ಪವನ್ ಕಲ್ಯಾಣ್ ನವಜಾತ ಶಿಶುವನ್ನು ಎತ್ತಿಕೊಂಡು ಸಂಭ್ರಮಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪವನ್ ಕಲ್ಯಾಣ್ ಈ ಹಿಂದೆ ಎರಡು ಮದುವೆಯಾಗಿದ್ದರು. 1997ರಲ್ಲಿ ನಂದಿನಿ ಎಂಬುವವರನ್ನು ಮದುವೆಯಾಗಿದ್ದ ಪವನ್ 2007ರಲ್ಲಿ ಕೌಟುಂಬಿಕ ಕಲಹದಿಂದಾಗಿ ವಿಚ್ಛೇದನ ನೀಡಿದ್ದರು. ಬಳಿಕ 2009ರಲ್ಲಿ ತಮ್ಮ ಬಹುಕಾಲದ ಗೆಳತಿ ಹಾಗೂ ನಟಿ ರೇಣು ದೇಸಾಯಿ ಅವರನ್ನು ಮದುವೆಯಾಗಿದ್ದರು. ರೇಣು-ಪವನ್ ದಂಪತಿಗೆ ಅಕಿರಾ ಮತ್ತು ಆದ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ.