ರೋಶಿನಿ ಪ್ರಕಾಶ್
ಸಿನಿಮಾ ಸುದ್ದಿ
ರೋಶಿನಿ ಪ್ರಕಾಶ್ ಮುಗ್ಧತೆ ಕವಲುದಾರಿಯಲ್ಲಿ ಪ್ರಧಾನ ಪಾತ್ರ ಸಿಗಲು ಕಾರಣ
ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ನಲ್ಲಿ ಹೇಮಂತ್ ಎಂ ರಾವ್ ನಿರ್ದೇಶನದ ಕವಲು ದಾರಿ ಸಿನಿಮಾಗೆ ಕಲಾವಿದರ ಆಯ್ಕೆಯಾಗಿದ್ದು, ಪ್ರತಿಭಾನ್ವಿತರಿಗೆ ...
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ನಲ್ಲಿ ಹೇಮಂತ್ ಎಂ ರಾವ್ ನಿರ್ದೇಶನದ ಕವಲು ದಾರಿ ಸಿನಿಮಾಗೆ ಕಲಾವಿದರ ಆಯ್ಕೆಯಾಗಿದ್ದು, ಪ್ರತಿಭಾನ್ವಿತರಿಗೆ ಅವಕಾಶ ನೀಡಲಾಗಿದೆ.
ಹಿರಿಯ ನಟ ಅನಂತ್ ನಾಗ್ ಮತ್ತು ರಿಶಿ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರೋಶಿನಿ ಪ್ರಕಾಶ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ರೋಶಿನಿ ರಿಷಿ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ, ರೋಶಿನಿ ನಿರ್ಮಾಣ ಎಂಜಿನೀಯರ್ ಆಗಿದ್ದು, 2016 ರ ಫೆಮಿನಾ ಮಿಸ್ ಇಂಡಿಯಾ ಫೈನಲ್ ಗೆ ತಲುಪಿದ್ದರು. ಸಪ್ತಗಿರಿ ಎಕ್ಸ್ ಪ್ರೆಸ್, ಅಜರಾಮರ, ಜೈತಯಾತ್ರೆ ಟೈಗರ್ ಗಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಪರಿಚಿತವಿರುವ ಮುಖ ಬೇಡ ಎಂದು ನಿರ್ಧರಿಸಿದ ನಿರ್ದೇಶಕ ಹೇಮಂತ್, ಆಡಿಶನ್ ನಡೆಸಿದ ನಂತರ ಆಕೆಯನ್ನು ಸೆಲೆಕ್ಟ್ ಮಾಡಿದ್ದಾರೆ.
ನಮಗೆ ಸಾಕಷ್ಟು ಅವಕಾಶಗಳಿದ್ದವು, ಆದರೆ ಕಥೆಯ ಪಾತ್ರ ತೀರಾ ಆಸಕ್ತಿದಾಯಕವಾಗಿರುವುದರಿಂದ ಪರಿಚಿತ ಮುಖ ಬೇಡ, ತನ್ನ ಆಡಿಶನ್ ನಲ್ಲ ಆಕೆ ಅದ್ಭುತವಾಗಿ ನಟಿಸಿದಳು, ಆಕೆಯ ಮುಗ್ಧ ಮುಖ ಕವಲು ದಾರಿಯ ಪಾತ್ರಕ್ಕೆ ಫಿಟ್ ಆಗಿದೆ ಎಂದು ನಿರ್ದೆಶಕ ಹೇಮಂತ್ ಅಭಿಪ್ರಾಯ ಪಟ್ಟಿದ್ದಾರೆ.
ಸೆಪ್ಟಂಬರ್ 22 ರಂದು ಸಿನಿಮಾದ ಮೂಹೂರ್ಥವಿದೆ. ಅಚ್ಯುತ ಕುಮಾರ್ ಮತ್ತು ಸಿದ್ದಾರ್ಥ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಕವಲು ದಾರಿ ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ