ದರ್ಶನ್ ಉತ್ತಮ ನಟ ಮಾತ್ರವಲ್ಲ, ಅದ್ಭುತ ನಿರ್ದೇಶಕ ಕೂಡ: ಮಿಲನ ಪ್ರಕಾಶ್

ನಿರ್ದೇಶಕನ ಮೇಲೆ ಸೆಟ್ ನಲ್ಲಿರುವ ಪ್ರತಿಯೊಬ್ಬನ ಕಣ್ಣಿರುತ್ತದೆ, ನಿಮ್ಮ ಆತ್ಮ ವಿಶ್ವಾಸವನ್ನು ಇತರರು ಹಂಚಿಕೊಳ್ಳುತ್ತಾರೆ, ಒಂದು ನಿಮಿಷದಲ್ಲಿ ನೀವು ಬಲಹೀನ...
ದರ್ಶನ್ ಮತ್ತು ನಿರ್ದೇಶಕ ಪ್ರಕಾಶ್
ದರ್ಶನ್ ಮತ್ತು ನಿರ್ದೇಶಕ ಪ್ರಕಾಶ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ, ದರ್ಶನ್ ಗೆ ನಾಯಕಿಯರಾಗಿ, ಶಾನ್ವಿ ಶ್ರೀವಾತ್ಸವ ಮತ್ತು ಶೃತಿ ಹರಿಹರನ್ ನಟಿಸಿದ್ದಾರೆ. ಮಿಲನ ಪ್ರಕಾಶ್ ನಿರ್ದೇಶನದ ಈ ಸಿನಿಮಾ ಒಂದು ಕೌಟುಂಬಿಕ ಮನರಂಜನಾ ಚಿತ್ರ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಕುಟುಂಬಸ್ಥರೆಲ್ಲಾ ಒಟ್ಟಾಗಿ ಕುಳಿತು ನೋಡುವಂತ ಸಿನಿಮಾ ಮಾಡುವುದು ನನ್ನ ಉದ್ದೇಶ, ಕೇವಲ 2 ಟಿಕೆಟ್ ಮಾರುವುದು ನನ್ನ ಗುರಿಯಲ್ಲ, 10 ಟಿಕೆಟ್ ಮಾರಾಟವಾಗಬೇಕೆಂಬುದು ನನ್ನ ಬಯಕೆ, ಇಡಿ ಕುಟುಂಬವನ್ನು ಸಿನಿಮಾ ಥಿಯೇಟರ್ ಗೆ ಕರೆತರುವುದು ನನ್ನ ಟಾರ್ಗೆಟ್ ಎಂದು ನಿರ್ದೇಶಕ ಪ್ರಕಾಶ್ ತಿಳಿಸಿದ್ದಾರೆ.
ತಾರಕ್ ಸಿನಿಮಾದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ವಿಷಯವಿದೆ ಎಂದು ಹೇಳಿರುವ ಅವರು ಸಿನಿಮಾ ಕಥೆಯ ಬಗ್ಗೆ ಚೂರು ಗುಟ್ಟು ಬಿಟ್ಟುಕೊಟ್ಟಿಲ್ಲ, ಸದಾ ಗುಂಪಿನಿಂದ ದೂರ ಉಳಿಯುವ ಪ್ರಕಾಶ್ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇರುತ್ತಾರೆ, ಇದು ತಮ್ಮ ತಂದೆಯಿಂದ ಬಂದ ಬಳುವಳಿ ಎಂದು ಪ್ರಕಾಶ್ ಹೇಳುತ್ತಾರೆ.
ತನ್ನ ತಂದೆ ಒಬ್ಬ ನಿರ್ಮಾಪಕ,  ಹೀಗಿದ್ದರೂ ನಮಗೆ ಸಿನಿಮಾ ಜಗತ್ತಿನ ಜೊತೆ ಹೆಚ್ಚಿನ ಸಂಪರ್ಕವಿರಲಿಲ್ಲ, ನಾವು ಚಿಕ್ಕವರಿದ್ದಾಗ, ಅನಂತ್ ನಾಗ್ , ಶಂಕರ್ ನಾಗ್ ಹಾಗೂ ದರ್ಶನ್ ತಂದೆ ತೂಗುದೀಪ್ ಶ್ರೀನಿವಾಸ್ ನಮ್ಮ ಮನೆಗೆ ಬರುತ್ತಿದ್ದರು.  ನಮ್ಮ ತಂದೆಯದ್ದು ತೀರಾ ಖಾಸಗಿ ವ್ಯಕ್ತಿತ್ವ, ನಾನು ಕೂಡ ಅದನ್ನೇ ಅನುಸರಿಸುತ್ತಿದ್ದೇನೆ, ಕೆಲಸಕ್ಕೆ ಅಗತ್ಯವಿರದಿದ್ದರೇ ನಾನು ಎಲ್ಲಾ ಪ್ರಚಾರಗಳಿಂದ ದೂರ ಉಳಿಯುತ್ತೇನೆ ಎಂದು ಹೇಳಿದ್ದಾರೆ.
ತಾರಕ್ ನಲ್ಲಿ ದರ್ಶನ್ ರಂತ ಸ್ಟಾರ್ ನಟರ ಜೊತೆ ಕೆಲಸ ಮಾಡುವುದು  ನಿರ್ದೇಶಕನಿಗೆ ಬಹಳ ಸುಲಭದ ಕೆಲಸವಲ್ಲ, ಕಥೆ ಮತ್ತು ನಾಯಕನ ಅಭಿನಯ ಮಾತ್ರ ಸಿನಿಮಾ ಯಶಸ್ಸಿಗೆ ಕಾರಣವಾಗುತ್ತದೆ. ತಾರಕ್ ಗೆ ದರ್ಶನ್ ಅವಶ್ಯಕತೆಯಿತ್ತು, ಹೀಗಾಗಿ ನಾನು ಅವರನ್ನು ಚೇಸ್ ಮಾಡಿದೆ.ದೊಡ್ಡ ನಟರುಗಳ ಜೊತೆ ಕೆಲಸ ಮಾಡುವಾಗ ಅನುಕೂಲ ಮತ್ತು ಅನಾನುಕೂಲಗಳಿರುತ್ತವೆ. ಸ್ಟಾರ್ ನಟರು ಮತ್ತು ಹೊಸಬರ ಜೊತೆ ಕೆಲಸ ಮಾಡುವಾಗ ನಾನು ಆ ರೀತಿಯ ಯಾವುದೇ ಸಮಸ್ಯೆ ಎದುರಿಸಿರಲಿಲ್ಲ, ನನಗೆ ಏನು ಬೇಕೋ ಅದನ್ನು ಈ ಎರಡು ರೀತಿಯ ನಟರು ನೀಡಿದ್ದಾರೆ ಎಂದು ವಿವರಿಸಿದ್ದಾರೆ.
ತಾರಕ್ ಸಿನಿಮಾಗೆ ಪ್ರಕಾಶ್ ಪತ್ನಿ ಥಶ್ವಿನಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ, ಸಾಮಾನ್ಯವಾಗಿ ಮನೆಯಲ್ಲಿ ಸಿನಿಮಾ ಕೆಲಸದ ಬಗ್ಗೆ ಚರ್ಚಿಸುವುದಿಲ್ಲ,  ಆದರೆ ತಾರಕ್ ನಲ್ಲಿ ನಾನು ಬ್ಯುಸಿಯಾಗಿದ್ದಾಗ, ನಾಯಕ ಮತ್ತು ನಾಯಕಿಯರ ವಸ್ತ್ರ ವಿನ್ಯಾಸದ ಬಗ್ಗೆ ಗಮನ ಹರಿಸಲು ಸಾಧ್ಯವಾಗಲಿಲ್ಲ, ಹೀಗಾಗಿ  ನನ್ನ ಪತ್ನಿ ಮತ್ತು ಆಕೆಯ ಸ್ನೇಹಿತೆ ಪ್ರತೀಕ್ಷಾ ಹೆಗಡೆ ತಾರಕ್ ಸಿನಿಮಾಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ಸೆಟ್ ನಲ್ಲಿ ನಿರ್ದೇಶಕ ಮತ್ತು ಕಲಾವಿದರ ನಡುವಿನ ಸಮೀಕರಣ ಏನು ಎಂಬು ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್, ನಟ ಅನಂತ್ ನಾಗ್ ಅವರು ನೀಡಿದ ಸಲಹೆ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. ನನ್ನ ಮೊದಲ ಸಿನಿಮಾ ಖುಷಿ,  ಅದರ ಎರಡನೇ ದಿನದ ಶೂಟಿಂಗ್ ವೇಳೆ ನಾನುಭಯಗೊಂಡಿದ್ದೆ, ಅದನ್ನು ನೋಡಿದ ಅವರು ನನಗೆ ಕೆಲ ಮಾತುಗಳನ್ನು ಹೇಳಿದರು, 
ನಿರ್ದೇಶಕನ ಮೇಲೆ ಸೆಟ್ ನಲ್ಲಿರುವ ಪ್ರತಿಯೊಬ್ಬನ ಕಣ್ಣಿರುತ್ತದೆ, ನಿಮ್ಮ ಆತ್ಮ ವಿಶ್ವಾಸವನ್ನು ಇತರರು ಹಂಚಿಕೊಳ್ಳುತ್ತಾರೆ, ಒಂದು ನಿಮಿಷದಲ್ಲಿ ನೀವು ಬಲಹೀನ ಎಂದು ತಿಳಿದರೇ, ನಾವು ಕೂಡ ನಿಮ್ಮ ನಡೆಯನ್ನೇ ಅನುಸರಿಸುತ್ತೇವೆ, ಇದನ್ನು ನಾನು ಇಂದಿಗೂ ಫಾಲೋ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ. 
ತಾರಕ್ ಸಿನಿಮಾ ಉತ್ತಮ ಕೌಟುಂಬಿಕ ಮನರಂಜನಾತ್ಮಕ ಸಿನಿಮಾವಾಗಿದೆ.ಈ ಸಿನಿಮಾದಲ್ಲಿ ಸಾಮಾಜಿಕ ಸಂದೇಶವಿದೆ, ಕಥೆಗಯಲ್ಲಿ ಇಬ್ಬರು ನಾಯಕಿಯರಿದ್ದಾರೆ,  ಇಬ್ಬರದ್ದು ಆಸಕ್ತಿದಾಯಕ ಪಾತ್ರವಾಗಿದೆ ಎಂದು ಹೇಳಿದ್ದಾರೆ. ದರ್ಶನ್ ಒಬ್ಬ ಅದ್ಭುತ ನಟ ಮತ್ತು ನಿರ್ದೇಶಕ ಎಂಬುದು ಯಾರೋಬ್ಬರಿಗೂ ತಿಳಿದಿಲ್ಲ, ದಿನದ 24 ಗಂಟೆಯೂ ಕೆಲಸ ಮಾಡುತ್ತಾರೆ. ಶೃತಿ ಪ್ರತಿಭಾನ್ವಿತ ನಟಿ, ಶಾನ್ವಿ ಸೈಲೆಂಟ್ ಕಿಲ್ಲರ್, ದೇವರಾಜ್ ಕೂಡ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಸಿನಿಮಾವನ್ನು ತಮ್ಮ ಸಹೋದರ ದುಶ್ಯಂತ್  ನಿರ್ಮಿಸಿದ್ದಾರೆ. ಮಿಲನ ನಂತರ ನಾವು ಈ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ, ನಮ್ಮ ತಂದೆ ಇಡೀ ಸಿನಿಮಾವನ್ನು 26 ಲಕ್ಷದಲ್ಲಿ ಮುಗಿಸಿದ್ದರು, ಆದರೆ ಇಂದು ನಮ್ಮ ದಿನದ ವೆಚ್ಚವೇ ಲಕ್ಷ ಮೀರುತ್ತದೆ. ಅಂದಿಗೂ ಮತ್ತು ಇಂದಿಗೂ ಸಿನಿಮಾ ನಿರ್ಮಾಣದಲ್ಲಿ ಪ್ರತಿಯೊಂದು ಬದಲಾಗಿದೆ, ಆದರೆ ಸಿನಿಮಾ ನಿರ್ಮಿಸುವಾಗ ಹಣದ ವಿಚಾರದಲ್ಲಿ ಕಾಂಪ್ರಮೈಸ್ ಆಗಲು ಸಾಧ್ಯವಿಲ್ಲ, ಸಿನಿಮಾ, ಸಿನಿಮಾ ಮಾತ್ರ, ಅದು ಬಿಡುಗಡೆಯಾದ ಮೇಲೆ ಅದು ಸಣ್ಣದೋ ಅಥವಾ ದೊಡ್ಡದೋ ಎಂಬುದನ್ನು ಜನ ನಿರ್ಧರಿಸುತ್ತಾರೆ ಎಂದು ನನ್ನ ತಂದೆ ಹೇಳುತ್ತಿದ್ದರು ಎಂದು ಪ್ರಕಾಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com