ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್-5 ಕಾರ್ಯಕ್ರಮದ ರನ್ನರ್ ಅಪ್ ದಿವಾಕರ್ ನಟನಾ ವೃತ್ತಿಗೆ ಕಾಲಿರಿಸಿದ್ದಾರೆ, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಕಾಮನ್ ಮ್ಯಾನ್ ದಿವಾಕರ್ ಹಲವು ಚಿತ್ರ ನಿರ್ದೇಶಕರ ಗಮನ ಸೆಳೆದಿದ್ದರು.
ಮನೋರಂಜನ್ ನಟನೆಯ ಚಿಲಂ ಎಂಬ ಹಾಸ್ಯ ಪ್ರಧಾನ ಚಿತ್ರವನ್ನು ಚಂದ್ರಕಲಾ ನಿರ್ದೇಶಿಸುತ್ತಿದ್ದು, ಸಿನಿಮಾದಲ್ಲಿ ದಿವಾಕರ್ ಕೂಡ ನಟಿಸುತ್ತಿದ್ದಾರೆ.
ಬಿಗ್ ಬಾಸ್ ಗೆ ಬರುವ ಮುನ್ನ ಸೇಲ್ಸ್ ಮ್ಯಾನ್ ಆಗಿದ್ದ ದಿವಾಕರ್ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ. ಕನ್ನಡ ಚಿತ್ರರಂಗ ಪ್ರವೇಶಕ್ಕೆ ದಿವಾಕರ್ ಗೆ ಬಿಗ್ ಬಾಸ್ ಏಣಿಯಾಗಿದೆ.
ಇನ್ನೂ ಚಿಲಂ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಮತ್ತು ಸರಿತಾ ಮುಂತಾದವರು ಅಭಿನಯಿಸಿದ್ದಾರೆ, ಏಪ್ರಿಲ್ ನಲ್ಲಿ ಸಿನಿಮಾ ಮೂಹೂರ್ತ ನಡೆಯಲಿದ್ದು, ನಾಯಕಿಗಾಗಿ ಹುಡುಕಾಟ ಆರಂಭವಾಗಿದೆ, ಪ್ರಮುಖ ಪಾತ್ರಕ್ಕಾಗಿ ಚಿತ್ರತಂಡ ನಾನಾ ಪಾಟೇಕರ್ ಅಥವಾ ಕಿಶೋರ್ ಅವರನ್ನು ಕರೆ ತರುವ ಸಾಧ್ಯತೆಯಿದೆ.