
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ರಾಜ ಕುಮಾರ್ ಸಿನಿಮಾ ಈ ಶುಕ್ರವಾರ ಬಿಡುಗಡೆಗೊಳ್ಳಲಿದೆ. ನಿರ್ಮಾಪಕರಾದ ವಿಜಯ್ ಕಿರಂಗದೂರ್ ಮತ್ತು ಕಾರ್ತಿಕ್ ಗೌಡ ರಿಲೀಸ್ ಗೆ ಎಲ್ಲಾ ಸಿದ್ಧತೆ ನಡೆಸಿದ್ದಾರೆ.
ನಿರ್ದೇಶಕ ಸಂತೋಷ ಅನಂದರಾಮ್ ಚಿತ್ರ ಬಿಡುಗಡೆಯೂ ಮುನ್ನ ಶಿರಡಿ ಸಾಯಿಬಾಬಾ ದರ್ಶನ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲೂ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿವೆ. ಕರ್ನಾಟಕ ಹೊರತು ಪಡಿಸಿ 10 ಸ್ಥಳಗಳಲ್ಲಿ ಬಿಡುಗಡೆಗೆ ಸಿದ್ಧತೆ ನಡೆದಿದೆ.
ಸಿಂಗಾಪೂರ , ಅಮರಿಕಾಗಳಲ್ಲಿ ಮಾರ್ಚ್ 29 ರಂದು ರಾಜಕುಮಾರ ರಿಲೀಸ್ ಆಗಲಿದೆ, ಕೆನಡಾದಲ್ಲಿ ಏಪ್ರಿಲ್ 1 ಹಾಗೂ ಲಂಡನ್ ನಲ್ಲಿ ಎಪ್ರಿಲ್ 7 ರಂದು ರಿಲೀಸ್ ಆಗಲಿದೆ.ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ನಂತರ ಸಂತೋಷ್ ಆನಂದರಾಮ್ ನಿರ್ದೇಶಿಸುತ್ತಿರುವ 2ನೇ ಸಿನಿಮಾ ಇದಾಗಿದೆ.
Advertisement