ಯುಗಾದಿ ಹಬ್ಬಕ್ಕೆ ಪೂರಿ ಜಗನ್ನಾಥ್ ನಿರ್ದೇಶನದ 'ರೋಗ್' ಬಿಡುಗಡೆ

ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಪಡೆದಿರುವ ಪೂರಿ ಜಗನ್ನಾಥ್ ನಿರ್ದೇಶನದ 'ರೋಗ್' ಸಿನೆಮಾ ಯುಗಾದಿ ಹಬ್ಬದವಾದ ಮಾರ್ಚ್ ೨೯ಕ್ಕೆ ಬಿಡುಗಡೆಗೆ ಸಜ್ಜಾಗಿದೆ.
ಇಶಾನ್
ಇಶಾನ್
ಬೆಂಗಳೂರು: ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಪಡೆದಿರುವ ಪೂರಿ ಜಗನ್ನಾಥ್ ನಿರ್ದೇಶನದ 'ರೋಗ್' ಸಿನೆಮಾ ಯುಗಾದಿ ಹಬ್ಬದವಾದ ಮಾರ್ಚ್ ೨೯ಕ್ಕೆ ಬಿಡುಗಡೆಗೆ ಸಜ್ಜಾಗಿದೆ. 
ನಿರ್ಮಾಪಕ ಸಿ ಆರ್ ಮನೋಹರ್ ಅವರ ಸೋದರಳಿಯ ಇಶಾನ್ ಈ ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದು, ಇದು ನೆನಪಿನಲ್ಲುಳಿಯುವಂತೆ ಮಾಡಲು ಅವರು ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ಆದುದರಿಂದ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರಣಗೊಂಡಿರುವ 'ರೋಗ್' ಏಕಕಾಲಕ್ಕೆ ವಿಶ್ವದಾದ್ಯಂತ ೧೦೦೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 
"ಇಶಾನ್ ಪಾದಾರ್ಪಣೆಯ ಚಿತ್ರ ಹಿಂದೂಗಳಿಗೆ ಹೊಸವರ್ಷದ ಆರಂಭವಾದ ಶುಭ ದಿನವಾದ ಯುಗಾದಿಯಂದು ಬಿಡುಗಡೆಯಾಗುತ್ತಿರುವುದಕ್ಕೆ ನಮಗೆಲ್ಲಾ ಸಂತಸವಾಗಿದೆ" ಎನ್ನುತ್ತಾರೆ ಮನೋಹರ್. 
ಸುಮಾರು ೧೫ ವರ್ಷಗಳ ನಂತರ ಕನ್ನಡ ಚಿತ್ರದ ನಿರ್ದೇಶನಕ್ಕೆ ಹಿಂದಿರುಗಿರುವ ಪೂರಿ ಜಗನ್ನಾಥ್ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ ಎನ್ನುತ್ತಾರೆ ಮನೋಹರ್. 
ಈ ಥ್ರಿಲ್ಲರ್ ನಲ್ಲಿ ಇಶಾನ್ ಜೊತೆಗೆ ಮನ್ನಾರ ಚೋಪ್ರಾ, ಏಂಜೆಲಾ ಕ್ರಿಸಿನ್ಸ್ಕಿ, ಠಾಕೂರ್ ಅನೂಪ್ ಸಿಂಗ್ ಕೂಡ ನಟಿಸಿದ್ದಾರೆ, ಸುನಿಲ್ ಕಶ್ಯಪ್ ಸಂಗೀತ ನೀಡಿದ್ದು, ಮುಖೇಶ್ ಜೆ ಅವರ ಛಾಯಾಗ್ರಹಣ ಸಿನೆಮಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com