ಸಿನೆಮಾ ಆಗಲಿದೆ ಪೋಖ್ರಾನ್ ಪರಮಾಣು ಪರೀಕ್ಷೆ

ಜಾನ್ ಅಬ್ರಹಾಂ ಅವರ ಮುಂದಿನ ಚಿತ್ರ 'ಪರಮಾಣು'- ಪೋಖ್ರಾನ್ ಕಥೆ ಸಿನೆಮಾದ ಚಿತ್ರೀಕರಣ ನೆನ್ನೆಯಿಂದ ಪ್ರಾರಂಭವಾಗಿದೆ. ಇದರ ಬಗ್ಗೆ ಟ್ವೀಟ್ ಮಾಡಿರುವ ಆಕ್ಷನ್ ಸ್ಟಾರ್ "'ಪರಮಾಣು'
ಜಾನ್ ಅಬ್ರಹಾಂ
ಜಾನ್ ಅಬ್ರಹಾಂ
ಬೆಂಗಳೂರು: ಜಾನ್ ಅಬ್ರಹಾಂ ಅವರ ಮುಂದಿನ ಚಿತ್ರ 'ಪರಮಾಣು'- ಪೋಖ್ರಾನ್ ಕಥೆ ಸಿನೆಮಾದ ಚಿತ್ರೀಕರಣ ನೆನ್ನೆಯಿಂದ ಪ್ರಾರಂಭವಾಗಿದೆ. ಇದರ ಬಗ್ಗೆ ಟ್ವೀಟ್ ಮಾಡಿರುವ ಆಕ್ಷನ್ ಸ್ಟಾರ್ "'ಪರಮಾಣು' ಮೊದಲ ದಿನ. ನಮ್ಮ ಅತಿ ದೊಡ್ಡ ಪರೀಕ್ಷೆ" ಎಂದಿರುವ ಅವರು "ಪೋಖ್ರಾನ್ ಗೆ ರಸ್ತೆ ಹಾಕಲಾಗಿದೆ. 
"ವಿಶ್ವ ಭೂಪಟದಲ್ಲಿ ಭಾರತದ ಸ್ಥಾನವನ್ನು ಬದಲಾಯಿಸಿ ಶಕ್ತಿಯುತ ಅಣು ಶಸ್ತ್ರಾಸ್ತ್ರ ರಾಷ್ಟ್ರವನ್ನಾಗಿಸಿದ ಪಯಣದ ಮೇಲೆ ಮತ್ತೆ ಬೆಳಕು ಚೆಲ್ಲುವ ಸಮಯ ಬಂದಿದೆ" ಎಂದು ಕೂಡ ಜಾನ್ ಹೇಳಿದ್ದಾರೆ. 
೧೯೯೮ ರಲ್ಲಿ ನಡೆದ ಪೋಖ್ರಾನ್ ಪರಮಾಣು ಪರೀಕ್ಷೆ ಬಗೆಗಿನ ಸಿನೆಮಾ ಇದಾಗಿದೆ. ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದ ಈ ಗುಪ್ತ ಅಣುಪರೀಕ್ಷೆಯನ್ನು ಸಾಧ್ಯವಾಗಿಸಲು ಹಲವು ವಿಜ್ಞಾನಿಗಳು, ಭಾರತೀಯ ಸೇನೆ, ಎಂಜಿನಿಯರ್ ಗಳು, ಸ್ಯಾಟಲೈಟ್ ತಂತ್ರಜ್ಞರು ಅವಿರತವಾಗಿ ದುಡಿದಿದ್ದರು.
'ಪರಮಾಣು' ಸಿನೆಮಾದಲ್ಲಿ ಜಾನ್ ಅಬ್ರಹಾಂ ಜೊತೆಗೆ ಡಯಾನಾ ಪೆಂಟಿ ಮುಖ್ಯ ಪಾತ್ರ ವಹಿಸಿದ್ದಾರೆ. ಬೊಮ್ಮನ್ ಇರಾನಿ ಅವರದ್ದು ಕೂಡ ಪ್ರಮುಖ ಪಾತ್ರ. 
ಅಭಿಷೇಕ್ ಶರ್ಮ ನಿರ್ದೇಶಿಸುತ್ತಿರುವ ಈ ಸಿನೆಮಾಗೆ ಸಚಿನ್ ಜಿಗರ್ ಸಂಗೀತ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com