ಗಣೇಶ್ ಮತ್ತು ಯೋಗರಾಜ್ ಭಟ್ ತಂಡ ಅಮೆರಿಕಾಗೆ ತೆರಳಲು ಪ್ಲಾನ್ ಮಾಡುತ್ತಿದೆ, ಈ ಸಂಬಂಧ ನಿರ್ದೇಶಕ ಯೋಗರಾಜ್ ಭಟ್ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ, ಬೆಂಗಳೂರಿನಲ್ಲಿ ಭಾರೀ ಮಳೆಯ ನಡುವೆಯೂ ಮುಗುಳು ನಗೆ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು ಸಂತಸ ತಂದಿದೆ. ಈಗ ಮಳೆ ಕಡಿಮೆಯಾಗಿ ಸೂರ್ಯ ವಾಪಸ್ ಬಂದಿದ್ದಾನೆ, ಮತ್ತಷ್ಟು ಪ್ರೇಕ್ಷಕರು ನಗೆಯೊಂದಿಗೆ ಥಿಯೇಟರ್ ಗಳಿಗೆ ಬರುತ್ತಿದ್ದಾರೆ, ಅವರಿಗೆಲ್ಲಾ ನನ್ನ ಧನ್ಯವಾದ ಎಂದು ಹೇಳಿದ್ದಾರೆ. ಇದರ ಜೊತೆಗೆ ವಿದೇಶದಲ್ಲಿಯೂ ಪ್ರೇಕ್ಷಕರು ಟಿಕೆಟ್ ಬುಕ್ ಮಾಡಿ ಮುಗುಳುನಗೆಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.