ಸದ್ಯಕ್ಕೆ ಅವರು ರೋಹಿತ್ ಪದಕಿ ನಿರ್ದೇಶನದ 'ದಯವಿಟ್ಟು ಗಮನಿಸಿ' ಚಿತ್ರದಲ್ಲಿ ನಿರತರಾಗಿದ್ದಾರೆ. ನಿರ್ಮಾಪಕ ಆಶು ಬೆದ್ರ ನಾಯಕನಟನಾಗಿರುವ, 'ಕಹಿ' ಖ್ಯಾತಿಯ ಅರವಿಂದ್ ಶಾಸ್ತ್ರಿ ನಿರ್ದೇಶನದ ಇನ್ನು ಹೆಸರಿಡದ ಮತ್ತೊಂದು ಚಿತ್ರದಲ್ಲಿ ಕೂಡ ಪಾತ್ರ ಪಡೆದಿದ್ದಾರೆ. ಈಗ ಕೆ ಎಂ ಚೈತನ್ಯ ನಿರ್ದೇಶನದ ಚಿತ್ರಕ್ಕೂ ಕರೆ ಬಂದಿದ್ದು, ಮೊದಲ ಬಾರಿಗೆ ಚಿರಂಜೀವಿ ಸರ್ಜಾ ಮತ್ತು ಶ್ರುತಿ ಹರಿಹರನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಎಲ್ಲರಿಗು ಸಮತೂಕದ ಪಾತ್ರವನ್ನು ಸೃಷ್ಟಿಸುವ ನಿರ್ದೇಶಕ ಕೆ ಎಂ ಚೈತನ್ಯ ಯಾರನ್ನು ಹೀರೊ ಅಥವಾ ಹೀರೋಯಿನ್ ಎಂದು ವರ್ಗೀಕರಿಸಲು ಹೋಗುವುದಿಲ್ಲ.