'ಪಟಾಕಿ'ಗೆ ಖಾಕಿ ತೊಟ್ಟ ಗಣೇಶ್; ಈ ವಾರ ತೆರೆಗೆ

ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ತೊಡಗಿಸಿಕೊಂಡು ಮನರಂಜನೆ ನೀಡಿರುವ ಗಣೇಶ್ ೨೯ ಸಿನೆಮಾಗಳಲ್ಲಿ ನಟಿಸಿದ್ದಾರೆ. ಹೊಸತನ್ನು ಪ್ರಯೋಗಿಸಲು ಸದಾ ಹಾತೊರೆಯುವ ಈ ನಟ
'ಪಟಾಕಿ'ಗೆ ಖಾಕಿ ತೊಟ್ಟ ಗಣೇಶ್
'ಪಟಾಕಿ'ಗೆ ಖಾಕಿ ತೊಟ್ಟ ಗಣೇಶ್
ಬೆಂಗಳೂರು: ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ತೊಡಗಿಸಿಕೊಂಡು ಮನರಂಜನೆ ನೀಡಿರುವ ಗಣೇಶ್ ೨೯ ಸಿನೆಮಾಗಳಲ್ಲಿ ನಟಿಸಿದ್ದಾರೆ. ಹೊಸತನ್ನು ಪ್ರಯೋಗಿಸಲು ಸದಾ ಹಾತೊರೆಯುವ ಈ ನಟ ಈ ಬಾರಿ 'ಪಟಾಕಿ'ಯಲ್ಲಿ ಖಾಕಿ ತೊಟ್ಟಿರುವುದು ವಿಶೇಷ!
ಎಸ್ ವಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಮಂಜು ಸ್ವರಾಜ್ ನಿರ್ದೇಶನದ ಈ ಚಿತ್ರ, ಈ ವಾರ ಬಿಡುಗಡೆಯಾಗಲಿದೆ. ಪೊಲೀಸ್ ಪಾತ್ರ ನಿರ್ವಹಿಸಿ ಉತ್ಸುಕರಾಗಿರುವ ನಟ, ಪೊಲೀಸ್ ಪಡೆಯಲ್ಲಿರುವ ತಮ್ಮ ಗೆಳೆಯರನ್ನು ಗಮನಿಸಿ ನಟನೆಗೆ ಸಾಕಷ್ಟು ಕಲಿತೆ ಎನ್ನುತ್ತಾರೆ. 
"ನಾನು ಸಾಕಷ್ಟು ಬಾರಿ ಪೋಲೀಸರ ಎರಡು ಛಾಯೆಗಳನ್ನು ಗಮನಿಸಿದ್ದೇನೆ. ಸಾಮಾನ್ಯ ಬಟ್ಟೆಯಲ್ಲಿ ಅವರು ಸಾಮಾನ್ಯರಂತೆಯೇ ಇರುತ್ತಾರೆ ಆದರೆ ಅವರ ಮೈಮೇಲೆ ಖಾಕಿ ಬಂದಾಕ್ಷಣ ಪೊಲೀಸ್ ಖದರ್ ಬಂದುಬಿಡುತ್ತದೆ. ಆ ಧಿರಿಸಿನ ಜೊತೆಗೆ ಶಿಸ್ತು ಮೈಗೂಡಿಕೊಳ್ಳುತ್ತದೆ. ಇದನ್ನು ಅವರೊಂದಿಗೆ ಚರ್ಚಿಸಿದ್ದೇನೆ ಕೂಡ ಮತ್ತು ಖಾಕಿ ತೊಟ್ಟಾಗ ಅವರಿಗೆ ಹೆಮ್ಮೆ ಎನ್ನಿಸುತ್ತದೆ. ಸಮಾಜಕ್ಕೆ ಒಳಿತನ್ನು ಮಾಡುವ ಅವಕಾಶ ಆ ಸಮವಸ್ತ್ರ ನೀಡುತ್ತದೆ" ಎನ್ನುತ್ತಾರೆ ನಟ. 
ಖಾಕಿ ಉಡುಪು ಧರಿಸಿದಾಗ ತಮಗೂ ಅದೇ ಅನುಭವವಾಯಿತು ಎನ್ನುವ ಗಣೇಶ್ "ಇದು ತೆರೆಯ ಮೇಲಷ್ಟೇ ಸೀಮಿತವಾದರೂ, ಸಮವಸ್ತ್ರ ಧರಿಸಿದಾಗ ಯಾವುದೋ ಬದಲಾವಣೆ ನನ್ನಲ್ಲಿ ಆದಂತಾಯಿತು. ನಾನು ಸಾಕಷ್ಟು ಗಟ್ಟಿ ಮನುಷ್ಯನಾದಂತೆ ಭಾಸವಾಯಿತು. ಇದು ನಾವು ಪೊಲೀಸರನ್ನು ನೋಡುವ ರೀತಿಯಿಂದಲೂ ಇರಬಹುದು... ಈ ಆಕ್ಷನ್ ಹಾಸ್ಯ ಚಿತ್ರದ  ನನ್ನ ಪಾತ್ರದಲ್ಲಿ ಇದು ಗೋಚರವಾಗಲಿದೆ" ಎನ್ನುತ್ತಾರೆ. 
ನಿಜಜೀವನದಲ್ಲಿ ಖಾಕಿ ತೊಟ್ಟವರನ್ನು ಯಾರು ತಮಾಷೆ ಮಾಡುವುದಿಲ್ಲ ಎನ್ನುವ ಗಣೇಶ್ "ನನಗೆ ಪೊಲೀಸ್ ಸಮವಸ್ತ್ರ ಧರಿಸುವ ಅವಕಾಶ ಸಿಕ್ಕಿದ್ದಕ್ಕೆ ಸಂತವಾಯಿತು. ಜನರು ಪೊಲೀಸರನ್ನು ಅಷ್ಟು ಗೌರವ ಮತ್ತು ಭಕ್ತಿಯಿಂದ ನೋಡುವಾಗ, ನನ್ನ ಪಾತ್ರವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ತಿಳಿಯಿತು. ಇದರ ಸುತ್ತ ಸಾಕಷ್ಟು ಕುತೂಹಲ ಕೂಡ ಇದೆ ಮತ್ತು ಇದನ್ನು ಅವಕಾಶವಾಗಿ ಬಳಸಿಕೊಂಡಿದ್ದೇನೆ. ಈ ಮನರಂಜನೆಯಲ್ಲಿ ಸೂಕ್ಷ್ಮ ಸಂದೇಶವನ್ನು ಅಳವಡಿಸಿಕೊಂಡಿದ್ದೇವೆ" ಎನ್ನುತ್ತಾರೆ. 
ಸಾಯಿಕುಮಾರ್ ಅವರೊಂದಿಗೆ ನಟಿಸಿರುವ ಅನುಭವ ಹಂಚಿಕೊಳ್ಳುವ ನಟ "ಇಂದು ತೆರೆಯ ಮೇಲೆ ಪೊಲೀಸ್ ಪಾತ್ರವನ್ನು ನೆನಪಿಸಿಕೊಡರೆ ಮೊದಲು ನೆನಪಿಗೆ ಬರುವುದು ಸಾಯಿಕುಮಾರ್. ಅವರ ಜೊತೆಗೆ ನಟಿಸಲು ಅವಕಾಶ ಸಿಕ್ಕಿದ್ದು ''ಪಟಾಕಿ'ಯ ಮತ್ತೊಂದು ಧನಾತ್ಮಕ ಅಂಶ. ಅವರು ನನ್ನ ಆತ್ಮವಿಶ್ವಾಸ ಹೆಚ್ಚಿಸಿದರು. ಸಾಧುಕೋಕಿಲ ಇಲ್ಲದೆ ನನ್ನ ಸಿನೆಮಾ ಸಂಪೂರ್ಣವಲ್ಲ. ಎಲ್ಲ ಸಮಯದಂತೆಯೂ ಈ ಬಾರಿ ಕೂಡ ನಮ್ಮ ಕೆಮಿಸ್ಟ್ರಿ ಚೆನ್ನಾಗಿ ಕೆಲಸ ಮಾಡಿದೆ" ಎನ್ನುತ್ತಾರೆ ಗಣೇಶ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com