ಮನರಂಜನೆ ದೃಷ್ಟಿಯಿಂದ 'ವೈರ' ನೋಡಿ, 'ಎ' ಸರ್ಟಿಫಿಕೇಟ್ ಬಗ್ಗೆ ಚಿಂತೆ ಬೇಡ: ನಿರ್ದೇಶಕ, ನಟ ನವರಸನ್

ನವರಸನ್ ನಿರ್ದೇಶಿಸಿ ನಟಿಸಿರುವ ಚಿತ್ರ ವೈರ ನಾಳೆ ಬಿಡುಗಡೆಯಾಗಲಿದೆ. ಇದು ಈ ವಾರ ಬಿಡುಗಡೆಯಾಗುತ್ತಿರುವ ಇತರ ನಾಲ್ಕು ....
ವೈರ ಚಿತ್ರದ ಸ್ಟಿಲ್
ವೈರ ಚಿತ್ರದ ಸ್ಟಿಲ್
ಬೆಂಗಳೂರು: ನವರಸನ್ ನಿರ್ದೇಶಿಸಿ ನಟಿಸಿರುವ ಚಿತ್ರ ವೈರ ನಾಳೆ ಬಿಡುಗಡೆಯಾಗಲಿದೆ. ಇದು ಈ ವಾರ ಬಿಡುಗಡೆಯಾಗುತ್ತಿರುವ ಇತರ ನಾಲ್ಕು ಚಿತ್ರಗಳೊಂದಿಗೆ ಸ್ಪರ್ಧೆಯೊಡ್ಡಲಿದೆ. ತಮ್ಮ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ಪ್ರೇಕ್ಷಕರ ಮನಸೂರೆಗೊಳ್ಳುತ್ತದೆ ಎಂಬ ವಿಶ್ವಾಸ ನವರಸನ್ ಗಿದೆ. ಇದೊಂದು ದ್ವೇಷ ಸಾಧಿಸುವ ಹಾರರ್ ಅಂಶ ಹೊಂದಿರುವ ಕಥೆಯಿರುವ ಸಿನಿಮಾ, ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದು ನವರಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೊಂದು ಸತ್ಯ ಘಟನೆ ಆಧಾರಿತ ಕಥೆಯಾಗಿದ್ದು ಸಿನಿಮಾ ಉದ್ದೇಶಕ್ಕಾಗಿ ಕೆಲವು ಭಾಗಗಳನ್ನು ಕಾಲ್ಪನಿಕವಾಗಿ ತೆಗೆಯಲಾಗಿದೆ. ಒಂದು ಹುಡುಗಿಯ ಸುತ್ತ ಸುತ್ತುವ ಕಥೆ ಇದಾಗಿದ್ದು ಆಕೆ ಪ್ರೀತಿ ಮತ್ತು ಉದ್ಯೋಗ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿರುತ್ತಾಳೆ. ಅದುವೇ ಸಿನಿಮಾ ಕಥೆಯ ಜೀವಾಳ ಎಂದರು.
ಆದರೆ ಸೆನ್ಸಾರ್ ಮಂಡಳಿ ನೀಡಿರುವ ಸರ್ಟಿಫಿಕೇಟ್ ಅವರಿಗೆ ಬೇಸರ ತರಿಸಿದೆ. ಈ ವಿಷಯದಲ್ಲಿ ನಾನು ಅಸಹಾಯಕನಾಗಿದ್ದೇನೆ ಎನ್ನುತ್ತಾರೆ.
ನನ್ನ ಮೊದಲ ಚಿತ್ರ ಹಾರರ್ ಚಿತ್ರ  ರಾಕ್ಷಸಿಗೆ ಯು/ಎ ಸರ್ಟಿಫಿಕೇಟ್ ನೀಡಿರುವ ಸೆನ್ಸಾರ್ ಮಂಡಳಿ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಏಕೆ ಎ ಸರ್ಟಿಫಿಕೇಟ್ ನೀಡಿದರು ಎಂದು ಗೊತ್ತಾಗುತ್ತಿಲ್ಲ. ನಾನು ಮಂಡಳಿ ಅಧಿಕಾರಿಗಳಿಗೆ ನನ್ನ ಕಡೆಯಿಂದ ಕಥೆಯನ್ನು ವಿವರಿಸಲು ಯತ್ನಿಸಿದರೂ ಅವರು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ. ಮಂಡಳಿಯ ಸರ್ಟಿಫಿಕೇಟ್ ನ್ನು ಗಂಭೀರವಾಗಿ ತೆಗೆದುಕೊಳ್ಳದೆ, ಚಿತ್ರವನ್ನು ಮನರಂಜನೆಯಾಗಿ ನೋಡಿ ಎಂದು ನಾನು ಪ್ರೇಕ್ಷಕರಿಗೆ ಮನವಿ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ.
ಈ ಮಧ್ಯೆ ವೈರ ಚಿತ್ರದ ರಿಮೇಕ್ ಹಕ್ಕುಗಳು ತೆಲುಗು ಮತ್ತು ತಮಿಳು ಭಾಷೆಗಳಿಗೆ ಮಾರಾಟವಾಗಿವೆ. 1 ಗಂಟೆ 47 ನಿಮಿಷಗಳ ಅವಧಿಯ ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾಂಕ ಮಲ್ನಾಡು, ಮುಖ್ಯ ಪಾತ್ರದಲ್ಲಿ ತಬಲಾ ನಾಣಿ, ಕೆಂಪೇ ಗೌಡ ಮತ್ತು ಅಜಯ್ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com