ಚೆನ್ನೈ: ವಿಜಯ್ ನಟನೆಯ ತಮಿಳು ಸಿನಿಮಾ ಮೆರ್ಸಲ್ ಚಿತ್ರಕ್ಕೆ ನೀಡಲಾದ ಪ್ರಮಾಣ ಪತ್ರವನ್ನು ಹಿಂತೆಗೆದುಕೊಳ್ಳಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇಂದು ವಜಾಗೊಳಿಸಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದ್ದು, ಮೆರ್ಸಲ್ ಒಂದು ಸಿನಿಮಾ ಮಾತ್ರ ಅದು ನಿಜ ಜೀವನವಲ್ಲ ಎಂದು ಹೇಳಿದೆ. ನಿಮಗೆ ಇಷ್ಟವಿಲ್ಲದಿದ್ದರೆ ಸಿನಿಮಾ ನೋಡಬೇಡಿ ಎಂದು ಕೂಡ ನ್ಯಾಯಾಲಯ ಹೇಳಿದೆ.
ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾದ ಮೆರ್ಸಲ್ ಚಿತ್ರದಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು ವಿರೋಧಿಸಿ ಹೇಳಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಕೆಲವರಿಗೆ ಸಿನಿಮಾದಲ್ಲಿನ ಸಂಭಾಷಣೆ ಸರಿಕಾಣಲಿಲ್ಲ. ಈ ಬಿಗ್ ಬಜೆಟ್ ಸಿನಿಮಾದಿಂದ ಜಿಎಸ್ ಟಿ ಬಗ್ಗೆ ಇರುವ ತಪ್ಪು ಮಾಹಿತಿಯನ್ನು ತೆಗೆದುಹಾಕಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಆದರೆ ವಿರೋಧ ಪಕ್ಷದವರು ಮತ್ತು ತಮಿಳು ಸಿನಿಮಾ ಉದ್ಯಮದ ಪ್ರತಿನಿಧಿಗಳು ಸಿನಿಮಾವನ್ನು ಬೆಂಬಲಿಸಿದ್ದಾರೆ.