ಸಿಬಿಸಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹ್ಲಾನಿ ವಿತರಣೆಯ ಜ್ಯೂಲಿ-2 ಸಿನಿಮಾಗೆ ಎ ಪ್ರಮಾಣ ಪತ್ರ, ಕತ್ತರಿ ಪ್ರಯೋಗ ಇಲ್ಲ!

ಸೆನ್ಸಾರ್ ಮಂಡಳಿಯ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹ್ಲಾನಿ ವಿತರಣೆಯ ಜ್ಯೂಲಿ-2 ಸಿನಿಮಾಗೆ ಯಾವುದೇ ಕತ್ತರಿ ಪ್ರಯೋಗ ಮಾಡದೇ ಸೆನ್ಸಾರ್ ಮಂಡಳಿ ಎ ಪ್ರಮಾಣ ಪತ್ರ ನೀಡಿದೆ.
ಜ್ಯೂಲಿ-2
ಜ್ಯೂಲಿ-2
ಸೆನ್ಸಾರ್ ಮಂಡಳಿಯ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹ್ಲಾನಿ ವಿತರಣೆಯ ಜ್ಯೂಲಿ-2 ಸಿನಿಮಾಗೆ ಯಾವುದೇ ಕತ್ತರಿ ಪ್ರಯೋಗ ಮಾಡದೇ ಸೆನ್ಸಾರ್ ಮಂಡಳಿ ಎ ಪ್ರಮಾಣ ಪತ್ರ ನೀಡಿದೆ. 
ಕ್ವಿಂಟ್ ವರದಿಯ ಪ್ರಕಾರ ಜ್ಯೂಲಿ-2 ಚಿತ್ರ ಹೇಗಿರಬೇಕು ಎಂದುಕೊಂಡಿದ್ದರೋ ಹಾಗೆಯೇ ಇದ್ದು, ಚಿತ್ರಕ್ಕೆ ಯಾವುದೇ ಕತ್ತರಿ ಪ್ರಯೋಗ ಮಾಡಿಲ್ಲ ಎಂದು ತಿಳಿದುಬಂದಿದೆ. ಜ್ಯೂಲಿ-2 ಕಾಮಪ್ರಚೋದಕ ಚಿತ್ರವಾಗಿದ್ದು, ಬಾಲಿವುಡ್ ಗೆ ಹೊಸದಾಗಿ ಬರುವವರನ್ನು ಹಾಗೂ ಶ್ರಮವಹಿಸುವವರನ್ನು ಹೇಗೆ ಶೋಷಣೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಚಿತ್ರ ಮಾಡಲಾಗಿದೆ, ಆದರೆ ಅಶ್ಲೀಲತೆ ಇಲ್ಲ, ದ್ವಂದ್ವಾರ್ಥ ಬರುವ ಡೈಲಾಗ್ ಗಳಿಲ್ಲ ಎಂದು ಪಹ್ಲಾಜ್ ನಿಹ್ಲಾನಿ ಹೇಳಿದ್ದಾರೆ. 
ಸಂಸ್ಕಾರಿ ವ್ಯಕ್ತಿಯಾಗಿರುವ ನೀವು ಇಂತಹ ಸಿನಿಮಾಗಳನ್ನು ಬೆಂಬಲಿಸಬಹುದೇ ಎಂದು ಟ್ರೈಲರ್ ಬಿಡುಗಡೆಗೂ ಮುನ್ನ ಕೇಳಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ನಿಹ್ಲಾನಿ, ಈಗ ನಾನು ಸೆನ್ಸಾರ್ ಮಂಡಳಿಗೆ ಸಂಬಂಧಪಟ್ಟಿಲ್ಲ, ಆದ್ದರಿಂದ ಸೆನ್ಸಾರ್ ಮಂಡಳಿಗೆ ಸಂಬಂಧಿಸಿದ ವಿಷಯಗಳನ್ನು ನನ್ನ ಬಳಿ ಕೇಳಬೇಡಿ ಎಂದಿದ್ದರು. ಅಷ್ಟೇ ಅಲ್ಲದೇ ಅದು ನೈಜ ಘಟನೆಯಾದ್ದರಿಂದ ಓರ್ವ ಸಿನಿಮಾ ರಂಗದವನಾಗಿ ಅದನ್ನು ಬೆಂಬಲಿಸಿದ್ದೆ. ಜ್ಯೂಲಿ-2 ವಯಸ್ಕ ಕುಟುಂಬ ಮನರಂಜನೆಯ ಸಿನಿಮಾ ಆಗಿದ್ದು ಎ ಪ್ರಮಾಣ ಪತ್ರ ನೀಡಿರುವುದಕ್ಕೆ ಸಮಸ್ಯೆ ಇಲ್ಲ ಎಂದು ನಿಹ್ಲಾನಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com