ಮಹೇಶ್ ಬಾಬು ಮುಂದಿನ ಚಿತ್ರದ ಹೆಸರು 'ಅತಿರಥ'

ಶೀರ್ಷಿಕೆಗೆ ಸಿನೆಮಾ ನೋಡಲು ಮಾಡುವಂತೆ ಜನರನ್ನು ಸೆಳೆಯುವ ಶಕ್ತಿಯಿದೆ ಎಂದು ನಂಬುವ ನಿರ್ದೇಶಕರಿದ್ದಾರೆ. ಅದಕ್ಕಾಗಿ ಒಳ್ಳೆಯ ಶೀರ್ಷಿಕೆ ಸಿಗುವವರೆಗೂ ಶಾಂತಚಿತ್ತರಾಗಿ ಕಾಯುತ್ತಾರೆ ಕೂಡ.
ಚೇತನ್ ಮತ್ತು ಲತಾ ಹೆಗಡೆ
ಚೇತನ್ ಮತ್ತು ಲತಾ ಹೆಗಡೆ
Updated on
ಬೆಂಗಳೂರು: ಶೀರ್ಷಿಕೆಗೆ ಸಿನೆಮಾ ನೋಡಲು ಮಾಡುವಂತೆ ಜನರನ್ನು ಸೆಳೆಯುವ ಶಕ್ತಿಯಿದೆ ಎಂದು ನಂಬುವ ನಿರ್ದೇಶಕರಿದ್ದಾರೆ. ಅದಕ್ಕಾಗಿ ಒಳ್ಳೆಯ ಶೀರ್ಷಿಕೆ ಸಿಗುವವರೆಗೂ ಶಾಂತಚಿತ್ತರಾಗಿ ಕಾಯುತ್ತಾರೆ ಕೂಡ. ಈಗಾಗಲೇ ಸಂಕಲನ ಕಾರ್ಯ ನಡೆಸುತ್ತಿರುವ ಸಿನೆಮಾಗೆ ನಿರ್ದೇಶಕ ಮಹೇಶ್ ಬಾಬು ಹೆಸರಿಟ್ಟಿದ್ದು "ನನ್ನ ಸಿನೆಮಾ ಹೆಸರು ಅತಿರಥ" ಎಂದು ಘೋಷಿಸಿದ್ದಾರೆ. 
ಆ ಹೆಸರಿಟ್ಟಿದ್ದಕ್ಕೆ ಕಾರಣವನ್ನು ಹೇಳುವ ಮಹೇಶ್ "ನನ್ನ ಸಿನೆಮಾ ಹೆಸರನ್ನು 'ಅ' ಇಂದಲೇ ಪ್ರಾರಂಭಿಸುವುದು ಭಾವನಾತ್ಮಕ ವಿಷಯ. ಪುನೀತ್ ಅವರ ಸಿನೆಮಾಗಳು ಕೂಡ 'ಅರಸು', 'ಆಕಾಶ್' ಆಗಿದ್ದವು. ಆದುದರಿಂದ ಒಳ್ಳೆಯ ಹೆಸರನ್ನು ಹುಡುಕುವಾಗ ಇದು ಹೊಳೆಯಿತು. ಅದನ್ನು ಮತ್ತೊಬ್ಬರು ಕಾಯ್ದಿರಿಸಿದ್ದರು, ಆದರೂ ಅದನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಿದರು" ಎನ್ನುತ್ತಾರೆ ಮಹೇಶ್.
'ಅತಿರಥ' ಸಿನೆಮಾದಲ್ಲಿ ಚೇತನ್ ಮತ್ತು ಲತಾ ಹೆಗಡೆ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಈ ಸಿನೆಮಾ ಶೀಘ್ರದಲ್ಲೇ ಸೆನ್ಸಾರ್ ಮಂಡಳಿಯ ಮುಂದೆ ಹೋಗಲಿದೆ. ಪ್ರೇಮ್, ಡಾ. ವೇಣುಗೋಪಾಲ್ ಮತ್ತು ಗಂಡಸಿ ಮಂಜುನಾಥ್ ನಿರ್ಮಿಸಿರುವ ಈ ಚಿತ್ರಕ್ಕೆ ಸುರಾಗ್ ಸಂಗೀತ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಜೈ ಆನಂದ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com