ಪಿ.ಸಿ ಶೇಖರ್ ನಿರ್ದೇಶನದ ಭಯೋತ್ಪಾದನೆ ಕುರಿತ ಚಿತ್ರದಲ್ಲಿ ರಾಗಿಣಿ

ರಾಗಿಣಿ ದ್ವಿವೇದಿ ತಮ್ಮ ಸಿನಿಮಾಗಳ ಆಯ್ಕೆ ಬಗ್ಗೆ ಈಗ ಚ್ಯೂಸಿಯಾಗಿದ್ದಾರೆ. ಉತ್ತಮ ಕಥೆಗಳಲ್ಲಿ ಮಾತ್ರ ನಟಿಸಬೇಕೆಂದು ನಿರ್ಧರಿಸಿರುವ ರಾಗಿಣಿ ಅಭಿನಯದ ...
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
ಬೆಂಗಳೂರು: ರಾಗಿಣಿ ದ್ವಿವೇದಿ ತಮ್ಮ ಸಿನಿಮಾಗಳ ಆಯ್ಕೆ ಬಗ್ಗೆ ಈಗ ಚ್ಯೂಸಿಯಾಗಿದ್ದಾರೆ. ಉತ್ತಮ ಕಥೆಗಳಲ್ಲಿ ಮಾತ್ರ ನಟಿಸಬೇಕೆಂದು ನಿರ್ಧರಿಸಿರುವ ರಾಗಿಣಿ ಅಭಿನಯದ ಗಾಂಧಿಗಿರಿ, ಕಿಚ್ಚು, ನಾನೇ ನೆಕ್ಸ್ಟ್ ಸಿಎಂ ಸಿನಿಮಾಗಳು ರಿಲೀಸ್ ಗಾಗಿ ಕಾಯುತ್ತಿವೆ, ರವಿ ಶ್ರೀವತ್ಸವ ಅವರ ಜೊತೆಗಿನ ಮತ್ತೊಂದು ಪ್ರಾಜೆಕ್ಟ್ ಇನ್ನೂ ಸೆಟ್ಟೇರಬೇಕಿದೆ.
ಈ ನಡುವೆ ರಾಗಿಣಿ ಪಿ.ಸಿ ಶೇಖರ್ ನಿರ್ದೇಶನದ ನಾಯಕಿ ಪ್ರಧಾನವಾದ ಸಿನಿಮಾದಲ್ಲಿ ನಟಿಸಲಿದ್ದಾರೆ. ಭಯೋತ್ಪಾದನೆ ಕುರಿತ ಸಿನಿಮಾ ಇದಾಗಿದ್ದು, ಚಿತ್ರ ಕಥೆ ಕೇಳಿದ ತಕ್ಷಣ ನಾನು ಸಿನಿಮಾಗಾಗಿ ಸಮ್ಮತಿಸಿದ್ದೇನೆ. ಯಾವಾಗ ಮೂಹೂರ್ಥ ಎಂಬುದರ ಬಗ್ಗೆ ಶೀಘ್ರವೇ ಮಾಹಿತಿ ನೀಡಲಾಗುವುದು ಎಂದು ರಾಗಿಣಿ ಹೇಳಿದ್ದಾರೆ.
ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ರಾಗಿಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಶೇಖರ್‌ ನಿರ್ದೇಶನದ "ನಾಯಕ' ಚಿತ್ರದಲ್ಲಿ ರಾಗಿಣಿ ನಾಯಕಿಯಾಗಿ ಅಭಿನಯಿಸಿದ್ದರು. 
ಭಯೋತ್ದಾದನೆ ವಿಷಯವನ್ನಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಎರಡು ದಿನಗಳ ಕಾಲ ಸುದ್ದಿಯಾಗುತ್ತದೆ. ಆ ನಂತರ ಏನಾಗುತ್ತದೆ ಎಂದು ಯಾರೂ ಯೋಚಿಸುವುದಿಲ್ಲ.
ಒಂದು ಭಯೋತ್ಪಾದನೆ ಚಟುವಟಿಕೆಯುಂದ ಹೇಗೆ ರಾಜಕೀಯವಾಗಿ, ಧಾರ್ಮಿಕವಾಗಿ ಏನೆಲ್ಲಾ ಸಮಸ್ಯೆಗಳಾಗುತ್ತದೆ ಮತ್ತು ಒಬ್ಬ ಮಹಿಳೆಗೆ ಇದರಿಂದ ಸಮಸ್ಯೆಯಾದರೆ, ಏನು ಮಾಡುತ್ತಾಳೆ ಎನ್ನುವುದು ಈ ಚಿತ್ರದ ಕಥೆ ಎಂದು ಪಿ.ಸಿ ಶೇಖರ್ ತಿಳಿಸಿದ್ದಾರೆ. 
ಚಿತ್ರಕ್ಕೆ ಹೆಸರು ಫಿಕ್ಸ್‌ ಆಗಿಲ್ಲ. ನವೆಂಬರ್‌ 15ರಿಂದ ಚಿತ್ರ ಶುರುವಾಗಲಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ' ಎನ್ನುತ್ತಾರೆ ಶೇಖರ್‌.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com