'ಉಪ್ಪು ಹುಳಿ ಖಾರ'ದಿಂದ ಪೂರ್ಣ ಪ್ರಮಾಣದ ಮನರಂಜನೆ: ಇಮ್ರಾನ್ ಸರ್ದಾರಿಯಾ ವಿಶ್ವಾಸ

ನೃತ್ಯ ನಿರ್ದೇಶಕ ಹಾಗೂ ಚಿತ್ರ ನಿರ್ದೇಶಕ ಇಮ್ರಾನ್ ಸರ್ದಾರಿಯಾ ತಮ್ಮ ಎರಡನೇ ....
ಉಪ್ಪು ಹುಳಿ ಖಾರ ಚಿತ್ರದ ಸ್ಟಿಲ್
ಉಪ್ಪು ಹುಳಿ ಖಾರ ಚಿತ್ರದ ಸ್ಟಿಲ್
ನೃತ್ಯ ನಿರ್ದೇಶಕ ಹಾಗೂ ಚಿತ್ರ ನಿರ್ದೇಶಕ ಇಮ್ರಾನ್ ಸರ್ದಾರಿಯಾ ತಮ್ಮ ಎರಡನೇ ನಿರ್ದೇಶನದ ಬಹು ನಿರೀಕ್ಷಿತ ಉಪ್ಪು ಹುಳಿ ಖಾರ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಚಿತ್ರ ಜನರಿಗೆ ಖಂಡಿತಾ ಇಷ್ಟವಾಗುತ್ತದೆ ಎಂಬ ವಿಶ್ವಾಸ ಅವರಲ್ಲಿದೆ. 
ಚಿತ್ರದಲ್ಲಿ ಬರುವ ವಿವಿಧ ಪಾತ್ರಗಳು ಹೇಗೆ ಕಷ್ಟದ ಪರಿಸ್ಥಿತಿಗಳನ್ನು ಎದುರಿಸುತ್ತವೆ ಮತ್ತು ಅವುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಚಿತ್ರದ ಕಥೆಯಾಗಿದೆ. ಇದೊಂದು ಗಾಢ ಹಾಸ್ಯದ ಚಿತ್ರ ಎನ್ನುತ್ತಾರೆ ಇಮ್ರಾನ್.
ಸಮಾಜದಲ್ಲಿ ವಿವಿಧ ಗುಣದ ಜನರನ್ನು ನೋಡುತ್ತೇವೆ. ಕೆಲವರು ಘಟನೆಗಳನ್ನು ನೋಡುತ್ತಾ ಮೂಕ ಪ್ರೇಕ್ಷಕರಾಗಿರುತ್ತಾರೆ, ಇನ್ನು ಕೆಲವರು ಅದೃಷ್ಟವನ್ನು ಹಳಿಯುತ್ತಾರೆ. ಇನ್ನು ಕೆಲವರು ಆ ವ್ಯವಸ್ಥೆಯ ವಿರುದ್ಧ ಸಿಡಿದೇಳುತ್ತಾರೆ . ಇಂತಹ ಪಾತ್ರಗಳನ್ನು ಉಪ್ಪು ಹುಳಿ ಖಾರ ಚಿತ್ರದಲ್ಲಿ ತೋರಿಸಲಾಗಿದೆ. ನಿರ್ದೇಶಕನಾಗಿ ನಮ್ಮ ಆಲೋಚನೆಗಳು ಮತ್ತು ಶಕ್ತಿಗಳನ್ನು ಜನತೆಗೆ ತೋರಿಸಬೇಕಾಗುತ್ತದೆ. ಸಿನಿಮಾ ವಿಚಾರ ಬಂದಾಗ ಶ್ರದ್ಧೆ ಮತ್ತು ಪ್ರಾಮಾಣಿಕತೆ ಮುಖ್ಯವಾಗುತ್ತದೆ. ನೃತ್ಯ ನಿರ್ದೇಶನಕ್ಕೂ ಮತ್ತು ಚಿತ್ರ ನಿರ್ದೇಶನಕ್ಕೂ ಇರುವ ವ್ಯತ್ಯಾಸವನ್ನು ಅರಿತುಕೊಂಡಿದ್ದೇನೆ ಎನ್ನುತ್ತಾರೆ.
ಚಿತ್ರದಲ್ಲಿ ಮಾಲಾಶ್ರೀ ಮುಖ್ಯ ಪಾತ್ರದಲ್ಲಿ, ಅನುಶ್ರೀ, ಶರತ್, ಜಯಶ್ರೀ, ಧನಂಜಯ್, ಶಶಿ ದೇವರಾಜ್ ಕೂಡ ಉತ್ತಮ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜುಡಯ್ ಸಾಂಡಿ ಸಂಗೀತ ನೀಡಿದ್ದು, ಪ್ರಜ್ವಲ್ ಪೈ ಮತ್ತು ಕಿಶೋರ್ ಅಕ್ಸ ಕೂಡ ಸಂಗೀತ ಒದಗಿಸಿದ್ದಾರೆ. ನಿರಂಜನ್ ಬಾಬು ಅವರ ಛಾಯಾಗ್ರಹಣವಿದೆ.
ಚಿತ್ರಕ್ಕೆ ಬಂಡವಾಳ ಹಾಕಿರುವ ಎಂ.ರಮೇಶ್ ಅವರು ಇನ್ಫೋಸಿಸ್ ನ ಸುಧಾ ಮೂರ್ತಿಯವರ ಸಲಹೆಯಂತೆ ಇಮ್ರಾನ್ ಸರ್ದಾರಿಯಾ ಅವರು ಕಥೆ ಹೇಳಿದಾಗ ಚಿತ್ರ ನಿರ್ಮಿಸಲು ಮುಂದೆ ಬಂದರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com