ಚೆನ್ನೈ: ಕಳೆದ ವರ್ಷ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ ಟೆಕ್ಕಿ ಸ್ವಾತಿ ಕೊಲೆ ಪ್ರಕರಣ ತೆರೆಯ ಮೇಲೆ ಮೂಡಿ ಬರಲಿದೆ.
ಜಯ ಶುಭಾಶ್ರೀ ಬ್ಯಾನರ್ ನಲ್ಲಿ ಎಸ್.ಕೆ ಸುಬ್ಬಯ್ಯ ಬ್ಯಾನರ್ ನಲ್ಲಿ 'ಸ್ವಾತಿ ಕೊಲೈ ವಝಾಕು' ಎಂಬ ಟೈಟಲ್ ನಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ.
ಜೂನ್ 24 ರಂದು ನುಂಗಬಾಕಂ ರೈಲ್ವೆ ನಿಲ್ದಾಣದಲ್ಲಿ ಸ್ವಾತಿ ಕೊಲೆಯಾಗಿತ್ತು. ಅರ್ಜುನ್ ವಿಜಯ್ ಅಭಿನಯದ ಜನನಂ ಸಿನಿಮಾ ನಿರ್ದೇಶಕ ಎಸ್ ಡಿ ರಮೇಶ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ನೈಜ ಘಟನೆಯಾಧರಿಸಿ ಚಿತ್ರ ತಯಾರಿಸಲಿದ್ದು ಕೊಲೆಯ ನಂತರದ ಘಟನೆಗಳ ವಿವರಗಳನ್ನು ತೋರಿಸಲಾಗುತ್ತದೆ.
ಪ್ರಕರಣದ ತನಿಖೆ ನಡೆಸಿದ ಇನ್ಸ್ ಪೆಕ್ಟರ್ ಶಕ್ತಿ ಪಾತ್ರದಲ್ಲಿ ಅಜ್ಮಲ್ ನಟಿಸಲಿದ್ದಾರೆ. ಆಯಿರಾ ಸ್ವಾತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಡಿಬೂಟಂಟ್ ಮನೋ ಆರೋಪಿಯ ಪಾತ್ರ ನಿರ್ವಹಿಸಲಿದ್ದಾರೆ.