
ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ರ್ಯಾಂಬೊ2 ಚಿತ್ರದ ಸಂಗೀತ ಹೆಚ್ಚು ಸದ್ದು ಮಾಡುತ್ತಿದೆ.
ದಮ್ ಮಾರೊ ದಮ್ ಮತ್ತು ಯವ ಯವ ಹಾಡುಗಳನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಮೂರನೇ ಹಾಡು ಚುಟ್ಟು ಚುಟ್ಟುವನ್ನು 1.40 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಮತ್ತೊಂದು ಹಾಡು ಬಿಟ್ ಹೋಗ್ಬೇಡಾ ಕೂಡ ಹಿಟ್ ಆಗಿದೆ.
ರ್ಯಾಂಬೊ 2 ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಸಂತೋಷ್ ನಾಯಕ್ ಮತ್ತು ಗೌಸ್ ಪೀರ್ ಅವರ ಸಾಹಿತ್ಯವಿದೆ. ಇದನ್ನು ಸರಿಗಮಪ 13ನೇ ಸೀಸನ್ ನ ರನ್ನರ್ ಅಪ್ ಮೆಹಬೂಬ ಹಾಡಿದ್ದಾರೆ. ದೃಷ್ಟಿದೋಷವುಳ್ಳ ಮೆಹಬೂಬ ಹಾಡನ್ನು ಪ್ರತಿಯೊಬ್ಬರೂ ಇಷ್ಟಪಟ್ಟಿದ್ದಾರೆ.
ಚಿತ್ರದ ಐದನೇ ಹಾಡು ಟ್ರಂಪ್ ಕಾರ್ಡ್ ಟ್ರಾಕ್ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಕೊನೆಯ ಹಾಡಿನಲ್ಲಿ ಐವರು ನಟರು ನಟ ಶರಣ್ ಜೊತೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಲಡ್ಡೂ ಸಿನಿಮಾಸ್ ನಡಿ ಚಿತ್ರ ತಯಾರಾಗಿದ್ದು ಇದನ್ನು ನಟ ಶರಣ್ ಮತ್ತು ತಂತ್ರಜ್ಞರು ಒಟ್ಟು ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ನಿರ್ದೇಶನದ ರ್ಯಾಂಬೊ2 ಇದೇ ತಿಂಗಳು 12ರಂದು ಬಿಡುಗಡೆಯಾಗಲಿದೆ.
Advertisement