ಪ್ರಾಣಿ ಪ್ರಿಯೆ ಸಂಯುಕ್ತಾಳ ಸಾಕುಪ್ರಾಣಿಗಳ ಕುರಿತ ಒಲವಿನ ಮಾತು

ಫಿಲ್ಮ್ ಫೇರ್ ಪ್ರಶಸ್ತಿ ವಿಜೇತ ನಟಿ ಸಂಯುಕ್ತಾ ಹೊರನಾಡು ಸದ್ಯ ಇವರ 'ದಯವಿಟ್ಟು ಗಮನಿಸಿ' ಕನ್ನಡ ಚಿತ್ರ ಜಾಗತಿಕ ಯಶಸ್ಸಿನ ಗುಂಗಿನಲ್ಲಿದ್ದಾರೆ.
ಸಂಯುಕ್ತಾ ಹೊರನಾಡು
ಸಂಯುಕ್ತಾ ಹೊರನಾಡು
Updated on
ಬೆಂಗಳೂರು: ಫಿಲ್ಮ್ ಫೇರ್ ಪ್ರಶಸ್ತಿ ವಿಜೇತ ನಟಿ  ಸಂಯುಕ್ತಾ ಹೊರನಾಡು ಸದ್ಯ ಇವರ 'ದಯವಿಟ್ಟು ಗಮನಿಸಿ' ಕನ್ನಡ ಚಿತ್ರ ಜಾಗತಿಕ ಯಶಸ್ಸಿನ ಗುಂಗಿನಲ್ಲಿದ್ದಾರೆ. ಆಕೆಯ ಕನಸೀಗ ನಿಜವಾಗಿದೆ. ಇದೀಗ ಅವರು ತಮ್ಮ ಹೊಸ ಚಿತ್ರವೊಂದರಲ್ಲಿ ಪ್ರಾಣಿ ಪ್ರಿಯೆಯಾಗಿ ನಟಿಸುತ್ತಿದ್ದು ನಾಯಿಗಳ ಜತೆಗೆ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.
ಹಲವಾರು ಎನ್ ಜಿಓಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈಕೆಯ ಪೋಷಕರಿಗೆ ಗಾಯಕಿಯಾಗಬೇಕೆಂಬ ಬಯಕೆ ಇತ್ತು. ಅದಕ್ಕಾಗಿ ಆಕೆ ಸಂಗೀತದ ತರಬೇತಿಗೂ ಸೇರಿದ್ದರು. ಆದರೆ ಸಂಯುಕ್ತ ತಾವು ಸಂಗೀತ ತರಗತಿಗೆ ಚಕ್ಕರ್ ಹೊಡದು ಸಂಕಷ್ಟದಲ್ಲಿರುವ ಪ್ರಾಣಿಗಳ ಗೆಳತಿಯಾದರು.
"ನನ್ನ ಸಂಗೀತ ತರಗತಿಗಳಿಗೆ ನಾಯಿ ಮತ್ತು ಬೆಕ್ಕುಗಳನ್ನು ಕರೆದೊಯ್ದಾಗ ಟೀಚರ್ ನನ್ನನ್ನು ತರಗತಿಯಿಂದ ಹೊರಕಾಕಿದರು." ಆದರೆ ಸಂಯುಕ್ತಾ ಅದಕ್ಕೆ ಬೇಸರ ಪಡಲಿಲ್ಲ. ಬದಲಿಗೆ ಸಂತಸ ತಾಳಿದರು. ಇದೀಗ ಅವರಿಗೆ ತಮ್ಮಿಷ್ಟದ ಪ್ರಾಣಿಗಳೊಡನೆ ಹೆಚ್ಚು ಸಮಯ ಕಳೆಯಲು ಸಾಧ್ಯವಿತ್ತು. ಹಾಗೆ ಸಂಯುಕ್ತಾ ತಾವು ದಿನಗಳೆದಂತೆ ಪ್ರಾಣಿ ಪ್ರಿಯೆಯಾಗಿ, ಅವುಗಳೊಡನೆ ಹೆಚ್ಚು ಸಮಯ ಕಳೆಯತೊಡಗಿದಳು.
ಇವರೊಮ್ಮೆ ಎರಡು ಮರಿಗಳನ್ನು ರಕ್ಷಿಸಿದ್ದರು. ಅದರಲ್ಲಿ ಒಂದು ಮರಿ ಸಾವನ್ನಪ್ಪಿದರೆ ಇನ್ನೊಂದು ಬೆಳೆದು ದೊಡ್ಡದಾಗಿದೆ. ಅದಕ್ಕೆ 'ಗುಂಡ' ಎಂದು ನಾಮಕರಣ ಂಆಡಿದ ಸಂಯುಕ್ತಾ ತಮ್ಮ ಇನ್ ಸ್ಟಾಗ್ರಾಂ ನಲ್ಲಿ "ಗುಂಡನಷ್ಟು ನನಗೆ ಇನ್ನಾರೂ ಪಾಠ ಕಲಿಸಿರಲಿಲ್ಲ" ಎಂದು ಪ್ರೀತಿಯನ್ನು ಹಂಚಿಕೊಡಿದ್ದಾರೆ.
ಇಂದು, ಅವರು ಹಲವಾರು ಎನ್ ಜಿಓ ಗಲೊಡನೆ ಸೇರಿ ಸಂಕಷ್ಟದಲ್ಲಿರುವ ಪ್ರಾಣಿಗಳಿಗೆ ಸಹಾಯ ನಿಡುತ್ತಿದ್ದಾರೆ. ಅನಿಮಲ್ ಥೆರಪಿ, ಅವರು ಪ್ರಸ್ತುತ ನಟಿಸುತ್ತಿರುವ ಚಿತ್ರದ ಕೇಂದ್ರ ವಿಷಯವಾಗಿದೆ. ಇದೀಗ ಕರ್ನಾಟಕದ ಹಾಸನದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಚಿತ್ರದಲ್ಲಿ ಅವರು ಕುದುರೆಗಳೊಡನೆಯೂ ಕಾಣಿಸಿಕೊಳ್ಳಲಿದ್ದಾರೆ. ಕಳ್ಳಸಾಗಣೆ ಉತ್ಪನ್ನಗಳನ್ನು ಕುದುರೆಗಳ ಸಹಾಯದಿಂದ ಸಾಗಿಸುವ ಚಿತ್ರೀಕರಣದಲ್ಲಿ ಅವರು ಭಾಗವಹಿಸಿದ್ದಾರೆ.
"ಸಾಕುಪ್ರಾಣಿಗಳನ್ನು ರಕ್ಷಿಸುವ ಮೂಲಕ ಅಥವಾ ಪೋಷಿಸುವ ಮೂಲಕ ನಾವು ಅವುಗಳಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಭಾವಿಸುತ್ತೇವೆ, ಆದರೆ ಅದು ಕೇವಲ ಪ್ರಾಥಮಿಕ ಹಂತ.ಆದರೆ ಜಗತ್ತು ಬದಲಾಗಿದೆ. ನಾನು ಅದನ್ನು ಗುರುತಿಸಿದ್ದೇನೆ. ಜನರೂ ನನ್ನ ಭಾವನೆಗಳನ್ನು ಗುರುತಿಸಬೇಕೆಂದು ನಾನು ಬಯಸುತ್ತೇನೆ" ಅವರು ನುಡಿದರು. ನಟನೆ ಮತ್ತು ಪ್ರಾಣಿಗಳಿಗೆ ಸಹಾಯ ಈ ಎರಡರ ಬಗೆಗೆ ಅವರು ಮಾತನಾಡುತ್ತಾ  "ಪ್ರಶಸ್ತಿ ಸಮಾರಂಭಗಳಲ್ಲಿ ಬಹುತೇಕರು ನಟನಾ ಸಿದ್ಧಾಂತ, ನಿರ್ಮೂಲನೆ, ಪರಿಕಲ್ಪನೆ, ವಿಧಾನದ ಬಗ್ಗೆ ಮಾತ್ರವೇ ಹೇಳುತ್ತಾರೆ . ಆದರೆ ನಾನು ಜೀವನವನ್ನು ನೋಡುತ್ತೇನೆ,ನಾನು ನಟನೆಯೊಡನೆಯೇ ನನ್ನ ಸಾಕುಪ್ರಾಣಿಗಳ ಭಾವನೆಗಳ್ನ್ನು ಸಹ ಅರಿತುಕೊಳ್ಳುತ್ತೇನೆ"  ಸಂಯುಕ್ತಾ ಸಂತಸದಿಂದ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com