ಪ್ರಯೋಗಾತ್ಮಕ ಕಥೆ ಹಾಗೂ ಒಳ್ಳೆಯ ನಿರ್ದೇಶಕರೊಂದಿಗೆ ಕೆಲಸ ಮಾಡುವ ಬಯಕೆ: ಪುನೀತ್

ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಕವಲು ದಾರಿ ಸಿನಿಮಾಗೆ ಸೆಪ್ಟಂಬರ್ 22 ರಂದು ಮುಹೂರ್ಥ ನಡೆಯಲಿದ್ದು ಪಿಆರ್ ಕೆ...
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
ಬೆಂಗಳೂರು: ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಕವಲು ದಾರಿ ಸಿನಿಮಾಗೆ ಸೆಪ್ಟಂಬರ್ 22 ರಂದು  ಮುಹೂರ್ಥ ನಡೆಯಲಿದ್ದು ಪಿಆರ್ ಕೆ ಪ್ರೊಡಕ್ಷನ್ ನ ಮುಂದಿನ ಸಿನಿಮಾ ಯೋಜನೆಗಳ ಬಗ್ಗೆ ನಟ ಪುನೀತ್ ರಾಜ್ ಕುಮಾರ್ ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ನಾನು ಎಲ್ಲಿದ್ದೀನಿ, ನನ್ನ ಮುಂದಿನ ದಾರಿ ಹಾಗೂ ಗುರಿ ಏನು ಎಂಬುದು ಸ್ಪಷ್ಟವಾಗಿದೆ, ಕಲಾವಿದರ ಕುಟುಂಬದಲ್ಲಿ ಜನಿಸಿ ಕಳೆದ 40 ವರ್ಷಗಳಿಂದ ಸಿನಿಮಾರಂಗದಲ್ಲಿಯೇ ಕಳೆದಿರುವ ಪುನೀತ್, ಈಗ ನಿರ್ಮಾಣದ ಹೊಣೆಗಾರಿಕೆ ತೆಗೆದುಕೊಂಡಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಅವರ ಫಿಮ್ಸ್, ಪಿಆರ್ ಕೆ ಫಿಲ್ಮ್ಸ್ ಬ್ಯಾನರ್ ಅಡಿ ಕವಲು ದಾರಿ ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನಿರ್ದೇಶಕ ಹೇಮಂತ್ ಎಂ ರಾವ್ ಅವರು ಕವಲು ದಾರಿ ನಿರ್ದೇಶಿಸುತ್ತಿದ್ದಾರೆ.
ಸದ್ಯ ಅಂಜನೀಪುತ್ರ ಶೂಟಿಂಗ್ ನಲ್ಲಿ ಪುನೀತ್ ಬ್ಯುಸಿಯಾಗಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಅಶ್ವಿನಿ ಪುನೀತ್ ನಿರ್ಮಾಣ ಮಾಡಲಿದ್ದಾರೆ, ನಾನು ಯಾವಾಗಲೂ ಅಪ್ರತಿಮ ನಿರ್ದೇಶಕರು ಹಾಗೂ ಅನುಪಮ ಹಾಗೂ ಪ್ರಯೋಗಾತ್ಮಕ ಕಥೆಗಳಲ್ಲಿ ಕೆಲಸ ಮಾಡುವುದು ನನ್ನ ಕನಸಾಗಿದೆ, ಕವಲು ದಾರಿಯಲ್ಲಿ ಹೇಮಂತ್ ಜೊತೆ ಕೆಲಸ ಮಾಡುವುದು ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ. 
ಹೇಮಂತ್ ನಿರ್ದೇಶನದ ಈ ಸಿನಿಮಾದಲ್ಲಿ ರಿಶಿ, ರೋಶಿನಿ ಪ್ರಕಾಶ್, ಅಚ್ಯುತ ಕುಮಾರ್, ಸುಮನ್ ರಂಗನಾಥ್ ಮತ್ತು ಅನಂತ್ ಕುಮಾರ್ ನಟಿಸುತ್ತಿದ್ದಾರೆ, ಅನಂತ್ ನಾಗ್ ನನ್ನ ನೆಚ್ಚಿನ ನಟ, ಅವರು ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ರೋಮಾಂಚನಗೊಂಡಿದ್ದೇನೆ ಎಂದು ಪುನೀತ್ ಹೇಳಿದ್ದಾರೆ.
ಸಿನಿಮಾಗೆ ಯಾವುದೆಲ್ಲಾ ಅವಶ್ಯಕತೆಯಿದೇಯೋ ಅದನ್ನು ಒದಗಿಸುತ್ತೇವೆ. ನಮ್ಮ ಕೆಲಸವನ್ನು ಪ್ರೇಕ್ಷಕರು ಮೆಚ್ಚುತ್ತಾರೆ, ಹೇಮಂತ್ ಒಬ್ಬ ಉತ್ತಮ ಕ್ಯಾಪ್ಟನ್ ಅವರನ್ನು ನಾನು ಬಹಳ ದೀರ್ಘಸಮಯದಿಂದ ಹತ್ತಿರದಿಂದ ನೋಡಿದ್ದೇನೆ ಎಂದು ತಿಳಿಸಿದ್ದಾರೆ. 
ಉತ್ತಮ ಕಥೆ ಹಾಗೂ ಸೃಜನಾತ್ಮಕ ನಿರ್ದೇಶಕರುಗಳಿಗೆ ಪ್ರೊಡಕ್ಷನ್ ಹೌಸ್ ಉತ್ತಮ ವೇದಿಕೆಯಾಗಲಿದೆ, ಒಂದು ವೇಳೆ ನಿರ್ದೇಶಕರು ಹೊಸಬರಾಗಿದ್ದಾರೆ, ಅವರಿಗೆ ಶಾರ್ಟ್ ಫಿಲಂ ಮಾಡಲು ನೀಡುತ್ತೇವೆ. ಇಲ್ಲಿ ಯಾವುದೇ ಔಪಚಾರಿಕತೆಯಿಲ್ಲ, ಆದರೆ ಎಲ್ಲವು ಆದರದ್ದೇ ಸ್ಥಾನದಲ್ಲಿರಬೇಕು ಎಂದು ಪುನೀತ್ ಅಭಿಪ್ರಾಯ ಪಟ್ಟಿದ್ದಾರೆ.
ನಾನು ವಜ್ರೇಶ್ವರಿ, ಪಿಆರ್ ಕೆ  ಸೇರಿದಂತೆ ಹಲವು ನಿರ್ಮಾಣ ಸಂಸ್ಥೆಗಳಡಿಯಲ್ಲಿ ಕೆಲಸ ಮಾಡುತ್ತೇನೆ,.ತಮ್ಮ ಪೋಷಕರಿಂದ ವಜ್ರೇಶ್ವರಿ ಪ್ರೊಡಕ್ಷನ್ ಸ್ಥಾಪಿತಗೊಂಡಿದ್ದು, ಹಲವು ಪ್ರಮುಖ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಮುಂದಿನ ವರ್ಷದಿಂದ ವಜ್ರೇಶ್ವರಿ ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಮಾಡಲು ಆರಂಭಿಸುತ್ತೇನೆ ಎಂದು ಹೇಳಿದ್ದಾರೆ,. ಬೇರೆ ಬ್ಯಾನರ್ ಅಡಿಯಲ್ಲಿ ಇನ್ನು ಮುಂದೆ ಸಿನಿಮಾದಲ್ಲಿ ನಟಿಸುವುದಿಲ್ಲ ಎಂಬ ವರದಿಗೆ ಪ್ರತಿಕ್ರಿಯಿಸಿದ ಅವರು ನಟನೆ ಎಂಬುದು ನನ್ನ ರಕ್ತದಲ್ಲಿ ಬಂದಿದೆ, ಅದೆಲ್ಲಾ ಸುಳ್ಳು ಸುದ್ದಿ, ಯಾವುದೇ ಪ್ರೊಡಕ್ಷನ್ ಹೌಸ್ ಅಥವಾ ನಿರ್ದೇಶಕ ಜೊತೆ ನಾನು ಕೆಲಸ ಮಾಡಲು ಸಿದ್ದ ಎಂದು ಸ್ಪಷ್ಟನೆ ನೀಡಿದರು. 
ಕನ್ನಡ ಸಿನಿಮಾಗಳು ದೇಶಾದ್ಯಂತ ಉತ್ತಮ ಹೆಸರು ಪಡೆದು ಪ್ರಸಿದ್ಧಿಯಾಗಬೇಕೆಂಬುದಷ್ಟೆ ಮುಖ್ಯ ಎಂದು ಹೇಳಿದ ಅವರು, ಪಿಆರ್ ಕೆ ಬ್ಯಾನರ್ 2 ನೇ ಸಿನಿಮಾಕೂಡ ಶೀಘ್ರದಲ್ಲೇ ಸೆಟ್ಟೇರಲಿದೆ. ದೊಡ್ಮನೆ ಹುಡ್ಗ ನಿರ್ಮಾಪಕ ಎಂ ಗೋವಿಂದ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com