ನಾನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಜೊತೆ ಮೊನಾಲಿಸಾ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಆ ವೇಳೆ ನಾನು ಪ್ರತಿದಿನ ಗೌರಿ ಅವರನ್ನು ಭೇಟಿ ಮಾಡುತ್ತಿದ್ದೆ, ಇಂದ್ರಜಿತ್ ಅವರ ಕಚೇರಿ ಪಕ್ಕದಲ್ಲೇ ಗೌರಿ ಅವರ ಕಚೇರಿಯೂ ಇತ್ತು, ನನ್ನ ಕೆಲಸದ ಬಗ್ಗೆ ಆಕೆ ಯಾವಾಗಲೂ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದರು, ಆದರೆ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದು ನನಗೆ ಆಘಾತ ತಂದಿದೆ. ಆಕೆ ಕೊಲೆಯಾಗಿದ್ದಾರೆ ಎಂಬುದನ್ನು ನನ್ನಿಂದ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರಮೇಶ್ ಪ್ರತಿಕ್ರಿಯಿಸಿದ್ದಾರೆ.