

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ತಮ್ಮ ಟ್ವಿಟ್ಟರ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ನಿರ್ಮಾಪಕ ಹಾಗೂ ಫರಾ ಖಾನ್ ಪತಿ ಶಿರಿಶ್ ಕುಂದೇರ್ ಕ್ಷಮೆ ಯಾಚಿಸಿದ್ದಾರೆ.
ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಶಿರಿಶ್ ಕುಂದೇರ್ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಇದಾದ ನಂತರ ಶಿರಿಶ್ ಟ್ವಿಟ್ಟರ್ ನಲ್ಲಿ ಕ್ಷಮೆ ಕೋರಿದ್ದಾರೆ.
ತಮ್ಮ ಟ್ವಿಟ್ಟರ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಶಿರಿಶ್ ನಂತರ ಅದನ್ನು ಡಿಲಿಟ್ ಮಾಡಿದ್ದರು. ಅಯೋಧ್ಯೆ ಠಾಕೂರ್ ದ್ವಾರಾ ಟ್ರಸ್ಟ್ ನ ಕಾರ್ಯದರ್ಶಿ ಅಮಿತ್ ಕುಮಾರ್ ತಿವಾರಿ ಶಿರಿಶಿ ಕುಂದೇರ್ ವಿರುದ್ಧ ದೂರು ದಾಖಲಿಸಿದ್ದರು.
ನಾನು ಯಾರೋಬ್ಬರ ಭಾವನೆಗಳಿಗೂ ನೋವುಂಟು ಮಾಡುವುದಿಲ್ಲ, ಹೀಗಾಗಿ ಭೇಷರತ್ ಕ್ಷಮೆ ಕೋರುತ್ತೇನೆ ಎಂದು ಶಿರಿಶ್ ಟ್ವೀಟ್ ಮಾಡಿದ್ದಾರೆ.
Advertisement