'99 ಸಾಂಗ್ಸ್' ನಾಯಕ-ನಾಯಕಿ ಆಯ್ಕೆಗೆ 1000 ಆಡಿಷನ್ಸ್ ತೆಗೆದುಕೊಂಡ ಎಆರ್ ರೆಹಮಾನ್

ಬಹು ನಿರೀಕ್ಷಿತ '99 ಸಾಂಗ್ಸ್' ಚಿತ್ರದ ನಾಯಕ-ನಾಯಕಿಯರನ್ನು ಸಾವಿರ ಆಡಿಷನ್ ಗಳನ್ನು ಮಾಡುವ ಮೂಲಕ ...
ಎ.ಆರ್.ರೆಹಮಾನ್
ಎ.ಆರ್.ರೆಹಮಾನ್
Updated on
ಮುಂಬೈ: ಬಹು ನಿರೀಕ್ಷಿತ '99 ಸಾಂಗ್ಸ್' ಚಿತ್ರದ ನಾಯಕ-ನಾಯಕಿಯರನ್ನು ಸಾವಿರ ಆಡಿಷನ್ ಗಳನ್ನು ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಲಾಯಿತು. ಚಿತ್ರದಲ್ಲಿ 10ರಿಂದ 12 ಹಾಡುಗಳಿವೆ ಎಂದು ಚಿತ್ರದ ಸಹ ನಿರ್ಮಾಪಕ ಮತ್ತು ಬರಹಗಾರರಾಗಿರುವ ಆಸ್ಕರ್ ಪ್ರಶಸ್ತಿ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ತಿಳಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ವಿಷಯ ಹಂಚಿಕೊಂಡ ರೆಹಮಾನ್, ಚಿತ್ರ ನಿರ್ಮಾಣ ಸಂಪೂರ್ಣ ಪ್ರಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಹಲವು ವರ್ಷಗಳಲ್ಲಿ ಈ ಚಿತ್ರಕ್ಕಾಗಿ ಸರಿಯಾದ ನಾಯಕ ನಾಯಕಿ ಸಿಗಲು ಸುಮಾರು 1000 ಆಡಿಷನ್ ನಡೆಸಿದ್ದೇವೆ. ಚಿತ್ರಕ್ಕೆ ವಿಶೇಷ ಪ್ರತಿಭೆ ಮತ್ತು ಹೊಸತನ ತರಲು ವಿಶೇಷ ನಾಯಕ ನಾಯಕಿಯರು ನಮಗೆ ಸಿಕ್ಕಿದ್ದಾರೆ ಎಂದು ರೆಹಮಾನ್ ಹೇಳಿದ್ದಾರೆ.
ಚಿತ್ರದ ಮುಖ್ಯ ಪಾತ್ರಧಾರಿಗಳಿಗೆ ಸುಮಾರು ಒಂದು ವರ್ಷ ಕೆಎಂ ಮ್ಯೂಸಿಕ್ ಕನ್ಸರ್ವೇಟರಿಯಲ್ಲಿ ತರಬೇತಿ ನೀಡಲಾಗಿದೆ. ಚಿತ್ರದ ಪಾತ್ರಕ್ಕೆ ಅಗತ್ಯವಾದ ಸಂಗೀತ ಉಪಕರಣವನ್ನು ನುಡಿಸಲು ತರಬೇತಿಯಲ್ಲಿ ಕಲಿಸಲಾಗಿದೆ. ಹಾಲಿವುಡ್ ನಲ್ಲಿ ತೀವ್ರತರವಾದ ನಟನಾ ತರಬೇತಿಯಲ್ಲಿ ಕೂಡ ಭಾಗವಹಿಸಿದ್ದಾರೆ ಎಂದರು.
ತಮ್ಮ ವೈಎಂ ಬ್ಯಾನರ್ ನಡಿ ಐಡಿಯಲ್ ಎಂಟರ್ಟೈನ್ ಮೆಂಟ್ ನೊಂದಿಗೆ ರೆಹಮಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 99 ಸಾಂಗ್ಸ್ ಚಿತ್ರವನ್ನು ಭಾರತದಲ್ಲಿ ಚಿತ್ರೀಕರಣ ಮಾಡಲಾಗಿದೆ, ಉಕ್ರೇನ್ ನಲ್ಲಿ ಹಲವು ದಿನಗಳ ಶೂಟಿಂಗ್ ನಡೆಯಲಿದೆ. ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. 
ಚಿತ್ರದ ಹಾಡುಗಳು ಬಿಡುಗಡೆಗೆ ಸಜ್ಜಾಗಿದೆ. ಚಿತ್ರವನ್ನು ವಿಶ್ವೇಶ್ ಕೃಷ್ಣಮೂರ್ತಿ ನಿರ್ದೇಶಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com