ನಟನಾಗಿ ನನ್ನ ಸಾಮರ್ಥ್ಯದ ಬಗ್ಗೆ ನನಗೆ ತಿಳಿದಿರಬೇಕು. ನನ್ನನ್ನು ಯಾರೂ ಹೀರೊ ತರ ಪರಿಗಣಿಸುವುದಿಲ್ಲ. ಪಕ್ಕದ ಮನೆಯ ಹುಡುಗನ ತರಹ ನನ್ನನ್ನು ಪರಿಗಣಿಸುತ್ತಾರೆ. ಹೀರೋನಾದವನಿಗೆ ಉತ್ತಮ ಶರೀರ, ಒಂದು ಸೂಕ್ತ ದೈಹಿಕ ಭಾಷೆ ಮತ್ತು ಇಮೇಜ್ ಇರಬೇಕು ಇವೆಲ್ಲ ನನ್ನಲ್ಲಿಲ್ಲ, ಆದರೆ ನನ್ನಲ್ಲಿ ಬೇರೆ ನಟರಲ್ಲಿ ಇಲ್ಲದಂತಹ ಗುಣವನ್ನು ಪ್ಲಸ್ ಆಗಿ ತೆಗೆದುಕೊಳ್ಳುತ್ತೇನೆ. ಜನರು ನನ್ನನ್ನು ಸೋದರನಾಗಿ, ಸ್ನೇಹಿತನಾಗಿ ಮತ್ತು ಮನೆಯ ಮಗನಾಗಿ ಕಾಣುತ್ತಾರೆ ಎನ್ನುತ್ತಾರೆ ವಿಕ್ಕಿ.