ಪ್ರದೀಪ್ ಕುಮಾರ್
ಪ್ರದೀಪ್ ಕುಮಾರ್

ಮಡದಿಯೊಂದಿಗೆ ವಿರಸ: ತೆಲುಗು ಕಿರುತೆರೆ ನಟ ಪ್ರದೀಪ್ ಆತ್ಮಹತ್ಯೆಗೆ ಶರಣು

ಟಾಲಿವುಡ್ ಕಿರುತೆರೆ ನಟ ಪ್ರದೀಪ್ ಕುಮಾರ್ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ...
Published on
ಹೈದರಾಬಾದ್: ಟಾಲಿವುಡ್ ಕಿರುತೆರೆ ನಟ ಪ್ರದೀಪ್ ಕುಮಾರ್ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ. 
ಸಪ್ತ ಮಾತ್ರಿಕ ಧಾರಾವಾಹಿಯಲ್ಲಿ ನಟಿಸಿರುವ ಪ್ರದೀಪ್ ಕುಮಾರ್ ಅಗ್ನಿಪೂವುಲು ಧಾರವಾಹಿಯಲ್ಲಿ ನಟಿಸಿರುವ ಪಾವನಿ ರೆಡ್ಡಿ ಎಂಬುವರನ್ನು ವಿವಾಹವಾಗಿದ್ದರು. ಆದರೆ ಮಂಗಳವಾರ ರಾತ್ರಿ ರಂಗಾರೆಡ್ಡಿ ಜಿಲ್ಲೆ ಗಂಡಿಪೇಟ ಬಳಿ ಪುಪ್ಪಾಲಗೂಡದ ಅಲ್ಕಾಪುರಿ ಕಾಲೋನಿಯ ತಮ್ಮ ನಿವಾಸದಲ್ಲಿ ಪ್ರದೀಪ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 
ಪಾವನಿ ರೆಡ್ಡಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸದಿಂದ ಮನೆಗೆ ಮರಳಿದ ಪಾವನಿಗೆ ಆಘಾತ ಎದುರಾಗಿದೆ. ಪತಿ ನೇಣು ಕುಣಿಕೆಯಲ್ಲಿ ತೂಗುತ್ತಿರುವುದನ್ನು ಕಂಡು ಗಾಸಿಕೊಂಡಿದ್ದಾರೆ. 
ಪ್ರದೀಪ್ ಆತ್ಮಹತ್ಯೆ ಕುರಿತಂತೆ ಪೊಲೀಸರು ಪತಿ-ಪತ್ನಿ ನಡುವಿನ ಭಿನ್ನಾಭಿಪ್ರಾಯಗಳಿದ್ದು ಈ ಹಿನ್ನಲೆಯಲ್ಲಿ ಆತ ಆತ್ಮಹತ್ಯೆಗೆ ಶರಣಾಗಿರಬಹುದು. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಎಸ್ಐ ರಾಮಚಂದ್ರರಾವ್ ತಿಳಿಸಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com