’ಕೃಷ್ಣ ತುಳಸಿ’ ಗಾಗಿ ಅಂಧನಾದ ಸಂಚಾರಿ ವಿಜಯ್

ಈ ವಾರ ತೆರೆಕಂಡ ಆರು ಚಿತ್ರಗಳಲ್ಲಿ ಸಂಚಾರಿ ವಿಜಯ್ ಅಭಿನಯದ ’ಕೃಷ್ಣ ತುಳಸಿ’ ಸಹ ಒಂದಾಗಿದೆ.
ಸಂಚರಿ ವಿಜಯ್
ಸಂಚರಿ ವಿಜಯ್
Updated on
ಬೆಂಗಳೂರು: ಈ ವಾರ ತೆರೆಕಂಡ ಆರು ಚಿತ್ರಗಳಲ್ಲಿ ಸಂಚಾರಿ ವಿಜಯ್ ಅಭಿನಯದ ’ಕೃಷ್ಣ ತುಳಸಿ’ ಸಹ ಒಂದಾಗಿದೆ.
"ಈ ವಾರ ಯಾವುದೇ ದೊಡ್ಡ ಸ್ಟಾರ್ ಗಳ ಚಿತ್ರ ತೆರೆಗೆ ಬರುತ್ತಿಲ್ಲ, ಹೀಗಾಗಿ ನಮಗೆ ಸುಲಭವಾಗಿ ಚಿತ್ರಮಂದಿರಗಳು ಲಭ್ಯವಾದವು. ನಾನು ಅಭಿನಯಿಸುವ ಹೆಚ್ಚಿನ ಚಿತ್ರಗಳು ಹೊಸ ತಲೆಮಾರಿನ ನಿರ್ಮಾಪಕ, ನಿರ್ದೇಶಕರಿಂಡ ಕೂಡಿರಲಿದೆ.ಒಂದಾದ ಮೇಲೆ ಒಂದರಂತೆ ಚಿತ್ರ ಬಿಡುಗಡೆಯಾಗುವ ಕಾರಣ ನಾನು ತುಸು ಒತ್ತಡದಲ್ಲಿದ್ದೇನೆ" ಚಿತ್ರದ ನಾಯಕ ನಟ ಸಂಚಾರಿ ವಿಜಯ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ತಾವು ದೃಷ್ಟಿದೋಷವುಳ್ಳ ವ್ಯಕ್ತಿಯಾಗಿ ಅಭಿನಯಿಸಿದ್ದ ’ಕೃಷ್ಣ ತುಳಸಿ’ ಚಿತ್ರದ ಕುರಿತಂತೆ ಸಂಚಾರಿ ವಿಜಯ್ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಸುಖೇಶ್ ನಾಯಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
"ಇದು ದೃಷ್ಟಿದೋಷವುಳ್ಳ ವ್ಯಕ್ತಿಯೊಬ್ಬನ ಪ್ರೇಮ ಕಥೆಯಾಗಿದೆ" ಎನ್ನುವ ನಟ ವಿಜಯ್ "ನಾನು ಈ ಮುನ್ನ ದೃಷ್ಟಿದೋಷವುಳ್ಳ ವ್ಯಕ್ತಿಯ ಕಥೆಗೆ ಸಂಬಂಧಿಸಿದಂತೆ ಒಂದು ಸ್ಕ್ರಿಪ್ಟ್ ತಯಾರಿಸಿದ್ದೆ. ಆದರೆ ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ದೊರಕಿದ ಕಾರಣ ನನ್ನ ಸ್ಕ್ರಿಪ್ಟ್ ನ್ನು ಇದೇ ಪಾತ್ರದಲ್ಲಿ ಅಳವಡಿಸಿಕೊಂಡಿದ್ದೇನೆ" ಎಂದರು.
ನನಗೆ ಮೊದಲಿನಿಂದಲೂ ಸವಾಲೊಡ್ಡುವ ಪಾತ್ರಗಳಲ್ಲಿ ಅಭಿನಯಿಸುವುದು ಇಷ್ಟ ಆದರೆ ಈ ಬಾರಿ ದೃಷ್ಟಿದೋಷವುಳ್ಳ ಪಾತ್ರದಲ್ಲಿ ಅಭಿನಯಿಸುವುದು ತುಸು ಕಠಿಣವಾಗಿತ್ತು ಎಂದ ವಿಜಯ್ "ನಾನು ಅದೃಷ್ಟವಂತ, ಹೀಗಾಗಿ ನನಗೆ ಇಂತಹಾ ಅದ್ಭುತ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ದೊರಕುತ್ತಿದೆ" ಎಂದರು.
ಈ ಚಿತ್ರದ ನನ್ನ ಪಾತ್ರ ಒಳ್ಳೆಯದೋ, ಕೆಟ್ಟದೊ ಎನ್ನುವುದು ಸರ್ವೇ ಸಾಧಾರಣ ಪ್ರಶ್ನೆ ಆದರೆ  ಅಂತಹ ಪಾತ್ರಗಳನ್ನು ನಿರ್ವಹಿಸುವುದು ಮಾತ್ರ ಸಾಮಾನ್ಯಕೆಲಸವಲ್ಲ. "ನೀವು ನಿಮ್ಮ ಕಣ್ಮುಂದಿನ ಜಗತ್ತನ್ನು ಕಾಣುತ್ತಿದ್ದೀರೆಂದಾದರೆ ಸಹ ಕುರುಡರಂತೆ ಆಭಿನಯಿಸಬೇಕೆನ್ನುವುದು ಅತ್ಯಂತ ಕ್ಲಿಷ್ಟಕರ ಸಂಗತಿ. ಚಿತ್ರೀಕರಣದ ಮೊದಲ ಮೂರು ದಿನಗಳಲ್ಲಿ ನಾನು ಸಾಕಷ್ಟು ಒತ್ತಡ, ನಿರಾಶೆ ಅನುಭವಿಸಬೇಕಾಗಿತ್ತು ಅವರು ಹೇಳಿದ್ದಾರೆ.
ಸಂಚಾರಿ ವಿಜಯ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮುನ್ನ ದೃಷ್ಟಿ ವಿಕಲಚೇತನರಿಂದ ಕೆಲ ಕಾಲ ತರಬೇತಿಯನ್ನು ಪಡೆದುಕೊಂಡಿದ್ದರು. ಇದು ಅವರಿಗೆ ಈ ಪಾತ್ರದಲ್ಲಿ ಸುಲಭವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಿತ್ತು.
"ನಾನು ಕೆಂಗೇರಿಯಲ್ಲಿನ ಬೆಳಕು ಆಸ್ಪತ್ರೆಗೆ ತೆರಳಿ ಅಲ್ಲಿದ್ದ ದೃಷ್ಟಿ ವಿಕಲಚೇತನರಿಂದ ಕೆಲ ಸಲಹೆಗಳನ್ನು ಪಡೆದುಕೊಂಡಿದ್ದೇನೆ. ದೃಷ್ಟಿ ವಿಕಲಚೇತನರು ತಾವು ಫೋನ್ ಮೂಲಕ ಕ್ಯಾಬ್ ಬುಕ್ ಮಾಡುವುದು, ಅಡಿಗೆ ಮಾಡುವುದು, ಆಟಗಳನ್ನು ಆಡುವುದು ಕಂಡು ನನಗೆ ನಿಜಕ್ಕೂ ಅಚ್ಚರಿಯಾಗಿತ್ತು. 
ಈ ಚಿತ್ರದಲ್ಲಿ ಸುಮಾರು ಐವತ್ತರಿಂದ ಅರವತ್ತು ಮಂದಿ ದೃಷ್ಟಿ ವಿಕಲಚೇತನರು ಅಭಿನಯಿಸಿದ್ದಾರೆ. ಅವರು ನನಗೆ ಸ್ಪೂರ್ತಿಯಾಗಿದ್ದಾರೆ, ಸಂಚಾರಿ ವಿಜಯ್ ಹೇಳಿದ್ದಾರೆ.
ನಾರಾಯಣ ಸ್ವಾಮಿ ನಿರ್ಮಾಣದ ’ಕೃಷ್ಣ ತುಳಸಿ’ ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತವಿದ್ದು ನವೀನ್ ಅಕ್ಷಿ ಛಾಯಾಗ್ರಹಣವನ್ನು ಒಳಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com