ಮಲೆಯಾಳಂ ಚಿತ್ರೋದ್ಯಮದಲ್ಲಿ ಪುರುಷರ ಪ್ರಾಬಲ್ಯ ಹೆಚ್ಚು: ಭಾವನಾ

ಮಲೆಯಾಳಂ ಚಿತ್ರೋದ್ಯಮದಲ್ಲಿ ಪುರುಷರವೇ ಪ್ರಾಬಲ್ಯವೇ ಹೆಚ್ಚಾಗಿದ್ದು, ನಟರಿಗೆ ನೀಡಿದಷ್ಟು ಪ್ರಾಮುಖ್ಯತೆ ನಟಿಯರಿಗೆ ನೀಡುವುದಿಲ್ಲ....
ಭಾವನಾ
ಭಾವನಾ
ಮಲೆಯಾಳಂ ಚಿತ್ರೋದ್ಯಮದಲ್ಲಿ ಪುರುಷರವೇ ಪ್ರಾಬಲ್ಯವೇ ಹೆಚ್ಚಾಗಿದ್ದು, ನಟರಿಗೆ ನೀಡಿದಷ್ಟು ಪ್ರಾಮುಖ್ಯತೆ ನಟಿಯರಿಗೆ ನೀಡುವುದಿಲ್ಲ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಭಾವನಾ ಮೆನನ್ ಅವರು ಹೇಳಿದ್ದಾರೆ.
ನಿರ್ಮಾಪಕರು ತಮ್ಮ ಚಿತ್ರದ ಸೆಟ್ ಲೈಟ್ ಹಕ್ಕುಗಳನ್ನು ಹೇಗೆ ಮಾರಾಟ ಮಾಡುತ್ತಾರೆ ಎಂಬುದನ್ನು ಪರಿಗಣಿಸಿದರೆ ಮಲೆಯಾಳಂ ಚಿತ್ರೋದ್ಯಮದಲ್ಲಿ ಪುರುಷ ನಟರಿಗೆ ಹೆಚ್ಚು ಪ್ರಾಮುಖ್ಯತೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಮನೋರಮಾ ಆನ್ ಲೈನ್ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಚಿತ್ರೋದ್ಯಮದಲ್ಲಿ ನಟಿಯಾಗಿ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಸಹ ಯಾವುದೇ ಯಶಸ್ಸು ಪ್ರಯೋಜನವಾಗಲಿಲ್ಲ. ನನ್ನ ಚಿತ್ರದ ಯಶಸ್ಸು ಹೆಚ್ಚು ಸಂಭಾವನೆ ತರಲಿಲ್ಲ ಎಂದು ಬಹುಭಾಷಾ ನಟಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮಲೆಯಾಳಂ ಚಿತ್ರೋದ್ಯಮದಲ್ಲಿ ಸೂಪರ್ ಸ್ಟಾರ್ ಗಳ ಮಾರುಕಟ್ಟೆ ನೋಡಿಕೊಂಡು ಚಿತ್ರ ಮಾಡಲಾಗುತ್ತದೆ. ಇಲ್ಲಿ ಪುರುಷ ನಟರ ವಿರುದ್ಧ ಮಹಿಳೆಯರು ಇನ್ನೂ ದ್ವಿತೀಯ ದರ್ಜೆಯಲ್ಲಿ ಅಭಿನಯಿಸಬೇಕಾಗಿದೆ ಎಂದಿದ್ದಾರೆ.
ಮದುವೆಯ ನಂತರವೂ ತಾವು ಚಿತ್ರೋದ್ಯಮದಲ್ಲಿ ಮುಂದುವರೆಯುವುದಾಗಿ ಹೇಳಿದ ನಟಿ ಭವನಾ, ತಮಗೆ ಬೆಂಬಲ ನೀಡುತ್ತಿರುವ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಭಾವನಾ ಅವರು ಕಳೆದ ಮಾರ್ಚ್ ನಲ್ಲಿ ಕನ್ನಡ ಚಿತ್ರ ನಿರ್ಮಾಪಕ ನವೀನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com