ಪ್ರಕಾಶ್ ಜಯರಾಂ ತಾರಕ್ ಸಿನಿಮಾದ ರಿಯಲ್ ಹೀರೋ: ದರ್ಶನ್

ತಾರಕ್ ಸಿನಿಮಾ ಮೂಲಕ ತಮ್ಮ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಡಿಯಾಗಿದ್ದಾರೆ. ತಾರಕ್ ಸಿನಿಮಾ ನಾಳೆ ರಾಜ್ಯಾದ್ಯಂತ ...
ದರ್ಶನ್
ದರ್ಶನ್
ಬೆಂಗಳೂರು: ತಾರಕ್ ಸಿನಿಮಾ ಮೂಲಕ ತಮ್ಮ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಡಿಯಾಗಿದ್ದಾರೆ. ತಾರಕ್ ಸಿನಿಮಾ ನಾಳೆ ರಾಜ್ಯಾದ್ಯಂತ ಸುಮಾರು 300 ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ.
ಕೌಟುಂಬಿಕ ಕಥೆಯುಳ್ಳ ಸಿನಿಮಾದಲ್ಲಿ ನಟಿಸಿರುವ ದರ್ಶನ್ ಗೆ ತಮ್ಮ ಪಾತ್ರದ ಬಗ್ಗೆ ಖುಷಿಯಾಗಿದೆಯಂತೆ, ಸಿನಿಮಾದ ಕ್ರೆಡಿಟ್ ಎಲ್ಲಾವನ್ನು ನಿರ್ದೇಶಕರಿಗೆ ನೀಡಿರುವ ದರ್ಶನ್, ತಾರಕ್ ನ ನಿಜವಾದ ನಾಯಕ ಪ್ರಕಾಶ್ ಜಯರಾಂ ಎಂದು ಹೇಳಿದ್ದಾರೆ. ಅವರೊಬ್ಬ ವೆರಿ ವೆಲ್ ಪ್ಲಾನೆಡ್ ನಿರ್ದೇಶಕ, ಎಂದು ಹೇಳಿರುವ ದರ್ಶನ್ ಅವರ ನಿಖರತೆ ಹಾಗೂ ಪ್ರಯತ್ನಾಶೀಲತೆಗಳ ಬಗ್ಗೆ ಉದಾಹರಣೆ ನೀಡಿದ್ದಾರೆ.
ತಾರಕ್ ಸಿನಿಮಾದ ಬಹಭಾಗ ಚಿತ್ರೀಕರಣ ಯೂರೋಪ್ ನಲ್ಲಿ ನಡೆಯಿತು,  ಇಟಲಿ ಮತ್ತು ಸ್ವಿಟ್ಜರ್ ಲೆಂಡ್ ನ ಆರು ಸ್ಥಳಗಳಲ್ಲಿ ಶೂಟಿಂಗ್ ನಡೆಸಿದವು. 21 ದಿನಗಳಲ್ಲಿ ನಾವು 3 ಸಾವಿರ ಕಿಮೋ ಪ್ರಯಾಣ ಮಾಡಿದೆವು. ಅದರೆ ಜೊತೆಗೆ ಹಾಡು ಮತ್ತು ಫೈಟಿಂಗ್ ಶೂಟಿಂಗ್ ಕೂಡ ಮುಗಿಸಿದ್ದಾರೆ, ಎಲ್ಲವೂ ನಿರ್ಧರಿತ ಸಮಯದಲ್ಲೇ ಮಾಡಿದ್ದಾರೆ ಎಂದು ದರ್ಶನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ತಾರಕ್ ಸಿನಿಮಾ ಕೌಟುಂಬಿಕ ಮನರಂಜನಾ ಚಿತ್ರವಾಗಿದ್ದು, ಪ್ರೀತಿ ಮತ್ತು ಇನ್ನಿತರ ವಿಷಯಗಳ ಬಗ್ಗೆ ಪಾಠ ಕಲಿಸುತ್ತದೆ ಎಂದು ಹೇಳಿದ್ದಾರೆ, ಚಿತ್ರದಲ್ಲ ದೇವರಾಜ್ ಮತ್ತೊಂದು ಹೈಲೈಟ್, ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಎ,ವಿ ಕೃಷ್ಣ ಕುಮಾರ್ ಸಿನಿಮಾಟೋಗ್ರಫಿ ಮಾಡಿದ್ದಾರೆ ಎಂದು ದರ್ಶನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com