ರಕ್ಷಿತ್ ಶೆಟ್ಟಿ ನಿರ್ಮಾಣದ ಎರಡನೇ ಚಿತ್ರ '777 ಚಾರ್ಲಿ'

ಕಿರಿಕ್ ಪಾರ್ಟ್ ಸಿನಿಮಾ ಯಶಸ್ಸಿನಲ್ಲಿರುವ ರಕ್ಷಿತ್‌ ಶೆಟ್ಟಿ "ಪರಂವಾ ಸ್ಟುಡಿಯೋ' ಮೂಲಕ ಮತ್ತಷ್ಟು ಸಿನಿಮಾ ನಿರ್ಮಿಸುತ್ತಿದ್ದಾರೆ. ಆದರೆ, ಈ ಸಿನಿಮಾಗಳಿಗೆ ...
ಚಾರ್ಲಿ ಜೊತೆ ಅರವಿಂದ್ ಅಯ್ಯರ್
ಚಾರ್ಲಿ ಜೊತೆ ಅರವಿಂದ್ ಅಯ್ಯರ್
ಬೆಂಗಳೂರು: ಕಿರಿಕ್ ಪಾರ್ಟ್ ಸಿನಿಮಾ ಯಶಸ್ಸಿನಲ್ಲಿರುವ ರಕ್ಷಿತ್‌ ಶೆಟ್ಟಿ "ಪರಂವಾ ಸ್ಟುಡಿಯೋ' ಮೂಲಕ ಮತ್ತಷ್ಟು ಸಿನಿಮಾ ನಿರ್ಮಿಸುತ್ತಿದ್ದಾರೆ. ಆದರೆ, ಈ ಸಿನಿಮಾಗಳಿಗೆ ಇತರ ಬ್ಯಾನರ್‌ಗಳು ಕೂಡಾ ಸಾಥ್‌ ನೀಡುತ್ತಿವೆ. ಈಗ ಸೋಲೋ ಆಗಿ "ಪರಂವಾ ಸ್ಟುಡಿಯೋ' 777 ಚಾರ್ಲಿ ಎಂಬ ಮೂಲಕ ಮತ್ತೊಂದು ಸಿನಿಮಾ ನಿರ್ಮಿಸಲು ಸಜ್ಜಾಗಿದೆ.
ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಚಿತ್ರವಿದು. ಈ ಚಿತ್ರದ ಮೂಲಕ ತಮ್ಮ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್‌ ರಾಜ್‌ಗೆ ನಿರ್ದೇಶನದ ಮಾಡಲಿದ್ದಾರೆ.
ಈ ಚಿತ್ರದಲ್ಲಿ ಕಿರಣ್‌ ರಾಜ್‌ ಪ್ರಾಣಿ ಹಾಗೂ ಮನುಷ್ಯನ ಗಾಢ ಸಂಬಂಧದ ಬಗ್ಗೆ ವಿವರಿಸಲಿದ್ದಾರೆ.ಇಡೀ ಚಿತ್ರ ಒಂದು ನಾಯಿ ಹಾಗೂ ಹೀರೋ ಸುತ್ತ ಸುತ್ತುತ್ತದೆಯಂತೆ. "ಇದು ಮನುಷ್ಯ ಹಾಗೂ ಪ್ರಾಣಿಯ ಬಾಂಧವ್ಯದ ಸುತ್ತ ನಡೆಯುವ ಸಿನಿಮಾ.
ಯಾವುದೋ ಕಾರಣಕ್ಕೆ ಡಿಪ್ರೆಸ್ಸನ್ ನಲ್ಲಿರುವ  ನಾಯಕ ನಟ ಏಕಾಂಗಿಯಾಗಿರುತ್ತಾನೆ. ಕಂಪೆನಿಯಲ್ಲೂ ಯಾರೊಂದಿಗೆ ಬೆರೆಯದೇ ಸಿಂಗಲ್‌ ಆಗಿ ಇರುವ ನಾಯಕನಿಗೆ ಮಾಲೀಕನಿಂದ ತಪ್ಪಿಸಿಕೊಂಡು ಬೀದಿ ಸುತ್ತುವ ನಾಯಿಯೊಂದು ಎಂಟ್ರಿಕೊಡುತ್ತದೆ. ತುಂಬಾ ಆ್ಯಕ್ಟೀವ್‌ ಆಗಿರುವ ಆ ನಾಯಿ ಆತನ ಲೈಫ್ಗೆ ಎಂಟ್ರಿಕೊಟ್ಟ ತಕ್ಷಣ ಆತನ ಜೀವನವೇ ಬದಲಾಗುತ್ತದೆ.
ಆ ಬದಲಾವಣೆಗೆ ಕಾರಣ ಏನು, ಆ ಪ್ರಕ್ರಿಯೆಯಲ್ಲಿ ಏನೆಲ್ಲಾ ನಡೆಯುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ' ಎಂದು ಚಿತ್ರದ ಬಗ್ಗೆ ವಿವರ ಕೊಡುತ್ತಾರೆ ಕಿರಣ್‌ ರಾಜು.
ಸದ್ಯ "ಭೀಮಸೇನ ನಳಮಹಾರಾಜ'ದಲ್ಲಿ ನಟಿಸುತ್ತಿರುವ ಅರವಿಂದ್‌ಗೆ ನಾಯಕರಾಗಿ ಇದು ಎರಡನೇ ಸಿನಿಮಾ.ವಾಗಿದೆ. 
ಚಾರ್ಲಿ ಸಿನಿಮಾ ಮುಂದಿನ ವರ್ಷದ ಜನವರಿ ತಿಂಗಳಿಂದ ಆರಂಭವಾಗಲಿದೆ, ಚಾರ್ಲಿಯ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ಅರವಿಂದ್ ಕೂಡ ತರಬೇತಿ ಪಡೆಯುತ್ತಿದ್ದಾರೆ. ನಾಯಕ ಮತ್ತು ಚಾರ್ಲಿ ನಡುವೆ ಹೆಚ್ಚಿನ ಬಾಂಧವ್ಯ ಬೆಳೆಯುವಂತೆ ಅನುಕೂಲಕರ ವಾತಾವರಣ ಕಲ್ಪಿಸುತ್ತಿದ್ದೇವೆ ಎಂದು ಕಿರಣ್ ರಾಜ್ ಹೇಳಿದ್ದಾರೆ.
ನಾಯಿಗಳ ಮೇಲಿನ ತಮ್ಮ ಪ್ರೀತಿ ಸಿನಿಮಾ ನಿರ್ದೇಶನಕ್ಕೆ ಸಹಾಯವಾಗುತ್ತಿದೆ, ನನ್ನ ಜೀವನದ ಕೆಲ ವಯಕ್ತಿಕ ಅನುಭವಗಳನ್ನು ಕೂಡ ಸಿನಿಮಾದಲ್ಲಿ ಅಳವಡಿಸಲಾಗಿದೆ.  ಚಾರ್ಲಿ ಸಿನಿಮಾ  ಮನೋರಂಜನಾತ್ಮಕವಾಗಿದ್ದು, ಪ್ರಾಣಿ ಪ್ರಿಯಾರಿಗೆ ಸಿನಿಮಾ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ. 
ಚಿತ್ರಕ್ಕೆ ನಾಬಿನ್‌ ಪೋಲ್‌ ಸಂಗೀತ, ಅರುಣ್‌ ಕಶ್ಯಪ್‌ ಛಾಯಾಗ್ರಹಣವಿದೆ. ಉಳಿದ ಕಲಾವಿದರ ಆಯ್ಕೆ ಶೀಘ್ರವೇ ನಡೆಯಲಿದೆ ಎಂದು ಹೇಳಿದ್ದಾರೆ,  ಚಿತ್ರಕಥೆ ಅಂತಿಮವಾದ ನಂತರ ಮಡಿಕೇರಿ ಹಾಗೂ ಚಿಕ್ಕಮಗಳೂರು ಸುತ್ತ ಶೂಟಿಂಗ್ ನಡೆಯಲಿದೆ. 
ನಿರ್ದೇಶಕ ಕಿರಣ್ ರಾಜ್ ಗೆ ಚಿಕ್ಕಂದಿನಿಂದಲೂ ನಾಟಕದ ಬಗ್ಗೆ ಹೆಚ್ಚಿನ ಒಲವು, 10ನೇ ತರಗತಿ ಪೂರ್ಣಗೊಂಡ ನಂತರ, ಆರ್ಥಿಕ ಸಂಕಷ್ಟದಿಂದಾಗಿ ಕಾಲೇಜು ವಿದ್ಯಾಭ್ಯಾಸ ಸ್ಥಗಿತಗೊಳಿಸಲಾಯಿತು. ಹೀಗಾಗಿ ಕರೆಸ್ಪಾಂಡೆನ್ಸ್ ನಲ್ಲಿ ಪದವಿ ಮುಗಿಸಿದರು,  ಬಾರ್ ನಲ್ಲಿ ವೈಟರ್,  ನಂತರ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್,ಸೇರಿದಂತೆ ಹಲವು ನೌಕರಿಗಳನ್ನು ಮಾಡಿದರು. ಆದರೆ ತಮ್ಮ ನಾಟಕದ ಹುಚ್ಚು ಮಾತ್ರ ಅಂತ್ಯಗೊಳ್ಳಲಿಲ್ಲ, ನಾನು ಶಾಲೆಯಲ್ಲಿದ್ದಾಗ ನನ್ನ ಕಥೆಗಳನ್ನು ನಾನು ಬರೆಯುತ್ತಿದ್ದೆ. ಅದನ್ನು ನಾನು ಅಭಿನಯ ಕೂಡ ಮಾಡುತ್ತಿದ್ದೆ. ನಂತರ ನಾನು ಬೆಂಗಳೂರಿಗೆ ಬಂದು ಸಿನಿಮಾ ಮಾಡುವ ಕನಸು ಕಾಣಲು ಆರಂಭಿಸಿದೆ ಎಂದು ಕಿರಣ್ ರಾಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com