ಸಿನಿಮಾ ಪ್ಲಾಪ್ ಆದಾಗ ಪ್ರತಿ ಭಾರಿ ನಿರ್ದೇಶಕ ಸಾಯುತ್ತಾನೆ: ರವಿ ಶ್ರೀವತ್ಸ

ಡೆಡ್ಲಿಸೋಮ, ಡೆಡ್ಲಿ-2 ನಂತರ ಸಿನಿಮಾ ನೀಡಿದ ನಿರ್ದೇಶಕ ರವಿ ಶ್ರೀವತ್ಸ ದಶಮುಖ ಚಿತ್ರದ ನಾಲ್ಕು ವರ್ಷಗಳ ನಂತರ ಮತ್ತೆ ಟೈಗರ್ ಗಲ್ಲಿ ಮೂಲಕ ...
ಟೈಗರ್ ಗಲ್ಲಿ ಸಿನಿಮಾ ಸ್ಟಿಲ್
ಟೈಗರ್ ಗಲ್ಲಿ ಸಿನಿಮಾ ಸ್ಟಿಲ್
ಬೆಂಗಳೂರು: ಡೆಡ್ಲಿಸೋಮ, ಡೆಡ್ಲಿ-2 ನಂತರ ಸಿನಿಮಾ ನೀಡಿದ ನಿರ್ದೇಶಕ ರವಿ ಶ್ರೀವತ್ಸ ದಶಮುಖ ಚಿತ್ರದ  ನಾಲ್ಕು ವರ್ಷಗಳ ನಂತರ ಮತ್ತೆ ಟೈಗರ್ ಗಲ್ಲಿ ಮೂಲಕ ಹಿಂದಿರುಗಿದ್ದಾರೆ.
ಸಿನಿಮಾ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿನಿಮಾ ಪ್ಲಾಪ್ ಆದಾಗ ಪ್ರತಿ ಸಾರಿಯೂ ನಿರ್ದೇಶಕ ಸಾಯುತ್ತಾನೆ, ಇದು ನನಗೆ ಮರು ಹುಟ್ಟು,  ಹೊಸ ಕಥೆಯೊಂದಿಗೆ ಬಂದಿದ್ದೇನೆ. ಟೈಗರ್ ಗಲ್ಲಿ ಜೊತೆ ಮತ್ತೆ ಅದೇ ಹುರುಪಿನಿಂದ, ಎದ್ದು ನಿಲ್ಲುತ್ತೇನೆ ಎಂಬ ಭರವಸೆಯಿಂದ ಬಂದಿದ್ದೇನೆ, ಎಂ.ಎನ್ ಕುಮಾರ್ ಅವರಂತ ನಿರ್ಮಾಪಕರಿಂದ ನನ್ನ ಆತ್ಮ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
2010 ರಲ್ಲಿ ಚೆನ್ನೈ ನಲ್ಲಿ ನಡೆದ ನೈಜ ಕಥೆಯೊಂದನ್ನು ಆಧರಿಸಿ ರವಿ ಟೈಗರ್ ಗಲ್ಲಿ ಕಥೆ ಬರೆದಿದ್ದಾರೆ. ಚಿತ್ರದ ನಾಯಕ ಟೈಗರ್ ಗಲ್ಲಿಯಿಂದ ಬಂದವನು, ಸ್ಥಳೀಯ ಸಂಸ್ಕೃತಿ  ಪ್ರತಿಬಿಂಬಿಸುವಂತೆ ಕಥೆ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿನಿಮಾದಲ್ಲಿ ನೀನಾಸಂ ಸತೀಶ್ ಒರಟು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ವಿವಿಧ ಜನರೇಷನ್ ಗಳ ನಡುವೆ ತೇಲುವ ಪಾತ್ರವಾಗಿದೆ, ಈ ಹೈ ವೋಲ್ಟೇಜ್ ಡ್ರಾಮಾದಲ್ಲಿ ಸ್ವಲ್ಪ ಮಟ್ಟಿಗಿನ  ಕಾಮಿಡಿಯಿದೆ ಎಂದು ವಿವರಿಸಿದ್ದಾರೆ.
ಸಾಮಾನ್ಯ ಮನುಷ್ಯನೊಬ್ಬನ ಜೀವನವನ್ನು ತೆರೆಯ ಮೇಲೆ ತರುವ ಪ್ರಯತ್ನ ಇದಾಗಿದೆ, ಪ್ರತಿಯೊಬ್ಬ ಮನುಷ್ಯನಲ್ಲಿ ಭಾವನೆಗಳ ಮಿಶ್ರಣವಿರುತ್ತದೆ. ನಾಯಕನ ಅನುಭವದಿಂದ ವ್ಯವಸ್ಥೆಯ ಬದಲಾವಣೆಗೆ ಯತ್ನಿಸುತ್ತಾನೆ ಎಂದು ತಿಳಿಸಿದ್ದಾರೆ.
ನಟ ಸುದೀಪ್ ಮತ್ತು ದುನಿಯಾ ವಿಜಯ್  ಪ್ರೋತ್ಸಾಹ ರವಿ ಶ್ರೀವತ್ಸ ಅವರ ಆತ್ಮ ವಿಶ್ವಾಸ ಹೆಚ್ಚಿಸಿದೆಯಂತೆ. ಭಾವನಾ ರಾವ್ ಮತ್ತು ರೋಶಿನಿ ಪ್ರಕಾಶ್, ನಾಯಕಿಯರಾಗಿ ನಟಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com