'ಬಾಹುಬಲಿ' ಕಥೆಗಾರನ ಜೊತೆಗೆ ಕೆಲಸ ಮಾಡಲು ಥ್ರಿಲ್ ಆಗಿದೆ: ರಾಘವ ಲಾರೆನ್ಸ್

ಇನ್ನು ಹೆಸರಿಡದ ದ್ವಿಭಾಷಾ ಐತಿಹಾಸಿಕ ಚಲನಚಿತ್ರಕ್ಕೆ 'ಬಾಹುಬಲಿ' ಖ್ಯಾತಿಯ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ತೀವ್ರ ಸಂತಸವಾಗಿದೆ ಎಂದು ನಟ-ನಿರ್ದೇಶಕ ರಾಘವ
ವಿಜಯೇಂದ್ರ ಪ್ರಸಾದ್-ರಾಘವ ಲಾರೆನ್ಸ್
ವಿಜಯೇಂದ್ರ ಪ್ರಸಾದ್-ರಾಘವ ಲಾರೆನ್ಸ್
ಚೆನ್ನೈ: ಇನ್ನು ಹೆಸರಿಡದ ದ್ವಿಭಾಷಾ ಐತಿಹಾಸಿಕ ಚಲನಚಿತ್ರಕ್ಕೆ 'ಬಾಹುಬಲಿ' ಖ್ಯಾತಿಯ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ತೀವ್ರ ಸಂತಸವಾಗಿದೆ ಎಂದು ನಟ-ನಿರ್ದೇಶಕ ರಾಘವ ಲಾರೆನ್ಸ್ ಹೇಳಿದ್ದಾರೆ. ಈ ಸಿನೆಮಾ ಈ ವರ್ಷದ ದ್ವಿತೀಯ ಭಾಗದಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ. 
ಪ್ರಸಾದ್ ಇದಕ್ಕೆ ಕಥೆ ರಚಿಸಲಿದ್ದು, ಎಸ್ ಎಸ್ ರಾಜಮೌಳಿ ಅವರ ಜೊತೆಗೆ ಕೆಲಸ ಮಾಡಿದ್ದ ಎ ಮಹದೇವ್ ನಿರ್ದೇಶನ ಮಾಡಲಿದ್ದಾರೆ. ಮಹದೇವ್ ಈ ಹಿಂದೆ ನಿಖಿಲ್ ಕುಮಾರ್ ಅವರ 'ಜಾಗ್ವಾರ್' ನಿರ್ದೇಶಿಸಿದ್ದರು. 
"ಪ್ರಸಾದ್ ಸರ್ ಇಂದ ಒಂದು ಸಾಲಿನ ಕಥೆ ಕೇಳಿದಾಗಲೇ ನಾನು ತಂಡ ಸೇರಿಕೊಂಡೆ. 'ಬಾಹುಬಲಿ' ಬಿಡುಗಡೆಯಾಗುವುದಕ್ಕೆ ಮುಂಚಿನಿಂದಲೇ ನಾನು ಅವರನ್ನು ಬಲ್ಲೆ. ನನಗೆ ಅವರ ಅನುಭವದ ಬಗ್ಗೆ ಅರಿವಿದೆ ಮತ್ತು ಸ್ವಾಭಾವಿಕವಾಗಿ ಅವರ ಜೊತೆಗೆ ಕೆಲಸ ಮಾಡಲು ಥ್ರಿಲ್ ಆಗಿದ್ದೇನೆ" ಎಂದು ಲಾರೆನ್ಸ್ ಹೇಳಿದ್ದಾರೆ. 
೧೮-೧೯ ಶತಮಾನದ ಐತಿಹಾಸಿಕ ಕಥೆಯನ್ನು ಸಿನೆಮಾ ಹೊಂದಿದ್ದು, ಕ್ಯಾಮಿಯೋ ಸಿನೆಮಾ ಇದನ್ನು ನಿರ್ಮಿಸುತ್ತಿದೆ. ಈ ಸಿನೆಮಾ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರಲಿದೆ. 
"ನಮ್ಮ ಪಯಣದಲ್ಲಿ ಈ ಸಿನೆಮಾ ಅತಿ ದೊಡ್ಡ ಮೈಲಿಗಲ್ಲಾಗಲಿದೆ ಎಂದು ನಂಬಿದ್ದೇವೆ. 'ಬಾಹುಬಲಿ' ಯಶಸ್ಸಿಗೆ ಬೆನ್ನೆಲುಬಿನಂತಿದ್ದ ವಿಜಯೇಂದ್ರ ಪ್ರಸಾದ್ ನಮ್ಮ ಜೊತೆಗೆ ಇರುವುದರಿಂದ ಇದಕ್ಕಿಂತಲೂ ಹೆಚ್ಚಿನದು ಏನು ಬೇಕು" ಎಂದು ನಿರ್ಮಾಪಕ ಜಯಕುಮಾರ್ ಹೇಳಿದ್ದಾರೆ. 
ಕಾಜಲ್ ಅಗರವಾಲ್ ನಾಯಕ ನಟಿಯಾಗಲಿದ್ದಾರೆ ಎಂಬ ವದಂತಿಯಿದ್ದು, ಉಳಿದ ತಾರಾಗಣ ಅಂತಿಮಗೊಳ್ಳಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com