'ಪ್ರತಿ ನಟ ಹೊಸ ಸಿನಿಮಾ ಪ್ರಯತ್ನಿಸಬೇಕು, ರಿಲೀಸ್ ಡೇಟ್ ವರೆಗೂ ನಿದ್ರಿಸಬಾರದು'

ನಿನಾಸಂ ಸತೀಶ್ ಅಭಿನಯದ ಟೈಗರ್ ಗಲ್ಲಿ ಸಿನಿಮಾ ರಿಲೀಸ್ ಗೆ ಸಿದ್ದವಾಗಿದೆ. ಹೀಗಾಗಿ ಸತೀಶ್ ನಿದ್ದೆ ಮಾಡುವ ಸಮಯ ಕಡಿಮೆಯಾಗಿದೆ, ಇದು ಮೊದಲ ..
ಸತೀಶ್ ನೀನಾಸಂ
ಸತೀಶ್ ನೀನಾಸಂ
ಬೆಂಗಳೂರು:ನಿನಾಸಂ ಸತೀಶ್ ಅಭಿನಯದ ಟೈಗರ್ ಗಲ್ಲಿ ಸಿನಿಮಾ ರಿಲೀಸ್ ಗೆ ಸಿದ್ದವಾಗಿದೆ. ಹೀಗಾಗಿ ಸತೀಶ್ ನಿದ್ದೆ ಮಾಡುವ ಸಮಯ ಕಡಿಮೆಯಾಗಿದೆ, ಇದು ಮೊದಲ ಬಾರಿಯಲ್ಲ,ತಮ್ಮ ಮೊದಲ ಸಿನಿಮಾ ಬಿಡುಗಡೆ ದಿನದಿಂದ ಇಂದಿನವರೆಗೂ ಅವರಿಗೆ ಇದೇ ಪರಿಸ್ಥಿತಿ ಎದುರಾಗಿದೆಯಂತೆ. 
ಮೊದಲಿನಿಂದಲೂ ಸತೀಶ್ ನಿದ್ದೆ ಮಾಡುವುದು ಕಡಿಮೆ, ಸಿನಿಮಾ ಹೊರ ಬರುವವರೆಗೂ ನಾನು ಸರಿಯಾಗಿ ನಿದ್ರಿಸುವುದಿಲ್ಲ,ರಿಲೀಸ್ ಡೇಟ್ ಗೂ ಒಂದು ವಾರ ಮೊದಲು ನನಗೆ ನಿದ್ರೆಯೇ ಬರುವುದಿಲ್ಲ, ಪ್ರತಿಯೊಬ್ಬ ಕಲಾವಿದರಿಗೂ ಇದು ಸರ್ವೇ ಸಾಮಾನ್ಯ, ಇದನ್ನು ಸಿನಿಮಾ ಭಾಷೆಯಲ್ಲಿ ಫ್ರೈಡೇ ಟ್ರಾಮಾ ಎನ್ನುತ್ತೇವೆ, ಕೆಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ, ಆದರೆ ಇದಕ್ಕೆ ನನ್ನ ಸಹಮತವಿದೆ ಎಂದು ಹೇಳಿದ್ದಾರೆ.
ಈ ಸಿನಿಮಾದ ವಿಶೇಷ ಅನುಭವ ಹಾಗೂ ಪಾತ್ರ ಹೆಚ್ಚು ಕುತೂಹಲ ಮೂಡಿಸಿದೆ. ಈ ಸಿನಿಮಾ ಸಂಪೂರ್ಣ ಮನರಂಜನೆಯಿಂದ ಕೂಡಿದ್ದು ಪ್ರೇಕ್ಷಕರು ಮೆಚ್ಚಲಿದ್ದಾರೆ. ಇದು ನನ್ನದೊಂದು ಉತ್ತಮ ಚಿಂತನೆಯಾಗಿದೆ, ಈ ಮೊದಲು ಪ್ರೇಕ್ಷಕರು ಸತೀಶ್ ನನ್ನ ಟೈಗರ್ ಗಲ್ಲಿಯಲ್ಲಿರುವಂತೆ ನೋಡಿರುವುದಿಲ್ಲ,
ನೀವು ಒಬ್ಬ ನಟನಾಗಿ ಬೆಳೆಯಬೇಕೆಂದರೇ ನೀವು ವೈವಿಧ್ಯಮಯವಾದದ್ದನ್ನು ಪ್ರಯತ್ನಿಸಬೇಕು, ಇದಕ್ಕೆ ಉತ್ತಮ ಉದಾಹರಣೆ, ಡಾ.ರಾಜ್ ಕುಮಾರ್ ಅವರು ಎವರ್ ಗ್ರೀನ್ ಆಕ್ಟರ್, ಆಮೀರ್ ಖಾನ್ ಕೂಡ ಉತ್ತಮ ನಟ, ರಾಜ್ ಕುಮಾರ್ ಒಂದೇ ರೀತಿಯ ಪಾತ್ರಕ್ಕೆ ಅಂಟಿಕೊಂಡಿರಲಿಲ್ಲ,  ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ್ದಾರೆ, ಅವರೇ ನನಗೆ ಸ್ಪೂರ್ತಿ,  ಒಂದೇ ರೀತಿಯ ಪಾತ್ರಗಳು  ನೋಡುಗರಿಗೆ ಬೇಸರ ತರಿಸುತ್ತವೆ, ಅದನ್ನು ನಾವು ಬದಲಿಸಬೇಕು ಎಂದು ಸತೀಶ್ ಅಭಿಪ್ರಾಯ ಪಟ್ಟಿದ್ದಾರೆ.
ನಾನು ಕೆಟ್ಟದ್ದನ್ನು ಕಲ್ಪಿಸಿಕೊಳ್ಳುತ್ತೇನೆ, ಆದರೆ ಒಳ್ಳೆಯದು ಸಿಕ್ಕಾಗ ಸಂತೋಷ ಪಡುತ್ತೇನೆ, ನಾವು ಪ್ರತಿ ಸಸ್ಸು ಹಾಗೂ ವೈಫಲ್ಯಗಳನ್ನು ಎಣಿಸಿಕೊಳ್ಳುತ್ತಾ ಕೂತರೇ ಒಬ್ಬ ನಟನಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ,  ಹಾಗಂತ ಕೇವಲ ಫಾರ್ಮುಲಾದಿಂದ ಎಲ್ಲಾ ನಡೆಯುತ್ತದೆ ಎಂದು ಅರ್ಥವಲ್ಲ, ನಾನು ಇದಕ್ಕೆ ಯಾವಾಗಲೂ ಅಂಟಿಕೊಂಡಿರುತ್ತೇನೆ, ಹೊಸದನ್ನು ಯಾವಾಗಲೂ ಎದುರು ನೋಡುತ್ತಿರುತ್ತೇನೆ. ಒಂದು ವೇಳೆ ಟೈಗರ್ ಗಲ್ಲಿಯನ್ನು ಪ್ರೇಕ್ಷಕರು ಒಪ್ಪಿಕೊಂಡರೇ ಪ್ರತಿ ವರ್ಷ ಒಂದು ಆಕ್ಷನ್ ಸಿನಿಮಾ ಮಾಡುತ್ತೇನೆ.
ಟೈಗರ್ ಗಲ್ಲಿ ಒಂದು ಏರಿಯಾಗೆ ಸೀಮಿತವಾದದ್ದಲ್ಲ, ಇದು ನಮ್ಮ ರಾಜ್ಯ ಹಾಗೂ ದೇಶದ ಕಥೆ,  ಈ ಚಿತ್ರದ ಕಥೆಯಲ್ಲಿ ಜನರ ಸ್ವಾತಂತ್ರ್ಯ, ಭ್ರಷ್ಟಾಚಾರ ವ್ಯವಸ್ಥೆ, ಬಗ್ಗೆ ರವಿ ಶ್ರೀವತ್ಸ ಉತ್ತಮವಾಗಿ ಚಿತ್ರಿಸಿದ್ದಾರೆ ಎಂದು ಸತೀಶ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com