ಬೆಂಗಳೂರು: ಕನ್ನಡ ಚಿತ್ರೋದ್ಯಮಕ್ಕೆ ಹೊಸತನ್ನು ನೀಡಬೇಕೆಂದು ಬಯಸುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಿವಿಧ ಇಂಡಸ್ಟ್ರಿಗಳಿಂದ ಕತೆಗಳನ್ನು ತಂದು ಕನ್ನಡದಲ್ಲಿ ಸಿನಿಮಾ ಮಾಡುತ್ತಾರೆ.
ಯಾವುದೇ ಸಿನಿಮಾ ತನ್ನ ಭಾಷೆಯ ಆಧಾರದ ಮೇಲಿರುತ್ತದೆ ಎಂದು ನಂಬಿರುವ ವೆಂಕಟೇಶ್, ಕನ್ನಡ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ನಿರ್ಮಿಸಿದ್ದಾರೆ, ಬಾಲಿವುಡ್ ಜೊತೆಗೆ ಈಗ ಮರಾಠಿ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.
ಟೋ ಟಿ ಟಾನಿ ಇಸ್ರಾ ಎಂಬ ಮರಾಠಿ ಸಿನಿಮಾ ನಿರ್ಮಾಣಕ್ಕೆ ವೆಂಕಟೇಶ್ ಕೈ ಹಾಕಿದ್ದಾರೆ. ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಸ್ವಾಪ್ನಿಲ್ ಜೋಶಿ ನಟಿಸುತ್ತಿದ್ದಾರೆ. ಕಳೆದ ವಾರ ಸಿನಿಮಾದ ಮೂಹೂರ್ತ ನಡೆದಿದ್ದು ಶೂಟಿಂಗ್ ಆರಂಭವಾಗಿದೆ.
ಸೈರಟ್ ನಂತರ ಸಿನಿಮಾಗಳು ಮರಾಠಿ ಚಿತ್ರೊದ್ಯಮಕ್ಕೆ ನನ್ನನ್ನು ಆಕರ್ಷಿಸಿದೆ ಅಲ್ಲಿ ಉತ್ತಮ ಸಿನಿಮಾಗಳು ಮೂಡಿ ಬರುತ್ತಿವೆ ಎಂದು ಹೇಳಿದ್ದಾರೆ, ಸಚಿನ್ ಕಾಂಬ್ಳೆ ಅಶೋಕ್ ಕಶ್ಯಪ್ ಕೂಡ ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.