'ಕೆಂಪಿರ್ವೆ' ಒಂದು ಮಧ್ಯಮ ವರ್ಗದ ವ್ಯಕ್ತಿಯ ಕಥೆ: ದತ್ತಣ್ಣ

ಎಚ್.ಜಿ. ದತ್ತಾತ್ರೇಯ, ದತ್ತಣ್ಣ ಕನ್ನಡದ ಹಿರಿಯ ನಟರಲ್ಲಿ ಒಬ್ಬರು. 75ರ ಈ ವಯಸ್ಸಿನಲ್ಲಿಯೂ ಅವರು ಸಾಕಷ್ಟು ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಹೆಚ್ ಜಿ ದತ್ತಾತ್ರೇಯ
ಹೆಚ್ ಜಿ ದತ್ತಾತ್ರೇಯ
Updated on
ಬೆಂಗಳೂರು: ಎಚ್.ಜಿ. ದತ್ತಾತ್ರೇಯ, ದತ್ತಣ್ಣ ಕನ್ನಡದ ಹಿರಿಯ ನಟರಲ್ಲಿ ಒಬ್ಬರು. 75ರ ಈ ವಯಸ್ಸಿನಲ್ಲಿಯೂ ಅವರು ಸಾಕಷ್ಟು ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಎಕ್ಸ್ ಪ್ರೆಸ್ ಅವರ ಮುಂದಿನ ಚಿತ್ರ 'ಕೆಂಪಿರ್ವೆ' ಕುರಿತಂತೆ ಅವರನ್ನು ಮಾತನಾಡಿಸಿತು. ವೆಂಕಟ್ ಭಾರದ್ವಾಜ್ ನಿರ್ದೇಶನದ ಈ ಚಿತ್ರ ಈ ವಾರ ತೆರೆಕಾಣಲಿದೆ.
ದತ್ತಣ್ಣ ಇದಾಗಲೇ ಸುಮಾರು ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದು ಇಂದಿಗೂ ಅವರು ತಮಗಾಗಿ ಮ್ಯಾನೇಜರ್ ಗಳನ್ನು ನೇಮಕ ಮಾಡಿಕೊಂಡಿಲ್ಲ. "ನನ್ನ ಡೈರಿಯೇ ನನ್ನ ಮ್ಯಾನೇಜರ್, ಡೈರಿಯಲ್ಲಿಯೇ ನಾನು ನಿತ್ಯದ ಚಿತ್ರೀಕರಣ ವಿವರಗಳನ್ನು ಬರೆದಿಟ್ಟುಕೊಳ್ಳುತ್ತೇನೆ. ಅದಕ್ಕಾಗಿ ಯಾವ ಮ್ಯಾನೇಜರ್ ಗಳನ್ನು ನೇಮಿಸಿಕೊಂಡಿಲ್ಲ ಕೆಲವರು ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿಕೊಳ್ಳುವವರು ಮ್ಯಾನೇಜರ್ ಗಳನ್ನು ಇರಿಸಿಕೊಳ್ಳುತ್ತಾರೆ. ಹಾಗೆ ಮ್ಯಾನೇಜರ್ ಗಳನ್ನು ಇರಿಸಿಕೊಳ್ಳುವುದು ಪ್ರತಿಷ್ಠೆಯ ಸಂಕೇತ ಎಂದು ನನ್ನ ಅನಿಸಿಕೆ. ನಾನು ನನ್ನ ಕೆಲಸಗಳನ್ನು ಸ್ವತಃ ಮ್ಯಾನೇಜ್ ಮಾಡಿಕೊಳ್ಳುತ್ತೇನೆ.
"ನನ್ನ ಬಳಿಗೆ ಬರುವ ಬಹುತೇಕ ನಿರ್ದೇಶಕರಿಗೆ ನಾನು ಏನೆನ್ನುವುದು ತಿಳಿದಿದೆ. ಹಾಗೆ ಒಂದು ವೇಳೆ ನನ್ನ ಬಗ್ಗೆ ಅರಿವಿಲ್ಲದೆ ಬರುವ ಕೆಲ ಯುವ ನಿರ್ದೇಶಕರುಗಳು ಹೇಳುವ ಕಥೆ ಕೇಳಿ ಅದಕ್ಕೆ ನಾನು ಸೂಕ್ತ ಎನಿಸಿದರಷ್ಟೇ ಒಪ್ಪಿಕೊಳ್ಳುತ್ತೇನೆ, ನಾನು ಎಂದಿಗೂ ನನ್ನ ಕುಟುಂಬ, ಸ್ನೇಹಿತರು, ನನ್ನ ಅಭಿಮಾನಿಗಳು ನನ್ನನ್ನು ಯಾವ ರೀತಿ ನೋಡಬೇಕೆಂದು ಬಉಯಸುತ್ತಾರೆಯೋ ಅಂತಹಾ ಪಾತ್ರಗಳನ್ನೇ ಮಾಡುತ್ತೇನೆ.
"'ಕೆಂಪಿರ್ವೆ' ಒಂದು ಕ್ರೈಂ ಥ್ರಿಲ್ಲರ್ ಕಥಾನಕವಾಗಿದೆ ಒಬ್ಬ ಮದ್ಯಮ ವರ್ಗದ ಮನುಷ್ಯ ತನ್ನ ನಡವಳಿಕೆಯಿಂದಾಗಿ ಕೆಂಪಿರುವೆಯನ್ನು ಹೋಲುವ ಪಾತ್ರವಿದ್ದು ಇರುವೆಗಳು ಏನೇ ಆದರೂ ಗುಂಪಾಗಿ, ಸಾಲಾಗಿಏ ಹೋಗುವಂತೆ ಆತ ಸಹ ತನ್ನವರನ್ನು ಬಿಟ್ಟು ಇರಲಾರ" ದತ್ತಣ್ಣ ತಮ್ಮ ಚಿತ್ರದ ಪಾತ್ರದ ಕುರಿತು ತಿಳಿಸಿದರು.
"ನಾನು ಒಳ್ಳೆಯ ಪುಸ್ತಕಗಳನ್ನು ಓದಲು ಬಯಸುತ್ತೇನೆ. ಚಿತ್ರೀಕರಣ ಇಲ್ಲದ ವೇಳೆಯಲ್ಲಿ ನನ್ನನ್ನು ನಾನು ಬ್ಯುಸಿಯಾಗಿರಿಸಿಕೊಳ್ಳಲು ಬಯಸುತ್ತೇನೆ. ಸಣ್ಣ ಪುಟ್ಟ ಚಟುವಟಿಕೆಗಲಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ" ದತ್ತಣ್ಣ ಎಂದೂ ಸರಳ ಜೀವನವನ್ನೇ ಇಷ್ಟ ಪಡುತ್ತಾರೆ ಎನ್ನುವುದು ವರ ಮಾತುಗಳಲ್ಲಿ ತಿಳಿಯುತ್ತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com