ದರ್ಶನ್ ಮತ್ತು ನಿರ್ದೇಶಕ ತರುಣ್ ಸುದೀರ್ ಸಿನಿಮಾ ಮಾಡುತ್ತಿರುವುದು ಹಳೆ ವಿಷಯ. ಇದಕ್ಕೆ ಉಮಾಪತಿ ಬಂಡವಾಳ ಹೂಡುತ್ತಿದ್ದಾರೆ ಎಂಬುದು ಇತ್ತೀಚಿನ ಸುದ್ದಿ.
ಆರಂಭದಲ್ಲಿ ಉಮಾಪತಿ ನಿರ್ದೇಶಕ ಪ್ರೇಮ್ ಅವರ ಚಿತ್ರವನ್ನು ನಿರ್ಮಾಣ ಮಾಡುತ್ತಾರೆ ಎನ್ನಲಾಗುತ್ತಿತ್ತು. ಆದರೆ ಇದೀಗ ತರುಣ್ ನಿರ್ದೇಶನದ ದರ್ಶನ್ ಸಿನಿಮಾಕ್ಕೆ ಉಮಾಪತಿ ಬಂಡವಾಳ ಹೂಡುತ್ತಿದ್ದಾರೆ.
ಚೌಕ ನಿರ್ದೇಶಕ ತರುಣ್ ಸುದೀರ್ ವರ್ಷದ ಹಿಂದೆಯೇ ದರ್ಶನ್ ರಿಂದ ಗ್ರೀನ್ ಸಿಗ್ನಲ್ ಪಡೆದಿದ್ದರು. ಈಗಾಗಲೇ ಸ್ಕ್ರಿಪ್ಟ್ ಸಿದ್ದವಾಗಿದ್ದು ಯಾವಾಗ ಬೇಕಾದರೂ ಯೋಜನೆ ಆರಂಭಿಸಬಹುದು. ಮುನಿರತ್ನ ಅವರ ಕುರುಕ್ಷೇತ್ರದ ಡಬ್ಬಿಂಗ್ ಮತ್ತು ಹೊಸ ಚಿತ್ರ ಯಜಮಾನದಲ್ಲಿ ಬ್ಯುಸಿಯಾಗಿರುವ ದರ್ಶನ್ ಏಪ್ರಿಲ್ 6ರಿಂದ ಎರಡನೇ ಶೆಡ್ಯೂಲ್ ಚಿತ್ರೀಕರಣ ಆರಂಭಿಸಲಿದ್ದಾರೆ. ಅವರ ಮುಂದಿನ ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಜೊತೆಗೆ, ನಂತರ ಸುದೀರ್ ಪ್ರಾಜೆಕ್ಟ್ ನ್ನು ಕೈಗೆತ್ತಿಕೊಳ್ಳಲಿದ್ದಾರೆ.
ಚಿತ್ರದ ಬಗ್ಗೆ ಹೆಚ್ಚಿನ ವಿವರ ನೀಡುವುದು ಸದ್ಯಕ್ಕೆ ಸಾಧ್ಯವಿಲ್ಲವಾದರೂ ಇದರ ಅಧಿಕೃತ ಘೋಷಣೆಗೆ ತರುಣ್ ಸುಧೀರ್ ಮತ್ತು ಉಮಾಪತಿ ಕಾಯುತ್ತಿದ್ದಾರೆ.
Advertisement