ಅಮೆರಿಕ ಬಾಕ್ಸ್ ಆಫಿಸ್ ಗಳಿಕೆಯಲ್ಲಿ 'ದಂಗಾಲ್' ದಾಖಲೆ ಮುರಿದ 'ಬಾಹುಬಲಿ ೨'
ಎಸ್ ಎಸ್ ರಾಜಮೌಳಿ ನಿರ್ದೇಶನದ ಅತಿ ದೊಡ್ಡ ಬಜೆಟ್ ಸಿನೆಮಾ 'ಬಾಹುಬಲಿ೨:ಅಂತ್ಯ" ಅಮೆರಿಕ ಬಾಕ್ಸ್ ಆಫಿಸ್ ಗಳಿಕೆಯಲ್ಲಿ ಅಮೀರ್ ಖಾನ್ ನಟನೆಯ 'ದಂಗಾಲ್' ಸಿನೆಮಾದ ದಾಖಲೆ ಮುರಿದು ಇಲ್ಲಿಯವರೆಗೂ
ಚೆನ್ನೈ: ಎಸ್ ಎಸ್ ರಾಜಮೌಳಿ ನಿರ್ದೇಶನದ ಅತಿ ದೊಡ್ಡ ಬಜೆಟ್ ಸಿನೆಮಾ 'ಬಾಹುಬಲಿ೨:ಅಂತ್ಯ" ಅಮೆರಿಕ ಬಾಕ್ಸ್ ಆಫಿಸ್ ಗಳಿಕೆಯಲ್ಲಿ ಅಮೀರ್ ಖಾನ್ ನಟನೆಯ 'ದಂಗಾಲ್' ಸಿನೆಮಾದ ದಾಖಲೆ ಮುರಿದು ಇಲ್ಲಿಯವರೆಗೂ ೧೨.೬ ಮಿಲಿಯನ್ ಡಾಲರ್ ಕ್ರೋಢೀಕರಿಸಿ ಮುನ್ನುಗ್ಗಿದೆ.
'ಬಾಹುಬಲಿ ೨' ಅಮೆರಿಕ ವಿತರಕ ಗ್ರೇಟ್ ಇಂಡಿಯಾ ಫಿಲಂಸ್ ಪ್ರಕಾರ ಬುಧವಾರದ ಕೊನೆಗೆ ಸಿನೆಮಾ ೧೨.೬ ಮಿಲಿಯನ್ ಡಾಲರ್ ಗಳಿಸಿದ್ದು, ತನ್ನ ಸಂಪೂರ್ಣ ಪ್ರದರ್ಶನದಲ್ಲಿ ೧೨.೩ ಮಿಲಿಯನ್ ಡಾಲರ್ ಗಳಿಕೆ ಕಂಡಿದ್ದ 'ದಂಗಾಲ್' ಸಿನೆಮಾವನ್ನು ಹಿಂದಿಕ್ಕಿದೆ.
ಹಾಗೆಯೇ ಅಮೆರಿಕಾದಲ್ಲಿ ಅತಿ ಹೆಚ್ಚು ಬಾಕ್ಸ್ ಆಫಿಸ್ ಗಳಿಕೆ ಕಂಡಿರುವ ಭಾರತೀಯ ಸಿನೆಮಾ ಎಂಬ ದಾಖಲೆಯನ್ನು ಕೂಡ ಬರೆದ ಖ್ಯಾತಿಗೆ 'ಬಾಹುಬಲಿ ೨' ಭಾಜನವಾಗಿದೆ.
ಇಲ್ಲಿಯವರೆಗೂ ವಿಶ್ವದಾದ್ಯಂತ ೬೦೦ ಕೋಟಿ ಗಳಿಸಿರುವ 'ಬಾಹುಬಲಿ ೨', ಅಮೀರ್ ಖಾನ್ ನಟನೆಯ 'ಪಿಕೆ' ಸಿನೆಮಾದ ವಿಶ್ವದಾಖಲೆಯನ್ನು ಮುರಿಯುವತ್ತ ಕೂಡ ಮುನ್ನಡೆದಿದೆ.
'ಬಾಹುಬಲಿ ೨' ಸಿನೆಮಾದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ ಮತ್ತು ಸತ್ಯರಾಜ್ ನಟಿಸಿದ್ದಾರೆ.