ರಶ್ಮೀಕಾ ಮಂಡಣ್ಣ
ರಶ್ಮೀಕಾ ಮಂಡಣ್ಣ

ಕಿರಿಕ್ ಬೆಡಗಿ ರಶ್ಮಿಕಾ ತೆಲುಗು ಚಿತ್ರ 'ಚಲೋ' ಟೀಸರ್ ಬಿಡುಗಡೆ

ಕಿರಿಕ್ ಪಾರ್ಟಿ' ಯ ಸಾನ್ವಿ ಪಾತ್ರ ನಿರ್ವಹಿಸಿ ಕನ್ನಡಿಗರ ಮನಗೆದ್ದಿದ್ದ ರಶ್ಮಿಕಾ ಮಂದಣ್ಣ ಗೆ ಸ್ಯಾಂದಲ್ ವುಡ್ ನಲ್ಲಿ ಸಾಕಷ್ಟು ಆಫರ್ ಗಳು ಬರುತ್ತಿವೆ.
Published on
ಬೆಂಗಳೂರು: 'ಕಿರಿಕ್ ಪಾರ್ಟಿ' ಯ ಸಾನ್ವಿ ಪಾತ್ರ ನಿರ್ವಹಿಸಿ ಕನ್ನಡಿಗರ ಮನಗೆದ್ದಿದ್ದ ರಶ್ಮಿಕಾ ಮಂದಣ್ಣ ಗೆ ಸ್ಯಾಂದಲ್ ವುಡ್ ನಲ್ಲಿ ಸಾಕಷ್ಟು ಆಫರ್ ಗಳು ಬರುತ್ತಿವೆ. ಅದೇ ವೇಆಳೆ ರಶ್ಮಿಕಾ ಮೊದಲ ತೆಲುಗು ಚಿತ್ರ `ಚಲೋ’ ನ ಅಧಿಕೃತ ಟೀಸರ್ ಬಿಡುಗಡೆಯಾಗಿದೆ.
ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಚಲೋ' ಟೀಸರ್ ಬಿಡುಗಡೆಯಾಗಿದ್ದು ಕೊಡಗು ಮೂಲದ ರಶ್ಮಿಕಾ ತೆಲುಗು ಚಿತ್ರರಂಗದಲ್ಲಿ ಮಿಂಚಲು ಸಿದ್ದರಾಗಿದ್ದಾರೆ. ಇಗದಾಲೇ ಪೋಸ್ಟರ್‌ ಮೂಲಕ ಕುತೂಹಲ ಹೆಚ್ಚಿಸಿದ್ದ ಈ ಚಿತ್ರದ ಟೀಸರ್ ಬಿಡುಗಡೆಗೊಂಡಿರುವುದಲ್ಲದೆ ಸಾಮಾಜಿಕ ತಾಣಗಲಲ್ಲಿ ವೈರಲ್ ಆಗಿದೆ.
ನಟ ನಾಗ ಶೌರ್ಯ ಅವರು ನಾಯಕರಾಗಿರುವ `ಚಲೋ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿದ್ದು ವೆಂಕಿ ಕುಡುಮುಲು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೆಹಟಿ ಸ್ವರ ಸಾಗರ್ ಸಂಗೀತ ಈ ಚಿತ್ರಕ್ಕಿದ್ದು ನ್ನೆಲ್ ಕಿಶೋರ್ ಸತ್ಯ, ಅಚ್ಯುತ್ ಕುಮಾರ್, ರಘು ಬಾಬು, ಪ್ರಗತಿ  ಸೇರಿ ಹಲವಾರು ನಟರು ಅಭಿನಯಿಸಿದ್ದಾರೆ.
ರಶ್ಮಿಕಾ 'ಕಿರಿಕ್ ಪಾರ್ಟಿ' ಚಿತ್ರದ ರೀತಿಯಲ್ಲಿಯೇ ಇದರಲ್ಲಿಯೂ ಕನ್ನದಕ ಧರಿಸಿದ್ದು, ಕೈಯಲ್ಲೊಂದು ಪುಸ್ತಕ ಹಿಡಿಯುವ ಮೂಲಕ ಕನ್ನಡ ಪಾತ್ರದ ಛಾಯೆ ಇಲ್ಲಿಯೂ ಕಾಣಿಸಿಕೊಂಡಿದೆ. ಒಂದು ತಮಿಳು ಹಾಗೂ ಮತ್ತೊಂದು ತೆಲುಗು ಗ್ರಾಮಗಳ ನಡುವೆಿರುವ ದ್ವೇಷ, ಕಾದಾಟದ ಕಥಾ ಹಂದರ ಹೊಂದಿರುವ 'ಚಲೋ' ತೆಲುಗು ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ, ಕಾದು ನೊಡಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com