ಬಾಹುಬಲಿ೨ ಅಂತಿಮ ಎಂದು ನಿರ್ದೇಶಕ ಎಸ್ ಎಸ್ ರಾಜಮೌಳಿ ಘೋಷಿಸಿದ್ದು, ಇದರ ಮುಂದುವರೆದ ಭಾಗ ಇರುವುದಿಲ್ಲ ಎಂದು ಸ್ಪಷ್ಟವಾಗಿದೆ. ಆದರೆ ಮತ್ತೊಂದು ಯೋಜನೆಯ ಪ್ರಕಾರ ಎಲ್ಲವು ಸುಸೂತ್ರವಾಗಿ
ಬಾಹುಬಲಿ೨ ಅಂತಿಮ ಎಂದು ನಿರ್ದೇಶಕ ಎಸ್ ಎಸ್ ರಾಜಮೌಳಿ ಘೋಷಿಸಿದ್ದು, ಇದರ ಮುಂದುವರೆದ ಭಾಗ ಇರುವುದಿಲ್ಲ ಎಂದು ಸ್ಪಷ್ಟವಾಗಿದೆ. ಆದರೆ ಮತ್ತೊಂದು ಯೋಜನೆಯ ಪ್ರಕಾರ ಎಲ್ಲವು ಸುಸೂತ್ರವಾಗಿ ನಡೆದರೆ 'ಬಾಹುಬಲಿ' ಧಾರಾವಾಹಿಯಾಗಿ ಕಿರುತೆರೆಯಲ್ಲಿ ಮೂಡಿ ಬರಲಿದೆ.
ಮೂಲಗಳು ತಿಳಿಸುವಂತೆ ಇದು ಮಾಮೂಲಿ ಧಾರಾವಾಹಿಗಳಂತೆ ನೂರಾರು ದಿನ ಮೂಡದೆ, ೧೦-೧೫ ಭಾಗಗಳಷ್ಟೇ ಮೂಡಿಬರಲಿದೆಯಂತೆ ಮತ್ತು ಇದು ಸಿನೆಮಾ ನೋಡುವ ಅನುಭವವನ್ನೇ ನೀಡಲಿದೆ ಎನ್ನಲಾಗಿದೆ.
ನಿರ್ದೇಶಕ ಚೆನ್ನೈನಲ್ಲಿದ್ದಾಗ, ಟಿವಿ ಧಾರಾವಾಹಿ, ಗೇಮ್ಸ್ ಮತ್ತು ಧಾರಾವಾಹಿ ೨೦೧೮ ರಲ್ಲಿ ಮೂಡಲಿರುವ ಬಗ್ಗೆ ಮಾತನಾಡಿದ್ದರು.
ಹೈದರಾಬಾದ್ ನ ರಾಮೋಜಿ ರಾವ್ ಸ್ಟುಡಿಯೋದಲ್ಲಿ ಹಾಕಿರುವ ಬಾಹುಬಲಿ ಸೆಟ್ ನಲ್ಲಿಯೇ ಧಾರಾವಾಹಿ ಚಿತ್ರೀಕರಣಗೊಳ್ಳಲಿದೆ ಎನ್ನಲಾಗಿದೆ.