ವಿಜಯ್ ಪ್ರಸಾದ್ 'ಲೇಡಿಸ್ ಟೈಲರ್' ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ?
ಇತ್ತೀಚಿಗೆ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಆಯ್ಕೆಗಳ ಬಗ್ಗೆ ಬಹಳ ಎಚ್ಚರಿಕೆಯಿಂದಿದ್ದಾರೆ. ನಿರ್ದೇಶಕ ವಿಜಯ್ ಪ್ರಸಾದ್ ತಮ್ಮ ಮುಂದಿನ ಚಿತ್ರದ ನಾಯಕ ನಟಿಯ ಆಯ್ಕೆಗೆ ಮಾಡಿದ ಸುದೀರ್ಘ ಶೋಧನೆ
ಬೆಂಗಳೂರು: ಇತ್ತೀಚಿಗೆ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಆಯ್ಕೆಗಳ ಬಗ್ಗೆ ಬಹಳ ಎಚ್ಚರಿಕೆಯಿಂದಿದ್ದಾರೆ. ನಿರ್ದೇಶಕ ವಿಜಯ್ ಪ್ರಸಾದ್ ತಮ್ಮ ಮುಂದಿನ ಚಿತ್ರದ ನಾಯಕ ನಟಿಯ ಆಯ್ಕೆಗೆ ಮಾಡಿದ ಸುದೀರ್ಘ ಶೋಧನೆ ಅಂತ್ಯಗೊಂಡಿದ್ದು, ಇದಕ್ಕಾಗಿ ಶರ್ಮಿಳಾ ತೂಕ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರಂತೆ.
ಅವರ ಬಾಲಿವುಡ್ ಸಿನೆಮಾ 'ಕಥಾ'ವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಎಂಬ ತವಕದಲ್ಲಿರುವಾಗಲೇ ಕನ್ನಡ ರಿಮೇಕ್ ಸಿನೆಮಾ 'ಆಕೆ' ಬಿಡುಗಡೆಗೂ ಅವರು ಎದುರುನೋಡುತ್ತಿದ್ದಾರೆ. ಕೆ ಎಂ ಚೈತನ್ಯ ನಿರ್ದೇಶನದ ಈ ಥ್ರಿಲರ್ ನಲ್ಲಿ ಅವರು ಚಿರಂಜೀವಿ ಸರ್ಜಾ ಎದುರು ನಟಿಸಿದ್ದಾರೆ. ಹಾಗೆಯೇ 'ಮಾಸ್ ಲೀಡರ್' ಸಿನಿಮಾದಲ್ಲಿಯೂ ಶರ್ಮಿಳಾ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶರ್ಮಿಳಾ ಈಗ ವಿಜಯ್ ಪ್ರಸಾದ್ ನಿರ್ದೇಶನದ ಮುಂದಿನ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. '೩೪ ೩೪ - ಲೇಡಿಸ್ ಟೈಲರ್' ಎಂಬ ಶೀರ್ಷಿಕೆ ಹೊತ್ತ ಈ ಸಿನೆಮಾದ ಅಡಿ ಶೀರ್ಷಿಕೆ 'ಗಲಭೆ ಇಲ್ಲದ ಪುಟ್ಟ ಪ್ರೇಮಕಥೆ' ಎಂದಿದೆ. ಕಥೆ ಕೇಳಿದ ನಟಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನುತ್ತವೆ ಮೂಲಗಳು. ಹಾಗೆಯೇ ಈ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರಂತೆ.
ಈ ಮೊದಲೇ ವಿಜಯ್ ಪ್ರಸಾದ್ ಹೇಳಿದ್ದ ಪ್ರಕಾರ ತಮ್ಮ ಸಿನೆಮಾದ ಕೇಂದ್ರ ಪಾತ್ರಕ್ಕೆ, ೧೨೦ ಕೆಜಿ ತೂಗಲು ಒಪ್ಪಿಕೊಳ್ಳುವ ನಟಿಯನ್ನು ಹುಡುಕುತ್ತಿರುವುದಾಗಿ ಹೇಳಿದ್ದರು. ಈಗ ಶರ್ಮಿಳಾ ಈ ಸವಾಲನ್ನು ಸ್ವೀಕರಿಸಲಿದ್ದಾರೆಯೇ? ಅಥವಾ ನಿರ್ದೇಶಕರೇ ತಮ್ಮ ನಿಯಮವನ್ನು ಮುರಿಯಲಿದ್ದಾರೆಯೇ? ಕಾದು ನೋಡಬೇಕು.