ಗಣೇಶ್ ಈಗ ಮುವಾಯ್‌ಥಾಯ್‌ ನ ಇಂಡಿಯನ್ ಬ್ರಾಂಡ್ ಅಂಬಾಸಿಡರ್!

ಚಮಕ್ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿರುವ ಗಣೇಶ್ ಪ್ರಶಾಂತ್ ಅವರ ಆರೇಂಜ್ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇದೇ ವೇಳೆ ಗಣೇಶ್ ಜನಪ್ರಿಯ ಸಮರ ..
ಗಣೇಶ್
ಗಣೇಶ್
ಬೆಂಗಳೂರು: ಚಮಕ್ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿರುವ ಗಣೇಶ್ ಪ್ರಶಾಂತ್ ಅವರ ಆರೇಂಜ್ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇದೇ ವೇಳೆ ಗಣೇಶ್ ಜನಪ್ರಿಯ ಸಮರ ಕಲೆಯಾದ ಮುವಾಯ್ ಥಾಯ್ ಆರ್ಟ್ಸ್ ಕಲಿಯುತ್ತಿದ್ದಾರೆ.
ಕಳೆದ 10 ತಿಂಗಳಿಂದ ಪ್ರತಿದಿನ ಮೂರು ಗಂಟೆಯನ್ನು ಮುವಾಯ್ ಥಾಯ್  ಮಾರ್ಷಲ್ ಆರ್ಟ್ಸ್ ಕಲಿಯಲು ಮೀಸಲಾಗಿರಿಸಿದ್ದಾರೆ, ಅದಕ್ಕೆ ಸಿಕ್ಕ ಪ್ರತಿಫಲ ಎಂಬಂತೆ ಇಂಡಿಯನ್‌ ಬ್ರಾಂಡ್‌ ಅಂಬಾಸಿಡರ್‌ ಆಫ್‌ ಮುವಾಯ್‌ಥಾಯ್‌ ಆಗಿಯೂ ಆಯ್ಕೆಯಾಗಿದ್ದಾರೆ.
ನಾನು ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದೆ, ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿರುವುದು ಖುಷಿಯ ವಿಚಾರವಾಗಿದೆ ಎಂದು ಹೇಳಿದ್ದಾರೆ, ಬ್ರ್ಯಾಂಡ್ ಅಂಬಾಸಿಡರ್ ಗಾಗಿ ಮುವಾಯ್‌ಥಾಯ್‌ ಕಂಪನಿ ಹುಡುಕಾಟ ನಡೆಸುತ್ತಿತ್ತು, ನನ್ನ ಅಭಿರುಚಿಯ ಬಗ್ಗೆ ತಿಳಿದ ಫೆಡರೇಷನ್ ನನ್ನನ್ನು ಪರಿಗಣಿಸಿದೆ ಎಂದು ಹೇಳಿದ್ದಾರೆ.
ಗಣೇಶ್‌ಗೆ ಹೇಮಂತ್‌ ಅನ್ನುವವರು ತರಬೇತಿ ನೀಡುತ್ತಿದ್ದಾರೆ. ಈ ಸಮರ ಕಲೆಯನ್ನು ಹೇಮಂತ್‌ ಕಲಿತದ್ದು ಥಾಯ್ಲೆಂಡ್‌ನಲ್ಲೇ. ಮೂಲತಃ ಕನ್ನಡಿಗರು ಆಗಿರುವ ಇವರು 64 ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ದಿನವೂ ಬೆಳಗ್ಗೆ 4.30ರಿಂದ 3 ಗಂಟೆ ಗಳ ಹೇಮಂತ್‌ ನನಗೆ ತರಬೇತಿ ಕೊಡುತ್ತಿದ್ದರು.
ಹನುಮಾನ್‌ ತಾಯ್‌ ಅಂತ ಒಂದು ಕಲೆ ಬರುತ್ತದೆ. ಅದು ನನ್ನನ್ನು ಸೆಳೆಯಿತು. ಅದೊಂದು ಪಂಚ್‌. ಹನುಮಾನ್‌ ರೀತಿಯಲ್ಲಿ ಹಾರಿ ಹೊಡೆಯುವ ಶೈಲಿಯದ್ದು. ನಮ್ಮ ಹನುಮಾನ್‌ ಅಲ್ವ ಅಂತ ಹೆಮ್ಮೆ ಮತ್ತು ಕುತೂಹಲ ಮೂಡಿತು. ಹಾಗಾಗಿ ಈ ಕಲೆಯನ್ನು ಕಲಿಯುವುದಕ್ಕೆ ಮುಂದಾದೆ. ಇದನ್ನು ಕಲೆಯುವುದಕ್ಕಿಂತ ಮುಂಚೆ ರಾಮ ಮತ್ತು ಜಿಂಕೆಯ ಆಟವನ್ನು ಆಡುತ್ತಾರೆ. ಅದು ಕೂಡ ಇಂಟ್ರಸ್ಟಿಂಗ್‌ ಆಗಿತ್ತು. ಅಲ್ಲದೇ, ಈ ಕಲೆಯನ್ನು ಕಲಿಯುವವರು ರಾಮನಿಗೆ ಗುರುವಿನ ಸ್ಥಾನ ಕೊಟ್ಟಿದ್ದಾರೆ. 
ಮಾರ್ಷಲ್‌ ಆರ್ಟ್‌ನಲ್ಲಿ ತುಂಬಾ ಕಠಿಣವಾದ ಕಲೆ ಇದಾಗಿದ್ದರಿಂದ ನಾನೂ ಕೂಡ ಅಷ್ಟೇ ಶ್ರಮಪಟ್ಟು ಕಲಿತಿದ್ದೇನೆ. ಅವಕಾಶ ಸಿಕ್ಕರೆ ಇದನ್ನು ಸಿನಿಮಾದಲ್ಲಿಯೂ ಬಳಸಿಕೊಳ್ಳುತ್ತೇನೆ' ಎಂದು ಗಣೇಶ್‌ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com