ನಗುವುದು, ಮತ್ತೊಬ್ಬರನ್ನು ನಗಿಸುವುದು ನನಗಿಷ್ಟ: ವಿನಯಾ ಪ್ರಸಾದ್

ಎರಡು ದಶಕಗಳಲ್ಲಿ ಹಿರಿಯ ನಟರುಗಳೊಂದಿಗೆ ಸುಮಾರು 60 ಸಿನಿಮಾಗಳಲ್ಲಿ ನಟನೆ, ಕಿರುತೆರೆ ಧಾರಾವಾಹಿಗಳ ಅಭಿನಯದಲ್ಲಿ ಯಶಸ್ಸಿನ ನಂತರ ನಟಿ ...
ಲಕ್ಷ್ಮಿ ನಾರಾಯಣರ ಪರಪಂಚನೆ ಬೇರೆ ಸಿನಿಮಾ ಸ್ಟಿಲ್
ಲಕ್ಷ್ಮಿ ನಾರಾಯಣರ ಪರಪಂಚನೆ ಬೇರೆ ಸಿನಿಮಾ ಸ್ಟಿಲ್
ಬೆಂಗಳೂರು: ಎರಡು ದಶಕಗಳಲ್ಲಿ ಹಿರಿಯ ನಟರುಗಳೊಂದಿಗೆ ಸುಮಾರು 60 ಸಿನಿಮಾಗಳಲ್ಲಿ ನಟನೆ, ಕಿರುತೆರೆ ಧಾರಾವಾಹಿಗಳ ಅಭಿನಯದಲ್ಲಿ ಯಶಸ್ಸಿನ ನಂತರ ನಟಿ ವಿನಯಾ ಪ್ರಸಾದ್ ನಿರ್ದೇಶನಕ್ಕಿಳಿದಿದ್ದಾರೆ. 
ಮೊಟ್ಟ ಮೊದಲ ಬಾರಿಗೆ ಲಕ್ಷ್ಮಿ ನಾರಾಯಣರ ಪರಪಂಚನೆ ಬೇರೆ ಎಂಬ ಸಿನಿಮಾ ನಿರ್ದೇಶಿಸಿದ್ದು ,ವಿನಯಾ  ಪ್ರಸಾದ್ ಪತಿ ಜ್ಯೋತಿ ಪ್ರಕಾಶ್‌ ಅತ್ರೆ ಅವರು ನಿರ್ಮಿಸಿರುವ ಚಿತ್ರ "ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ ಚಿತ್ರ ಅಕ್ಟೋಬರ್‌ 6 ರಂದು ತೆರೆಗೆ ಬರುತ್ತಿದೆ.
ಈ ಹಾಸ್ಯಭರಿತ ಕೌಟುಂಬಿಕ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಜ್ಯೋತಿ ಪ್ರಕಾಶ್‌ ಅತ್ರೆ ಅವರು ಸಂಗೀತ ನಿರ್ದೇಶನ ಹಾಗೂ ಕ್ರಿಯಾತ್ಮಕ ನಿರ್ದೇಶನ ಸಹ ಮಾಡಿದ್ದಾರೆ.   ಈ ಸಿನಿಮಾ ಹಾಗೂ ನಿರ್ದೇಶನದ ಸಂಬಂಧ ನಟಿ ಹಾಗೂ ನಿರ್ದೇಶಕಿ ವಿನಯಾ ಪ್ರಸಾದ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಎರಡು ದಶಕಗಳ ನಂತರ ಏಕೆ ನಿರ್ದೇಶನಕ್ಕೆ ಇಳಿದಿರಿ?
ನಿರ್ದೇಶನ ನನ್ನ ಕಳೆದ 15 ವರ್ಷಗಳ ಆಸೆ, ಆದರೆ ನಟನಾ ವೃತ್ತಿಯಲ್ಲಿ ನಾನು ನಿರತಳಾದ್ದರಿಂದ ಈ ಆಸೆಯನ್ನು ಹಾಗೆಯೇ ಇಟ್ಟಿದ್ದೆ, ಜೊತೆಗೆ ನನಗೆ ಹೇಗೆ ಸಬ್ಜೆಕ್ಟ್ ತೆಗೆದುಕೊಳ್ಳಬೇಕು ಹೇಗೆ ಆರಿಸಿಕೊಳ್ಳಬೇಕು ಎಂಬ ಹಿನ್ನೆಲೆ ಗೊತ್ತಿರಲಿಲ್ಲ, ಸಮಾಜವನ್ನು ಶಾಂತಿಯುತವಾಗಿಸುವ ಕಥೆ ನೀಡಬೇಕೆಂಬುದು ನನ್ನ ಬಯಕೆಯಾಗಿತ್ತು. ಲಕ್ಷ್ಮಿ ನಾರಾಯಣನ ಪ್ರಪಂಚಾನೇ ಬೇರೆಯಲ್ಲಿ ಅದೆಲ್ಲಾ ಈಡೇರಿದೆ. ನನ್ನ ಪತಿ ಜ್ಯೋತಿ ಪ್ರಕಾಶ್, ಈ ಸಿನಿಮಾದ ಹೃದಯ, ಇದು ಹಿಂದಿಯ ಕಥೆಯಾಗಿದೆ, ಅದನ್ನು ಕನ್ನಡಕ್ಕೆ ಒಗ್ಗುವ ರೀತಿಯಲ್ಲಿ ನಿರ್ದೇಶನ ಹಾಗೂ ನಿರ್ಮಾಣ ಮಾಡಲಾಗಿದೆ. ಅದು ಬಹಳ ಸಮಯ ಹಿಡಿಯಿತು.
ನಿರ್ದೇಶನದಲ್ಲಿ ಬಹುದೊಡ್ಡ ಸವಾಲು ಯಾವುದು?
ಹೊಸತು ಎಂಬುದು ಯಾವುದೇ ಆಗಲಿ  ಅದು ಸವಾಲೆನಿಸುತ್ತದೆ, ಕಳೆದ 26 ವರ್ಷದ ಅನುಭವ ನನಗೆ ಇದೆಲ್ಲಾವನ್ನು ಮೀರಿ ನಿಲ್ಲಲು ಸಹಾಯಮಾಡಿತು. ಎಲ್ಲದಕ್ಕಿತಂ ಹೆಚ್ಚಾಗಿ ನಾವು ಈ ಸೆಟ್ ಬಗ್ಗೆ ಮೊದಲೇ ಯೋಜನೆ ರೂಪಿಸಿದ್ದೆವು. ಶೂಟಿಂಗ್ ವೇಳೆ ನೈಸರ್ಗಿಕವಾಗಿ ನಮಗೆ ಯಾವುದೇ ತೊಂದರೆಗಳಾಗಲಿಲ್ಲ, 
ನಟಿಯಾಗಿ ನೀವು ತುಂಬಾ ಗಂಭೀರ ಪಾತ್ರಗಳಲ್ಲಿ ಅಭಿನಯಿಸಿದ್ದೀರಾ, ಆಧರೆ ನಿರ್ದೇಶನದಲ್ಲಿ ಹಾಸ್ಯ ಯಾಕೆ?
ಜೀವನದ ಕಷ್ಟದ ಸನ್ನಿವೇಶಗಳಿಗೆ  ಹಾಸ್ಯ ಬಿಗ್ ರಿಲೀಫ್ ನೀಡುತ್ತದೆ. ಸೆನ್ಸ್ ಆಫ್ ಹ್ಯೂಮರ್ ಇರುವವರು ಯಾವುದೇ ಕಷ್ಟು ಸಮಯಗಳನ್ನು ನಿಭಾಯಿಸಬಲ್ಲವರಾಗಿರುತ್ತಾರೆ.  ನಾನು ಗಂಭೀರವಾದ ಪಾತ್ರಗಳಲ್ಲಿ ಅಭಿನಯಿಸಿದ್ದರೂ, ನನ್ನ ವೃತ್ತಿ ಜೀವನ ಆರಂಭವಾದದ್ದೇ ಗಣೇಶನ ಮದುವೆ ಎಂಬ ಕಾಮಿಡಿ ಸಿನಿಮಾದಿಂದ. ಕೆಲ ವಯಸ್ಸಿನ ನಂತರ ಮಹಿಳೆಯರಿಗೆ ಹಾಸ್ಯ ಪಾತ್ರ ಸರಿ ಹೊಂದುವುದಿಲ್ಲ, ನನಗೆ ಸೆನ್ಸ್ ಆಫ್ ಹ್ಯೂಮರ್ ಇದೆ, ಯಾವಾಗಲೂ ಉತ್ತಮ ಹಾಸ್ಯವಿದ್ದರೇ ನಕ್ಕು ಎಂಜಾಯ್ ಮಾಡುತ್ತೇನೆ, ಬೇರೆಯವರನ್ನು ನಗಿಸುವುದು ನನಗೆ ತುಂಬಾ ಇಷ್ಟದ ವಿಷಯವಾಗಿದೆ.
ಲಕ್ಷ್ಮಿ ನಾರಾಯಣರ ಪರಪಂಚದ ಬಗ್ಗೆ ವಿವರ ನೀಡಿ?
ಲಕ್ಷ್ಮಿ ನಾರಾಯಣ ವಿಧೂಷಕನ ದಂಡವಲ್ಲ, ಪಾತ್ರಗಳ ಮೂಲಕ ಹಾಸ್ಯರಸ ತರಲಾಗುತ್ತಿದೆ. ಪ್ರತಿಯೊಂದು ಪಾತ್ರವೂ ಹಾಸ್ಯವಿರುವುದಕ್ಕೆ ಕಾರಣವಿದೆ, ಗಣೇಶನ ಮದುವೆ ಸಿನಿಮಾ ಜೊತೆ ಈ ಸಿನಿಮಾವನ್ನು ಹೋಲಿಕೆ ಮಾಡಲಾಗದು. ಆ ಸಿನಿಮಾವನ್ನು ಎಂಜಾಯ್ ಮಾಡಿದವರು ಇದನ್ನು ಕೂಡ ಎಂಜಾಯ್ ಮಾಡುತ್ತಾರೆ,
ಹೊಸತು  ಮಾಡಲು ಹಲವರು ನನಗೆ ಪ್ರೋತ್ಸಾಹ ನೀಡಿದರು. ಇದರಲ್ಲಿ ಮಂಜುನಾಥ ಹೆಗಡೆ ನನ್ನ ಪತಿಯ ಪಾತ್ರದಲ್ಲಿ ನಟಿಸಿದ್ದಾರೆ. ಜ್ಯೋತಿ ಪ್ರಕಾಶ್ ಹಾಗೂ ನನ್ನ ಪುತ್ರಿ ಪ್ರಥಮಾ ಪ್ರಸಾದ್ ಕೂಡ ಸಿನಿಮಾದಲ್ಲಿ ನಟಿಸಿದ್ದಾಳೆ.
ಸಿನಿಮಾ ಕೌಟುಂಬಿಕ ಸಂಬಂಧಗಳ ಕುರಿತಾದದ್ದೇ?
ನಾವು ಮೂವರು ಸಿನಿಮಾ ಅಭಿರುಚಿ ಉಳ್ಳವರು, ಸಿನಿಮಾ ನೋಡಿ ಅದರ ಬಗ್ಗೆ ಚರ್ಚೆ ಮಾಡುವುದು, ಜ್ಯೋತಿ ಪ್ರಕಾಶ್ ದು  ಕ್ರಿಯೆಟಿವ್ ವ್ಯಕ್ತಿತ್ವ.35 ವರ್ಷಗಳಲ್ಲಿ ಸಿನಿಮಾರಂಗಕ್ಕೆ ಉತ್ತಮವಾದದ್ದನ್ನು ನೀಡಿದ್ದಾರೆ,ನಾವು ಸಿನಿಮಾ ನೋಡುವಾಗ ಈ ಎಲ್ಲಾ ಅಂಶಗಳನ್ನು ಒಪ್ಪಿಕೊಳ್ಳುತ್ತೇವೆ. ಸಿನಿಮಾ ನಮ್ಮನ್ನು ಒಟ್ಟಿಗೆ ಸೇರಿಸುತ್ತದೆ, ಅದರ ಬಗ್ಗೆ ನಾವು ಗಂಟೆಗಟ್ಟಲೇ ಚರ್ಚೆ ನಡೆಸುತ್ತೇವೆ, ನನ್ನ ಮಗಳು ಸಿನಿಮಾ ಅಭಿಮಾನಿ, ಅಕೆ ಉತ್ತಮ ವಿಮರ್ಶಕಿ ಕೂಡ
ಮತ್ತೊಂದು ಸಿನಿಮಾ ನಿರ್ದೇಶನ ಮಾಡುತ್ತೀರಾ?
ನನ್ನ ಮೊದಲ ಸಿನಿಮಾ ಯಾವ ರೀತಿ ಮೂಡಿ ಬಂದಿತೆಂಬುದರ ರೆಸ್ಪಾನ್ಸ್ ನೋಡಿ ಮುಂದಿನ ಸಿನಿಮಾ ನಿರ್ದೇಶನದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಇಂದಿನ ನಿರ್ಮಾಪಕರು  ಯಶಸ್ಸಿಗೆ ಅಂಟಿ ಕೊಂಡಿರುತ್ತಾರೆ, ನನಗೆ ಇದರಲ್ಲಿ ನಂಬಿಕೆಯಿಲ್ಲ, ನಾನೊಬ್ಬ ಟ್ರೆಂಡ್ ಸೆಟ್ಟರ್ ಆಗಬೇಕೆಂಬ ಬಯಕೆಯಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com