"ನಮ್ಮ ಚಿತ್ರದ ಬಗ್ಗೆ ಮೆಚ್ಚುಗೆ ಹಾಗೂ ನಿರಾಕರಣೆಗಳನ್ನು ಮೀರಿದ ಭಾವವೊಂದು ನೋಡುಗರಲ್ಲಿ ಉಂಟಾಗಿರುವುದನ್ನು ನಾವು ಗಮನಿಸಿದ್ದೇವೆ. ಅದರ ಜೊತೆಗೆ ಚಿತ್ರದ ಹಲವಾರು ಸಂಗತಿಗಳ ಬಗ್ಗೆ ಕುತೂಹಲಭರಿತ ಪ್ರಶ್ನೆಗಳೂ ಸಹ ನಮಗೆ ಎದುರಾಗಿವೆ". ಹಾಗಾಗಿ ನಾವು ಯಾಕೆ ಈ ಸಿನಿಮಾದ ಬಗ್ಗೆ ಪುಸ್ತಕವೊಂದನ್ನು ಮಾಡಬಾರದೆಂಬ ಆಲೋಚನೆ ಬಂದಿತ್ತು. ಚಿತ್ರಕ್ಕೆ ಸಂಬಂಧಪಟ್ಟ ಪ್ರತಿಯೊಂದು ಅಂಶಗಳನ್ನು ಪ್ರಸ್ತುತಪಡಿಸಿ, ನೋಡುಗರು ಕೇಳಿದ ಒಂದೊಂದು ಪ್ರಶ್ನೆಗಳಿಗೂ, ಜಿಜ್ಞಾಸೆಗಳಿಗೂ ಕ್ರಮೇಣ ಉತ್ತರಿಸುತ್ತಾ ಈ ಪುಸ್ತಕವನ್ನು ಸಿದ್ಧಪಡಿಸಿದ್ದೇವೆ. ಇದರ ಇನ್ನೊಂದು ಆಯಾಮವೆಂದರೆ, ಓದುಗರಿಗೂ ಕೂಡ ಚಲನಚಿತ್ರ ತಯಾರಿಕೆಯ ಎಲ್ಲ ಸಂಗತಿಗಳ ಬಗ್ಗೆ ಸೂಕ್ಷ್ಮ ಅರಿವನ್ನು ಈ ಪುಸ್ತಕವು ಕೊಡಮಾಡುತ್ತದೆ, ಹಾಗೂ ಚಿತ್ರದ ಸಂಪೂರ್ಣ ಚಿತ್ರಕಥೆಯನ್ನು ಸಹ ಈ ಪುಸ್ತಕವು ಒಳಗೊಂಡಿದ್ದು, ಸಿನಿಮಾಸಕ್ತರಿಗೆ ಖಂಡಿತಾ ಉಪಯೋಗವಾಗಲಿದೆ". ಎಂದು ಚಿತ್ರ ತಂಡ ಹೇಳಿದೆ.