ಮೂರು ಭಾಷೆಗಳಲ್ಲಿ ತಮಿಳಿನ ವಿಕ್ರಂ ವೇದಾ; ಸಿಆರ್ ಮನೋಹರ್‌ಗೆ ರಿಮೇಕ್ ಹಕ್ಕು?

ಮಾಧವನ್ ಮತ್ತು ವಿಜಯ್ ಸೇತುಪತಿ ನಟನೆಯ ತಮಿಳಿನ ಬ್ಲಾಕ್ ಬಸ್ಟರ್ ಚಿತ್ರ ವಿಕ್ರಂ ವೇದಾ ಚಿತ್ರವನ್ನು ರಿಮೇಕ್ ಮಾಡಲು ಸಿಆರ್ ಮನೋಹರ್ ಮುಂದಾಗಿದ್ದಾರೆ...
ಮಾಧವನ್, ವಿಜಯ್ ಸೇತುಪತಿ, ಸಿಆರ್ ಮನೋಹರ್
ಮಾಧವನ್, ವಿಜಯ್ ಸೇತುಪತಿ, ಸಿಆರ್ ಮನೋಹರ್
Updated on
ಮಾಧವನ್ ಮತ್ತು ವಿಜಯ್ ಸೇತುಪತಿ ನಟನೆಯ ತಮಿಳಿನ ಬ್ಲಾಕ್ ಬಸ್ಟರ್ ಚಿತ್ರ ವಿಕ್ರಂ ವೇದಾ ಚಿತ್ರವನ್ನು ರಿಮೇಕ್ ಮಾಡಲು ಸಿಆರ್ ಮನೋಹರ್ ಮುಂದಾಗಿದ್ದಾರೆ. 
ಮಾಧವನ್ ಮತ್ತು ವಿಜಯ್ ಸೇತುಪತಿಯ ನಡುವಿನ ಹೋರಾಟ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದರಿಂದಾಗಿಯೇ ಚಿತ್ರ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಈ ಚಿತ್ರವನ್ನು ಕನ್ನಡ, ಹಿಂದಿ, ತೆಲುಗಿನಲ್ಲಿ ರಿಮೇಕ್ ಮಾಡಲು ಸಿಆರ್ ಮನೋಹರ್ ಮುಂದಾಗಿದ್ದು ಚಿತ್ರದ ರಿಮೇಕ್ ಹಕ್ಕು ಪಡೆಯುವ ಕುರಿತು ಮೂಲ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ್ದಾರೆ. 
ನಿರ್ಮಾಪಕರ ನಡುವಿನ ಮಾತುಕತೆ ಸಫಲವಾದರೇ ಇದೇ ವಾರದಲ್ಲಿ ಚಿತ್ರದ ರಿಮೇಕ್ ಹಕ್ಕು ಸಿಆರ್ ಮನೋಹರ್ ಅವರಿಗೆ ಸಿಗಲಿದೆ. ಇನ್ನು ಸುದೀಪ್ ಅವರೊಂದಿಗೆ ಈ ಚಿತ್ರವನ್ನು ಮಾಡಲು ಮನೋಹರ್ ಮುಂದಾಗಿದ್ದಾರೆ. ಸುದೀಪ್ ಪರಭಾಷೆಯಲ್ಲೂ ನಟಿಸಿ ಉತ್ತಮ ಬೇಡಿಕೆ ಹೊಂದಿರುವ ಕಾರಣ ಈ ಚಿತ್ರಕ್ಕೆ ಮನೋಹರ್ ಸುದೀಪ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 
ಇನ್ನು ಸಿಆರ್ ಮನೋಹರ್ ನಿರ್ಮಾಣದ ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ವಿಕ್ರಂ ವೇದಾ ಚಿತ್ರದ ನಿರ್ಮಾಪಕರು ರಿಮೇಕ್ ಹಕ್ಕು ನೀಡಿದರೆ ಆ ನಂತರ ಸುದೀಪ್ ರೊಂದಿಗೆ ಚರ್ಚಿಸುವುದಾಗಿ ಮನೋಹರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com