25 ವರ್ಷಗಳ ನಂತರ ಕಿನರ್ ಸಿನಿಮಾಗಾಗಿ ಒಂದಾದ ಎಸ್ ಪಿಬಿ-ಯೇಸುದಾಸ್

ಸುದೀರ್ಘ 25 ವರ್ಷಗಳ ನಂತರ ಪ್ರಸಿದ್ಧ ಗಾಯಕರಾದ ಎಸ್ ಪಿ ಬಾಲ ಸುಬ್ರಮಣ್ಯಂ ಮತ್ತು ಯೇಸುದಾಸ್ ಕಿನರ್ ಸಿನಿಮಾಗಾಗಿ...
ಯೇಸುದಾಸ್ ಮತ್ತು ಎಸ್ ಪಿಬಿ
ಯೇಸುದಾಸ್ ಮತ್ತು ಎಸ್ ಪಿಬಿ
ತಿರುವನಂತಪುರಂ: ಸುದೀರ್ಘ 25 ವರ್ಷಗಳ ನಂತರ ಪ್ರಸಿದ್ಧ ಗಾಯಕರಾದ ಎಸ್ ಪಿ ಬಾಲ ಸುಬ್ರಮಣ್ಯಂ ಮತ್ತು ಯೇಸುದಾಸ್ ಕಿನರ್ ಸಿನಿಮಾಗಾಗಿ ಜೊತೆಯಾಗಿದ್ದಾರೆ.
ತಮಿಳು ಮತ್ತು ಮಲಯಾಳಂನಲ್ಲಿ  ಎಂ.ಎ ನಿಶದ್ ನಿರ್ದೇಶನದ ಕಿನರ್ ಸಿನಿಮಾಗಾಗಿ ಇಬ್ಬರು ಗಾಯಕರು ಒಂದು ಗೂಡಿದ್ದಾರೆ. 1991 ರಲ್ಲಿ ಮಣಿರತ್ನಂ ನಿರ್ದೇಶನದ ಥಳಪತಿ ಸಿನಿಮಾದ ಕಾಟ್ಟು ಕುಯಿಲು ಮನಸುಕ್ಕುಲ ಹಾಡನ್ನು ಇಬ್ಬರು ಜೊತೆಯಾಗಿ ಹಾಡಿದ್ದರು.
ಇಬ್ಬರು ಗಾಯಕರನ್ನು ನನ್ನ ಸಿನಿಮಾಗಾಗಿ ಒಟ್ಟಿಗೆ ಕರೆ ತರುವುದು ನನ್ನ ಕನಸಾಗಿತ್ತು, ಈ ಬಗ್ಗೆ ಎಸ್ ಪಿಬಿ ಅವರನ್ನು ಕೇಳಿದಾಗ ಅವರು ಒಪ್ಪಿಕೊಂಡರು. ಸಮಾಜಕ್ಕೆ ಚಿತ್ರಕಥೆ ಪ್ರಸ್ತುತವಾಗಿರುವ ಕಾರಣ ಹಾಡಲು ಎಸ್ ಪಿಬಿ ಸಮ್ಮತಿಸಿದರು ಎಂದು ನಿಶದ್ ಹೇಳಿದ್ದಾರೆ.
ಹರಿಣಿ ನಾರಾಯಣ್ ಮತ್ತು ಪಜ್ಹಾನ್ ಭಾರತಿ ಬರೆದಿರುವ ಅಯ್ಯಾ ಸಾಮಿ ಹಾಡಿಗೆ ದನಿ ಗೂಡಿಸಲಿದ್ದಾರೆ.
ಥಶಪತಿ ಸಿನಿಮಾ ಬಿಡುಗಡೆಯಾದಾಗ ನಾನು ಮತ್ತು ಸಂಗೀತ ನಿರ್ದೇಶಕ ಜಯಚಂದ್ರನ್ ಟಿಕೆಎಂ ಎಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದವು. ನನಗೆ ಈಗಲೂ ನೆನಪಿದೆ, ಕಾಟು ಕುಯಲಿ ಹಾಡು ಆರಂಭವಾದಾಗ ಇಡೀ ಥಿಯೇಟರ್ ನಲ್ಲಿದ್ದ ಜನರೆಲ್ಲಾ ಆಕರ್ಷಿತರಾಗಿದ್ದರು ಎಂದು ನಿಶದ್ ಹೇಳಿದ್ದಾರೆ.
ಕಿನರ್ ಗಾಗಿ ಜಯಚಂದ್ರನ್ ಆಯಾ ಸಾಮಿ ಹಾಡು ಸಂಯೋಜಿಸಿದಾಗ ಎಸ್ ಪಿಬಿ ಮತ್ತು ದಾಸೆತ್ತನ್ ಅವರಿಂದ ಹಿನ್ನೆಲೆ ಗಾಯನ ಕೊಡಿಸಲು ಸಲಹೆ ನೀಡಿದೆ. ಈ ಯೋಜನೆಗೆ ಇಬ್ಬರು ಸಂತೋಷಗೊಂಡೆವು.
ಇಷ್ಟು ದೊಡ್ಡ ಗ್ಯಾಪ್ ಏಕೆ ಎಂದು ಪ್ರಶ್ನಿಸಿದಾಗ, ನಮಗೆ ಮತ್ತೆ ಒಟ್ಟಿಗೆ ಹಾಡುವ ಅವಕಾಶ ಒದಗಿ ಬರಲಿಲ್ಲ ಎಂದು ಎಸ್ ಪಿ ಬಿ ಹೇಳಿದ್ದಾಗಿ ನಿರ್ದೇಶಕರು ತಿಳಿಸಿದ್ದಾರೆ. ಸಿನಿಮಾ ನೀರಿನ ಸಮಸ್ಯೆ ಬಗ್ಗೆ ಕಥೆ ಹೊಂದಿದ್ದು ಜಯಪ್ರದಾ, ರೇವತಿ ಮತ್ತು ಅರ್ಚನಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com