೀಕರಣದ ಸಮಯದಲ್ಲಿ ತುರ್ತಾಗಿ ಹೊಳೆದದ್ದು ಎಂದು ತಿಳಿಸುವ ನಿರ್ದೇಶಕ "ಇದು ಮೊದಲಿಗೆ ಚಿಂತಿಸಿದ್ದಲ್ಲ ಆದರೆ ಚಿತ್ರೀಕರಣದ ವೇಳೆ ಹೊಳೆಯಿತು. ಹೀರೊ ಪಾತ್ರ ಜೀವನದಲ್ಲಿ ಏರು ತಗ್ಗುಗಳಿದ್ದರು ನಾವು ಮುಂದುವರೆಯಬೇಕು ಎಂದು ನಂಬುತ್ತಾನೆ ಆದುದರಿಂದ ಅದಕ್ಕೆ ಈ ಬೊಂಬೆ ಸಂಕೇತವಾಯಿತು" ಎನ್ನುತ್ತಾರೆ. 
ಸಾಮಾಜಿಕ ಜಾಲತಾಣದಲ್ಲಿ ಸಿನೆಮಾ ಬಗ್ಗೆ ಸ್ಪರ್ಧೆ ಕೂಡ ಚಿತ್ರತಂಡ ನಡೆಸಿದ್ದು ಗೆದ್ದವರಿಗೆ ಈ ಬೊಂಬೆಯನ್ನು ಬಹುಮಾನವಾಗಿ ನೀಡಲಾಗುವುದಂತೆ, ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆಗೆ ಹರ್ಷ ವ್ಯಕ್ತಪಡಿಸುವ ಸಂತೋಷ್ "೧೩ ದಿನಗಳಲ್ಲಿ ಟ್ರೇಲರ್ ಅನ್ನು ಒಂದು ವರೆ ಕೋಟಿಗೆ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಅಪ್ಪು ನೃತ್ಯದ ಟೀಸರ್ ೨ ದಿನಗಳಲ್ಲಿ ೮.೨೫ ಲಕ್ಷ ಬಾರಿ ವೀಕ್ಷಿಸಿದ್ದಾರೆ" ಎನ್ನುತ್ತಾರೆ. 
ಪ್ರಿಯಾ ಆನಂದ್ ನಾಯಕ ನಟಿಯಾಗಿದ್ದು, ಹರಿಕೃಷ್ಣ ಸಂಗೀತ ಮತ್ತು ವೆಂಕಟೇಶ್ ಅನುರಾಗ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com