ಚೆನ್ನೈ: ಹಲವು ದಿನಗಳಿಂದ ರಾಜಕೀಯಕ್ಕೆ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿರುವ ಕಾಲಿವುಡ್ ಖ್ಯಾತ ನಟ ಕಮಲ್ ಹಾಸನ್ ಅವರು ನಾಳೆ ತಮ್ಮ ಹುಟ್ಟುಹಬ್ಬದಂದು ತನ್ನ ಅಭಿಮಾನಿಗಳೊಂದಿಗೆ ಸಂಪರ್ಕಿಸಲು ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದ್ದಾರೆ.
ನನ್ನ ರಾಜಕೀಯ ಪ್ರಯಾಣಕ್ಕೆ ಈ ಮೊಬೈಲ್ ಅಪ್ಲಿಕೇಶನ್ ಮೊದಲ ಹೆಜ್ಜೆಯಾಗಲಿದೆ. ನಮ್ಮ ಕಲ್ಯಾಣ ಚಟುವಟಿಕೆಗಳಿಗೆ ನೀವು ನನಗೆ ಧನಸಹಾಯವನ್ನು ನೀಡುವುದಾಗಿ ನಾನು ಭರವಸೆ ಹೊಂದಿದ್ದೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಈ ಮೊಬೈಲ್ ಅಪ್ಲಿಕೇಶನ್ ಎಲ್ಲಾ ರೀತಿಯ ಹಣಕಾಸಿನ ವಹಿವಾಟುಗಳನ್ನು ಟ್ರ್ಯಾಕ್ ಮಾಡುತ್ತದೆ ಎಂದು ಹೇಳಿದರು. ತಮಿಳಿನ ಖ್ಯಾತ ನಟ ಕಮಲ್ ಹಾಸನ್ ನಾಳೆ ಅವರು ತಮ್ಮ 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ವೇಳೆ ತಮ್ಮ ರಾಜಕೀಯದ ಎಂಟ್ರಿ ಬಗ್ಗೆ ಹಲವು ಮಹತ್ವದ ವಿಚಾರಗಳನ್ನು ಬಹಿರಂಗಗೊಳಿಸಲಿದ್ದಾರೆ.