ರಾಕುಲ್ ಚಿತ್ರರಂಗಕ್ಕೆ ಬಂದದ್ದು ಪಾಕೆಟ್ ಮನಿಗಾಗಿ!

ದಕ್ಷಿಣ ಭಾರತದ ಚಿತ್ರಗಳಲ್ಲಿ, ವಿಶೇಷವಾಗಿ ಟಾಲಿವುಡ್ ನಲ್ಲಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ರಾಕುಲ್ ಪ್ರೀತ್ ಸಿಂಗ.....
ರಾಕುಲ್ ಪ್ರೀತ್ ಸಿಂಗ್
ರಾಕುಲ್ ಪ್ರೀತ್ ಸಿಂಗ್
ಬೆಂಗಳೂರು: ದಕ್ಷಿಣ ಭಾರತದ ಚಿತ್ರಗಳಲ್ಲಿ, ವಿಶೇಷವಾಗಿ ಟಾಲಿವುಡ್ ನಲ್ಲಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ರಾಕುಲ್ ಪ್ರೀತ್ ಸಿಂಗ್, ಪಾಕೆಟ್ ಮನಿ ಆಸೆಯಿಂದ  ಸ್ಯಾಂದಲ್ ವುಡ್ ನಲ್ಲಿ ತಮ್ಮ ಚಿತ್ರ ಜೀವನವನ್ನು ಪ್ರಾರಂಭಿಸಿದ್ದರು. 
"ಕನ್ನಡ ಚಿತ್ರದಿಂದ ನಾನು ನನ್ನ ವೃತ್ತಿ ಬದುಕನ್ನು ಪ್ರಾರಂಭ ಮಾಡೆದೆ ಎನ್ನುವುದನ್ನು ನಾನು ಮರೆಯಲಾರೆ" ಎಂದಿರುವ ರಾಕುಲ್ ಜಗ್ಗೇಶ್ ಪುತ್ರ ಗುರೂರಾಜ್ ನಟಿಸಿದ್ದ 'ಗಿಲ್ಲಿ' ಮೂಲಕ ಬೆಳ್ಳಿತೆರೆಗೆ ಬಂದಿದ್ದರು
ತನ್ನ ಹೊಸ ಚಲನಚಿತ್ರ 'ಸ್ಪೈಡರ್' ನ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದ ರಾಕುಲ್ ತಮ್ಮ ಮೊದಲ ಚಿತ್ರದ ನೆನಪನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. "ಗಿಲ್ಲಿ ನನ್ನ ಮೊದಲ ಸಿನಿಮಾ, ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ, ಮಾದಲಿಂಗ್ ಕ್ಷೇತ್ರದಲ್ಲಿದ್ದ ಸಮಯ ನನಗೆ ಈ ಚಿತ್ರದಲ್ಲಿ ನಟನೆಗೆ ಆಫರ್ ಬಂದಿತ್ತು"
"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ದಕ್ಷಿಣ ಭಾರತದ ಚಿತ್ರೋದ್ಯಮದ ಬಗ್ಗೆ, ಅದರ ಜನಪ್ರಿಯತೆಯ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ತೆಲುಗು ಭಾಷೆಯ ಹಿಟ್ ಚಿತ್ರ , 7ಜಿ ರೈನ್ ಬೌ ಕಾಲೋನಿ ಅನ್ನು ಕನ್ನಡದಲ್ಲಿ ರೀಮೇಕ್ ಮಾಡುತ್ತಿದ್ದೇವೆ ಎಂದು ನಿರ್ಮಾಪಕರು ನನಗೆ ತಿಳಿಸಿದ್ದರು. ನನಗೆ ಇದರಿಂದ ಪಾಕೆಟ್ ಮನಿ ಸಿಗುತ್ತದೆಂದು ಸಂತಸವಾಗಿತ್ತು" ರಾಕುಲ್ ಹೇಳಿದರು.
"ಅವರು ನನ್ನ ತಂದೆಯ ಮನವೊಲಿಸಲು ನಿರ್ಧರಿಸಿಇದರು.ನಾನು ಲಕ್ಷಗಟ್ಟಲೆ ಗಳಿಸುವ ಆಸೆಯಿಂದ ಪ್ರಾಜಕ್ಟ್ ಗೆ ಸಹಿ ಹಾಕಿದ್ದೆ. ನಂತರ ನನಗೆ ಸಿಕ್ಕಿದ್ದು 2,000 ಪಾಕೆಟ್ ಮನಿ! ನಾನು ಈ ಚಿತ್ರದಲ್ಲಿ ನಟಿಸಿ ಒಂದು ಕಾರ್ ತೆಗೆದುಕೊಳ್ಳಬಹುದು, ಅದನ್ನು ನನ್ನ ಸ್ನೇಹಿತೆಯರಿಗೆಲ್ಲಾ ತೋಸಿಅಬೇಕೆಂದು ನನ್ನ ಇರಾದೆ ಆಗಿತ್ತು"
ಹೀಗೆ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದ ರಾಕುಲ್ , ಚಿತ್ರೀಕರಣದ ಸಮಯದಲ್ಲಿ ನಟನೆಯನ್ನು ಪ್ರೀತಿಸುತ್ತಾರೆ.  "ಇದು ನನ್ನ ಜಗತ್ತು ಮತ್ತು ನಾನುಇಲ್ಲಿನವಳೇ ಎನ್ನುವುದು ನನಗೆ ತಿಳಿದಿದೆ" ಎಂದು ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com