ಬೀರ್ ಬಲ್ ಕೇಸ್ -1- ಫೈಂಡಿಂಗ್ ವಜ್ರಮುನಿಗೆ ರುಕ್ಷ್ಮಿಣಿ ವಸಂತ್ ನಾಯಕಿ

ನಟ ನಿರ್ದೇಶಕ ಎಂಜಿ ಶ್ರೀನಿವಾಸ್ ಅವರ ಬೀರ್​ಬಲ್-ಟ್ರಯಾಲಜಿಗೆ ಕೊನೆಗೂ ನಾಯಕಿ ಅಂತಿಮವಾಗಿದ್ದಾಳೆ ‘ಫೈಂಡಿಂಗ್ ವಜ್ರಮುನಿ’...
ರುಕ್ಮಿಣಿ ವಂಸತ್,
ರುಕ್ಮಿಣಿ ವಂಸತ್,
Updated on
ಬೆಂಗಳೂರು: ನಟ ನಿರ್ದೇಶಕ ಎಂಜಿ ಶ್ರೀನಿವಾಸ್ ಅವರ ಬೀರ್​ಬಲ್-ಟ್ರಯಾಲಜಿಗೆ ಕೊನೆಗೂ ನಾಯಕಿ ಅಂತಿಮವಾಗಿದ್ದಾಳೆ
‘ಫೈಂಡಿಂಗ್ ವಜ್ರಮುನಿ’ ಎಂದು ಹೊರಟಿರುವ ‘ಬೀರ್​ಬಲ್’ಗೆ ಕೊನೆಗೂ ರುಕ್ಮಿಣಿ ಸಿಕ್ಕಿದ್ದಾಳೆ. ‘ಬೀರ್​ಬಲ್ – ಟ್ರಯಾಲಜಿ ಎಂದು ಇದು ಮೂರು ಸರಣಿಯಲ್ಲಿ ಬರಲಿದ್ದು, ಮೂರು ಪ್ರತ್ಯೇಕ ಸಿನಿಮಾಗಳಾಗಿ ಬರಲಿವೆ.
ಅದರಲ್ಲಿ ಮೊದಲ ಭಾಗ, ಅಂದರೆ ‘ಬೀರ್​ಬಲ್, ಕೇಸ್ 1- ಫೈಂಡಿಂಗ್ ವಜ್ರಮುನಿ’ಗೆ ರುಕ್ಮಿಣಿ ವಸಂತ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. 
ಕರ್ನಲ್ ವಸಂತ್ ಹಾಗೂ ಸುಭಾಷಿಣಿ ವಸಂತ್ ಅವರ ಪುತ್ರಿಯಾಗಿರುವ ರುಕ್ಮಿಣಿ ಈ ಮೂಲಕ ಇದೇ ಮೊದಲಬಾರಿಗೆ ಬೆಳ್ಳಿತೆರೆಯ ಮೇಲೆ ನಾಯಕಿಯಾಗಿ ಕಾಣಿಸಿ ಕೊಳ್ಳಲಿದ್ದಾರೆ. ಮೈಸೂರಿನಲ್ಲಿ ನಡೆದ ಆಡಿಶನ್ ನಲ್ಲಿ ಹೊಸ ಪ್ರತಿಭೆ ಭರತ ನಾಟ್ಯ ಕಲಾವಿದೆಯಾಗಿರುವ ರುಕ್ಷ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ.
‘ಬೀರ್​ಬಲ್, ಕೇಸ್-1 ಫೈಂಡಿಂಗ್ ವಜ್ರಮುನಿ’ ಮೊದಲ ಭಾಗ. ಇದರಲ್ಲಿ ನನ್ನ ಜತೆಗೆ ನಾಯಕಿಯಾಗಿ ರುಕ್ಮಿಣಿ ಲಾಯರ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ’ ಎನ್ನುತ್ತಾರೆ ಶ್ರೀನಿವಾಸ್. 
ಕೇಸ್ 2 ಮತ್ತು ಕೇಸ್ 3 ಅಂದರೆ ಅವ್ರನ್ ಬಿಟ್ ಇವ್ರನ್ ಬಿಟ್ ಅವರ್ ಯಾರು?’ ಹಾಗೂ ‘ತುರೆಮಣೆ’ ಚಿತ್ರಗಳು ಒಂದೊಂದು ವರ್ಷದ ಅಂತರದಲ್ಲಿ ಬಿಡುಗಡೆ ಆಗಲಿವೆ. ಉಳಿದಂತೆ ಸಿನಿಮಾದಲ್ಲಿ ಅಚ್ಯುತ ಕುಮಾರ್, ಸುಜಯ್ ಶಾಸ್ತ್ರಿ ಮತ್ತು ದತ್ತಣ್ಣ ಮುಂತಾದವರು ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com