ಈ ವಾರ ಬರಲಿದ್ದಾರೆ ಎಳೆಯ ಗೆಳೆಯರು!

ಟಿವಿ ರಿಯಾಲಿಟಿ ಕಾರ್ಯಕ್ರಮ ಡ್ರಾಮಾ ಜೂನಿಯರ್ಸ್ ನಲ್ಲಿ ಭಾಗವಹಿಸಿದ್ದ ೧೦ ಪುಟ್ಟ ಮಕ್ಕಳ 'ಎಳೆಯರು ನಾವು ಗೆಳೆಯರು' ಈಗ ಬಿಡುಗಡೆಗೆ ಸಿದ್ಧವಾಗಿದೆ. ವಿಕ್ರಂ ಸೂರಿ ನಿರ್ದೇಶನದ ಈ ಸಿನೆಮಾದಲ್ಲಿ ತೇಜಸ್ವಿನಿ,
'ಎಳೆಯರು ನಾವು ಗೆಳೆಯರು' ಸಿನೆಮಾದ ಸ್ಟಿಲ್
'ಎಳೆಯರು ನಾವು ಗೆಳೆಯರು' ಸಿನೆಮಾದ ಸ್ಟಿಲ್
ಬೆಂಗಳೂರು: ಟಿವಿ ರಿಯಾಲಿಟಿ ಕಾರ್ಯಕ್ರಮ ಡ್ರಾಮಾ ಜೂನಿಯರ್ಸ್ ನಲ್ಲಿ ಭಾಗವಹಿಸಿದ್ದ ೧೦ ಪುಟ್ಟ ಮಕ್ಕಳ 'ಎಳೆಯರು ನಾವು ಗೆಳೆಯರು' ಈಗ ಬಿಡುಗಡೆಗೆ ಸಿದ್ಧವಾಗಿದೆ. ವಿಕ್ರಂ ಸೂರಿ ನಿರ್ದೇಶನದ ಈ ಸಿನೆಮಾದಲ್ಲಿ ತೇಜಸ್ವಿನಿ, ಅಚಿಂತ್ಯ, ಪುಟ್ಟರಾಜು ಮತ್ತು ಇತರ ಮಕ್ಕಳು ನಟಿಸಿದ್ದಾರೆ. ನಾಗರಾಜ್ ಗೋಪಾಲ್ ಅವರು ಕಥೆ ರಚಿಸಿದ್ದು, ಅವರೇ ಸಿನೆಮಾ ನಿರ್ಮಾಪಕ ಕೂಡ. 
"ನಾನು ಡ್ರಾಮಾ ಜೂನಿಯರ್ಸ್ ನೋಡುವಾಗ ಮಕ್ಕಳ ಪ್ರದರ್ಶನ ನೋಡಿ ಇವರು ನನ್ನ ಕಥೆಗೆ ಸಂಪೂರ್ಣ ನ್ಯಾಯ ಒದಗಿಸಬಲ್ಲರು ಎಂಬ ಭರವಸೆ ಮೂಡಿತು. ರಿಯಾಲಿಟಿ ಕಾರ್ಯಕ್ರಮ ಮುಗಿಯುವವರೆಗೂ ಕಾದು, ಕೂಡಲೇ ಅವರನ್ನು ಸಿನೆಮಾಗೆ ಕರೆತಂದೆ" ಎನ್ನುತ್ತಾರೆ ನಾಗರಾಜ್. 
೧೭ ವರ್ಷಗಳ ನಂತರ ಸಿನಿಮಾರಂಗಕ್ಕೆ ಹಿಂದಿರಿಗಿರುವ ರಿಚರ್ಡ್ ಲ್ಯೂಯಿಸ್ ಸಿನೆಮಾಗೆ ಸ್ಕ್ರೀನ್ ಪ್ಲೆ ಬರೆದಿದ್ದಾರೆ. ಅವರು ಕೊನೆಯ ಬಾರಿಗೆ 'ಕೋತಿಗಳು ಸಾರ್ ಕೋತಿಗಳು' ಸಿನೆಮಾದಲ್ಲಿ ಕೆಲಸ ಮಾಡಿದ್ದರು. 
"ಇದು ಹಳ್ಳಿ ಮಕ್ಕಳ ಕಥೆ. ಶಿಕ್ಷಣವಷ್ಟೇ ಅಲ್ಲದೆ ಇತರ ಕೌಶಲ್ಯಗಳು ಕೂಡ ಜೀವನದಲ್ಲಿ ಯಶಸ್ಸಿಗೆ ಮುಖ್ಯ ಎಂಬ ಕಥೆ ಹೇಳುತ್ತದೆ ಈ ಸಿನೆಮಾ" ಎನ್ನುತ್ತಾರೆ ನಾಗರಾಜ್. 
ಕವಿಗಳಾದ ಎಂ ಎನ್ ವ್ಯಾಸ ರಾವ್ ಮತ್ತು ಬಿ ಆರ್ ಲಕ್ಷ್ಮಣ ರಾವ್ ಗೀತ ರಚನೆ ಮಾಡಿದ್ದು, ಅನೂಪ್ ಸೀಳಿನ್ ಅವರ ಸಂಗೀತ ಚಿತ್ರಕ್ಕಿದೆ. ಅಶೋಕ್ ವಿ ರಾಮನ್ ಛಾಯಾಗ್ರಹಣ ಮಾಡಿದ್ದು, ಜಾಕ್ ಮಂಜು ಸಿನೆಮಾವನ್ನು ವಿತರಿಸಲಿದ್ದಾರೆ. ಈ ಶುಕ್ರವಾರ ಕರ್ನಾಟಕದಾದ್ಯಂತ ೧೫೦ ಚಿತ್ರಮಂದಿರಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com